Asianet Suvarna News Asianet Suvarna News

ಕಿಮ್‌ ಜಾಂಗ್‌ ಉನ್‌ 'ಪ್ಲೆಶರ್‌ ಸ್ಕ್ವಾಡ್‌', ವೇಶ್ಯಾವಾಟಿಕೆ ಕೂಪಕ್ಕೆ ಶಾಲಾ ಬಾಲಕಿಯರು!

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ನ ಅನಾರೋಗ್ಯದ ಬಗ್ಗೆ ವರದಿಗಳು ಬರುವ ವೇಳೆಗೆ ಅವರ ಸೀಕ್ರೆಟ್‌ ಪ್ಲೆಶರ್‌ ಸ್ಕ್ವಾಡ್‌ ಬಗ್ಗೆ ಜಗತ್ತಿಗೆ ತಿಳಿದುಬಂದಿದೆ. ಈಗಾಗಲೇ ಪ್ಲೆಶರ್‌ ಸ್ಕ್ವಾಡ್‌ ಕಿಮ್‌ ಸರ್ಕಾರದಲ್ಲಿ ಸ್ಥಾಪನೆಯಾಗಿದೆ. ಇದಲ್ಲಿ ಇರುವವರು ಎಲ್ಲರೂ ಶಾಲಾ ಬಾಲಕಿಯರು. ಕಿಮ್‌ನ ಮುಂದೆ ನೃತ್ಯ ಮಾಡುವುದು, ಲೈಂಗಿಕ ಬಯಕೆ ಈಡೇರಿಸುವುದೇ ಇವರ ಕೆಲಸವಾಗಿದೆ.
 

Kim Jong Un Secret Pleasure Squad Schoolgirls in North Korea are being made sex workers san
Author
First Published Nov 30, 2022, 8:21 PM IST

ನವದೆಹಲಿ (ನ.30): ನಾವು ಎಷ್ಟೇ ಮುಂದುವರಿದಿದ್ದರೂ, ಜಗತ್ತಿನ ಕೆಲವು ದೇಶಗಳ ಮಾಹಿತಿಗಳು ಈಗಲೂ ಕೂಡ ನಮಗೆ ಸಿಗೋದಿಲ್ಲ. ಅಲ್ಲಿನ ಕೆಟ್ಟ ಸಂಗತಿಗಳು ಹೋಗಲಿ, ಉತ್ತಮ ಸಂಗತಿಗಳ ಬಗ್ಗೆಯೂ ಮಾಹಿತಿ ಸಿಗೋದಿಲ್ಲ. ಆ ರೀತಿಯ ದೇಶ ಉತ್ತರ ಕೊರಿಯಾ. ಉತ್ತರ ಕೊರಿಯಾದ ಹುಚ್ಚು ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌, ಕಳೆದ 10 ದಿನಗಳ ಎರಡು ಬಾರಿ ತಮ್ಮ ಮಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಬಹುತೇಕ ತಮ್ಮ ಜೀವನವನ್ನು ನಿಗೂಢವಾಗಿಯೇ ಕಳೆದಿರುವ ಕಿಮ್‌ ಜಾಂಗ್‌ ಉನ್‌ ಪಾಲಿನ ದೊಡ್ಡ ಹೆಜ್ಜೆ ಇದು ಎಂದರೆ ತಪ್ಪಾಗಲಾರದು. ಒಂದೆಡೆ ತಮ್ಮ 9 ವರ್ಷದ ಮಗಳಿಗೆ ಮುಂದಿನ ಜೀವನದ ಬಗ್ಗೆ ಮಾಹಿತಿಗಳನ್ನು ಕಿಮ್‌ ನೀಡುತ್ತಿರುವ ಹೊತ್ತಿನಲ್ಲಿಯೇ, ಆಕೆಗಿಂತ ಕೆಲವೇ ಕೆಲವು ವರ್ಷ ದೊಡ್ಡವರಾಗಿರುವ ಬಾಲಕಿಯರನ್ನು ಕಿಮ್‌ ಜಾಂಗ್‌ ಉನ್‌ನ ಅಧಿಕಾರಿಗಳು ಆಯ್ಕೆ ಮಾಡಿ ಪ್ಲೆಶರ್‌ ಗ್ರೂಪ್‌ಗೆ ಸೇರಿಸುವ ಕೆಲಸ ಮಾಡುತ್ತಿದ್ದಾರೆ. ಉತ್ತರ ಕೊರಿಯಾದ ನಾಯಕರು ಹಾಗೂ ಅಧಿಕಾರಿಗಳನ್ನು ರಂಜಿಸುವುದು, ಅವರ ಮುಂದೆ ನೃತ್ಯ ಮಾಡುವುದು ಹಾಗೂ ಲೈಂಗಿಕ ಬಯಕೆಗಳನ್ನು ಈಡೇರಿಸುವುದೇ ಅವರ ಪ್ರಮುಖ ಕೆಲಸವಾಗಿದೆ.

ಉತ್ತರ ಕೊರಿಯಾದಲ್ಲಿ ಇರುವಂಥ ಸರ್ವಾಧಿಕಾರ ಬಹುಶಃ ಯಾವ ದೇಶಗಳಲ್ಲೂ ಇದ್ದಿರುವುದು ಅನುಮಾನ. ಉತ್ತರ ಕೊರಿಯಾದಿಂದ ಓಡಿ ಬಂದಿರುವ ವ್ಯಕ್ತಿಗಳು ಬರೆದಿರುವ ಪುಸ್ತಕದಲ್ಲಿ ಆ ದೇಶದ ಜನರ ಬವಣೆಗಳನ್ನು ಎಳೆಎಳೆಯಾಗಿ ವಿವರಿಸಿದ್ದಾರೆ. ಉತ್ತರ ಕೊರಿಯಾದಿಂದ ಓಡಿ ಬಂದಿರುವ ಬಾಲಕಿಯೊಬ್ಬಳ ಸಂದರ್ಶಣವನ್ನು ಇತ್ತೀಚೆಗೆ ಮಾಡಲಾಗಿದ್ದು, ಕಳೆದ ಕೆಲವು ವರ್ಷಗಳಿಂದ, ಉತ್ತರ ಕೊರಿಯಾದ ಶಾಲಾ ಬಾಲಕಿಯರ ವಿಚಾರದಲ್ಲಿ ದೊಡ್ಡ ಮಟ್ಟದ ಅನಾಚಾರ ನಡೆಯುತ್ತಿದೆ. ಶಾಲೆಯಿಂದಲೇ ಬಾಲಾ ಬಾಲಕಿಯರನ್ನು ಆಯ್ಕೆ ಮಾಡಿ ಅವರನ್ನು ಪ್ಲೆಶರ್‌ ಸ್ಕ್ವಾಡ್‌ನಲ್ಲಿ ಲೈಂಗಿಕ ಕಾರ್ಯಗಳಿಗೆ ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಉತ್ತರ ಕೊರಿಯಾದಲ್ಲಿ ಉನ್ನತ ಅಧಿಕಾರಿಗಳನ್ನು ಮನರಂಜಿಸಲು ಪ್ಲೆಶರ್‌ ಸ್ಕ್ವಾಡ್ ಎಂಬ ಅಪ್ರಾಪ್ತ ಶಾಲಾ ಬಾಲಕಿಯರ ತಂಡವನ್ನು ರಚನೆ ಮಾಡಲಾಗಿದೆ. 13 ವರ್ಷ ವಯಸ್ಸಿನ ಹುಡುಗಿಯರನ್ನು ಪ್ಲೆಶರ್‌ ಸ್ಕ್ವಾಡ್‌ನಲ್ಲಿ ನೇಮಿಸಿಕೊಳ್ಳಲಾಗುತ್ತದೆ. ಸರ್ಕಾರ ಹಾಗೂ ಸೇನೆಯ ಅಧಿಕಾರಿಗಳಿಗೆ ಮನರಂಜನೆ ನೀಡುವುದು ಈ ಸ್ಕ್ವಾಡ್‌ನ ಕೆಲಸ ಅಗಿರುತ್ತದೆ.

ಸ್ವತಃ ಉತ್ತರ ಕೊರಿಯಾದ ಸೇನೆಯು ಈ ಎಳೆಯ ಬಾಲಕಿಯರ ಆಯ್ಕೆಯನ್ನು ಮಾಡುತ್ತದೆ ಎಂದು 'ದಿ ಮಿರರ್‌' ಪತ್ರಿಕೆ ವರದಿ ಮಾಡಿದೆ. ಈ ಬಾಲಕಿಯರನ್ನು ಶಾಲೆಗಳಿಂದ ಆಯ್ಕೆ ಮಾಡಲಾಗುತ್ತದೆ. ಉತ್ತರ ಕೊರಿಯಾದ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳ ಲೈಂಗಿಕ ಪಾರ್ಟಿಗಳಲ್ಲಿ ಇವರು ಸೇವೆ ಮಾಡಬೇಕಾಗಿರುತ್ತದೆ. ಇದನ್ನು ಕಿಮ್‌ ಜಾಂಗ್‌ ಉನ್‌ ಅವರ ಪ್ಲೆಶರ್‌ ಸ್ಕ್ವಾಡ್‌ ಎಂದು ಕರೆಯಲಾಗುತ್ತದೆ. ಈ ಎಲ್ಲಾ ಬಾಲಕಿಯರ ಕನ್ಯತ್ವ ಪರೀಕ್ಷೆಯನ್ನೂ ಮಾಡಲಾಗುತ್ತದೆ. ಈ ಬಾಲಕಿಯರಿಗೆ ಯಾವುದೇ ಚರ್ಮ ಸಂಬಂಧಿ ಕಾಯಿಲೆಗಳು ಇರಬಾರದು ಎನ್ನುವ ಪರೀಕ್ಷೆಯನ್ನೂ ಮಾಡಲಾಗುತ್ತದೆ.

ಮಾಧ್ಯಮಗಳ ವರದಿಯ ಪ್ರಕಾರ, ಉತ್ತರ ಕೊರಿಯಾದಲ್ಲಿ ಬಾಲಕಿಯರೇ ಮನರಂಜನೆಯ ಮಾಧ್ಯಮವಾಗಿರುವುದು ಈಗಾಗಲೇ ಹಳೆಯ ವಿಚಾರವಾಗಿದೆ. ಕಿಮ್‌ನ ಅಜ್ಜ ಈ ಪರಂಪರೆಯನ್ನು ಸ್ಥಾಪನೆ ಮಾಡಿದ್ದರು. ನಂತರ ಕಿಮ್‌ನ ತಂದೆ ಇದನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದ್ದರು. ವಿದೇಶದಲ್ಲಿ ವ್ಯಾಸಂಗ ಮುಗಿಸಿರುವ ಕಿಮ್ ಅವರಿಂದ ಈ ಸಂಪ್ರದಾಯದಲ್ಲಿ ಬದಲಾವಣೆಯನ್ನು ಜನ ನಿರೀಕ್ಷೆ ಮಾಡಿದ್ದರು. ಆದರೆ ಅಜ್ಜ, ತಂದೆಯ ಹಾದಿಯಲ್ಲೇ ನಡೆಯುವ ಮೂಲಕ ಉತ್ತರ ಕೊರಿಯಾದಲ್ಲಿ ಬಾಲಕಿಯರ ಮೇಲೆ ನಿರಂತರ ಶೋಷಣೆ ಮುಂದುವರಿದಂತಾಗಿದೆ.

ಹೊಸ ಜಾಹೀರಾತಿನಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ: ಬಿಳಿ ಕುದುರೆ ಏರಿದ ಕಿಮ್ ಜಾಂಗ್ ಸಂದೇಶವೇನು?

ಬಾಲಕಿಯರಿಂದ ಯಾವೆಲ್ಲಾ ಕೆಲಸ ಮಾಡಿಸುತ್ತಾರೆ: 'ಐ ವಾಸ್‌ ಕಿಂಗ್‌ ಜಾಂಗ್‌-2 ಕುಕ್‌' ಎನ್ನುವ ಪುಸ್ತಕದಲ್ಲಿ ಉತ್ತರ ಕೊರಿಯಾದ ಲೈಂಗಿಕ ಶೋಷಿತರ ಬಗೆಗಿನ ಪುಸ್ತಕವಿದ್ದು, ಇದರಲ್ಲಿ 14 ರಿಂದ 30 ವರ್ಷದ ಹುಡುಗಿಯರು ಮಾಡುವ ಕೆಲಸಗಳ ಬಗ್ಗೆ ವಿವರಿಸಲಾಗಿದೆ. ಕೆಲವರು ಮನರಂಜನೆಯ ಕೆಲಸ ಮಾಡಿದರೆ, ಇನ್ನೂ ಕೆಲವರು ಮಸಾಜ್‌ ಕೆಲಸವನ್ನು ಮಾಡುತ್ತಾರೆ. ಒಂದು ಹಂತದ ವಯಸ್ಸು ಮುಗಿದ ಬಳಿಕ ಅವರನ್ನು ಬೇರೆ ವಿಭಾಗಕ್ಕೆ ಕಳಿಸಲಾಗುತ್ತದೆ. ಅಡುಗೆಯಂಥ ಅನೇಕ ಕಾರ್ಯಗಳನ್ನು ಈ ಹುಡುಗಿಯರು ಮಾಡುತ್ತಾರೆ.

ಕಳೆಗುಂದಿದ ಮುಖ: ಕಿಮ್‌ಜಾಂಗ್‌ ಆರೋಗ್ಯದ ಬಗ್ಗೆ ಆತಂಕ!

ಈ ಗುಂಪನ್ನು 'ಪ್ಲೆಶರ್‌ ಗರ್ಲ್‌' ಎನ್ನುವ ಹೆಸರಿನಿಂದ ಕರೆಯುತ್ತಾರೆ. ಸುಂದರವಾಗಿ ಕಾಣು ಹುಡುಗಿಯರು ಈ ಗುಂಪಿನಲ್ಲಿ ಇರುತ್ತಾರೆ. ಪ್ಲೆಶರ್‌ ಗ್ರೂಪ್‌ಗೆ ಸೇರುವ ಹುಡುಗಿಯರು ಮತ್ತೆ ತಮ್ಮ ಹಳೆಯ ಜೀವನಕ್ಕೆ ಬರೋದು ಸಾಧ್ಯವೇ ಇಲ್ಲ.  ಆಯ್ದ ಹುಡುಗಿಯರನ್ನು ವಿವಿಧ ರೀತಿಯ ಕಟ್ಟಡಗಳಲ್ಲಿ ಅವರ ಕುಟುಂಬಗಳಿಂದ ದೂರ ಇರಿಸಲಾಗುತ್ತದೆ. ಅಲ್ಲಿ ಅವರಿಗೆ ಸೂಕ್ತ ತರಬೇತಿ ನೀಡಲಾಗುತ್ತದೆ. ಈ ತರಬೇತಿಯಲ್ಲಿ, ನೃತ್ಯ, ಮನರಂಜನೆ, ಮಸಾಜ್ ಮತ್ತು ಉನ್ನತ ವರ್ಗದ ಜನರೊಂದಿಗೆ ವ್ಯವಹರಿಸುವುದನ್ನು ಕಲಿಸಲಾಗುತ್ತದೆ. ಒಂದು ವಯಸ್ಸು ಪೂರ್ಣಗೊಂಡ ನಂತರ, ಈ ಹುಡುಗಿಯರನ್ನು ಈ ಗುಂಪಿನಿಂದ ಹೊರತೆಗೆಯಲಾಗುತ್ತದೆ ಮತ್ತು ಅವರನ್ನು ಪ್ರತ್ಯೇಕ ವಿಭಾಗದಲ್ಲಿ ಇರಿಸಲಾಗುತ್ತದೆ.

Follow Us:
Download App:
  • android
  • ios