ಮ್ಯಾನ್ಮಾರ್(ಮಾ.10): ಮ್ಯಾನ್ಮಾರ್ ನಗರದ ದೂಳು ತುಂಬುದ ನೆಲದಲ್ಲಿ ಮಂಡಿಯೂರಿ ನಿಂತ ಕ್ರೈಸ್ತ ಸನ್ಯಾಸಿನಿ ಸಿಸ್ಟರ್ ಆನ್ ರೋಸ್ ನು ತವಂಗ್ ಅವರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಶಸ್ತ್ರರಾಗಿ ನಿಂತ ಮಿಲಿಟರಿ ಪೊಲೀಸ್ ಆಫೀಸರ್ಗ ಮುಂದೆ ಮೊಣಕಾಲೂರಿ ನಿಂತ ರೋಸ್ ಮಕ್ಕಳನ್ನು ಸುಮ್ಮನೆ ಬಿಟ್ಟು ಬದಲಿಗೆ ನನ್ನ ಜೀವ ತೆಗೆಯಿರಿ ಎಂದು ಬೇಡಿದ್ದಾರೆ.

ಜನಾಂಗೀಯ ತಾರತಮ್ಯ ಕುರಿತ ಪುತ್ರಿ ಮೇಘನ್‌ ಆರೋಪ ಸುಳ್ಳು: ತಂದೆ

ಕ್ಯಥೋಲಿಕ್ ಕ್ರೈಸ್ತ ಸನ್ಯಾಸಿನಿ ಬಿಳಿ ಉಡುಗೆಯಲ್ಲಿ ಕೈಯನ್ನು ಹರಡಿ ಪ್ರತಿಭಟನಾಕಾರರನ್ನು ಚದುರಿಸಲು ಬಂದ ಸಶಸ್ತ್ರ ಮಿಲಿಟರಿ ಮುಂದೆ ಬೇಡುತ್ತಿರುವ ಫೋಟೋ ನೆಟ್ಟಿಗರ ಮನ ಗೆದ್ದಿದೆ.

ಬಹಳಷ್ಟು ಭೌದ್ಧ ಮೆಜಾರಿಟಿ ಇರೋ ದೇಶದಲ್ಲಿ ಇದು ಮೆಚ್ಚುಗೆಗೆ ಪಾತ್ರವಾಗಿದೆ. ಮಕ್ಕಳಿಗೆ ಶೂಟ್ ಮಾಡಿ ತೊಂದರೆ ನೀಡದೆ ಬದಲಿಗೆ ನನ್ನನ್ನು ಕೊಲ್ಲುವಂತೆ ನಾನು ಕೇಳಿಕೊಂಡೆ ಎಂದು ರೋಸ್ ಹೇಳಿದ್ದಾರೆ.

ಪಾಕಿಸ್ತಾನಕ್ಕೂ ಭಾರತದ ಕೊರೋನಾ ಲಸಿಕೆ!

ಸಿವಿಲಿಯನ್ ಲೀಡರ್ ಆಂಗ್ ಸಾನ್ ಸೂಕಿ ಅವರನ್ನು ಫೆಬ್ರವರಿ 1 ರಂದು ಉಚ್ಚಾಟಿಸಿದ ನಂತರ ಮ್ಯಾನ್ಮಾರ್ ಜನ ಪ್ರತಿಭಟಿಸುತ್ತಿದ್ದ ಮೈಟ್ಕಿನಾ ನಗರದಲ್ಲಿ ಸೋಮವಾರ ಸೋಸ್ ತೋರಿಸಿದ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಜಾಪ್ರಭುತ್ವವನ್ನು ಮತ್ತೆ ತರಬೇಕು ಎಂದು ಒತ್ತಾಯಿಸಿ ಪ್ರತಿಭಟನೆಗಳು ನಡೆಯುತ್ತಿರುವಾಗ, ಮಿಲಿಟರಿ ತನ್ನ ಬಲ ಪ್ರಯೋಗ ಹೆಚ್ಚಿಸಿದೆ. ಅಶ್ರುವಾಯು, ನೀರಿನ ಫಿರಂಗಿ, ರಬ್ಬರ್ ಗುಂಡುಗಳನ್ನು ಬಳಸಿದೆ.

ಪತ್ತೆಯಾಯ್ತು ಬಂಗಾರದ ಬೆಟ್ಟ, ಕುಗ್ರಾಮದ ಮಣ್ಣಿನ ಕಣ ಕಣದಲ್ಲೂ ಚಿನ್ನ!

ಪ್ರತಿಭಟನಾಕಾರರನ್ನು ಮಿಲಿಟರಿ ಸುತ್ತುವರಿದಾಗ ಕ್ರೈಸ್ತ ಸನ್ಯಾಸಿನಿಯರು ಪ್ರತಿಭಟನಾಕಾರರಿಗೆ ಏನೂ ಮಾಡದಂತೆ ಕೇಳಿಕೊಂಡಿದ್ದಾರೆ.

ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಲು ಅಟ್ಟಾಡಿಸುತ್ತಿದ್ದರು. ಅಲ್ಲಿದ್ದ ಚಿಕ್ಕ ಮಕ್ಕಳ ಬಗ್ಗೆ ನಮಗೆ ಚಿಂತೆಯಾಯಿತು. ಈ ಸಂದರ್ಭ 45 ವರ್ಷದ ರೋಸ್ ಮಂಡಿಯೂರಿ ಬೇಡಿದ್ದಾರೆ