Asianet Suvarna News Asianet Suvarna News

ಜನಾಂಗೀಯ ತಾರತಮ್ಯ ಕುರಿತ ಪುತ್ರಿ ಮೇಘನ್‌ ಆರೋಪ ಸುಳ್ಳು: ತಂದೆ

ಬ್ರಿಟನ್‌ ರಾಜಮನೆತನದ ಕುರಿತು ತಮ್ಮ ಪುತ್ರಿ ಮೇಘನ್‌ ಮರ್ಕೆಲ್‌ ಮಾಡಿರುವ ಜನಾಂಗೀಯ ತಾರಮತ್ಯ| ಜನಾಂಗೀಯ ತಾರತಮ್ಯ ಕುರಿತ ಪುತ್ರಿ ಮೇಘನ್‌ ಆರೋಪ ಸುಳ್ಳು: ತಂದೆ

Do Not think the royals are racist says Meghan father pod
Author
Bangalore, First Published Mar 10, 2021, 9:47 AM IST

ಲಂಡನ್(ಮಾ.10)‌: ಬ್ರಿಟನ್‌ ರಾಜಮನೆತನದ ಕುರಿತು ತಮ್ಮ ಪುತ್ರಿ ಮೇಘನ್‌ ಮರ್ಕೆಲ್‌ ಮಾಡಿರುವ ಜನಾಂಗೀಯ ತಾರಮತ್ಯದ ಆರೋಪಗಳನ್ನು ಅವರ ತಂದೆ ಥಾಮಸ್‌ ಮರ್ಕೆಲ್‌ ಅಲ್ಲಗಳೆದಿದ್ದಾರೆ. ನನಗೆ ರಾಜಮನೆತನದ ಬಗ್ಗೆ ಅಪಾರ ಗೌರವವವಿದೆ. ‘ಅವರೆಂದೂ ಜನಾಂಗೀಯ ತಾರತಮ್ಯ ಮಾಡಲು ಸಾಧ್ಯವಿಲ್ಲ. ಬ್ರಿಟನ್ನಿಗರು ಜನಾಂಗೀಯ ತಾರತಮ್ಯ ಮಾಡಲ್ಲ. ಆದರೆ ಅಮೆರಿಕದಲ್ಲಿ ಇಂಥದ್ದು ನಡೆಯುತ್ತದೆ’ ಎಂದು ಹೇಳಿದ್ದಾರೆ. ಈ ನಡುವೆ, ರಾಜಮನೆತನವು ಮೇಘನ್‌ ಆರೋಪದ ಬಗ್ಗೆ ಮೌನ ತಾಳಿದೆ.

ತಾವು ಗರ್ಭಿಣಿಯಾಗಿದ್ದ ವೇಳೆ ಮುಂದೆ ತನಗೆ ಹುಟ್ಟುವ ಮಗುವಿನ ಬಣ್ಣ ಎಷ್ಟುಕಪ್ಪಾಗಿರಬಹುದು ಎಂದು ರಾಜಮನೆತನದಲ್ಲಿ ಚರ್ಚೆ ನಡೆದಿತ್ತು ಎಂದು ಸಂರ್ದಶನದಲ್ಲಿ ಮೇಘನ್‌ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಅವರ ತಂದೆ ಈ ಆರೋಪ ಮಾಡಿದ್ದರು. ತಂದೆ ಜೊತೆಗೆ ಮೊದಲಿನಿಂದಲೂ ಮೇಘನ್‌ ಸಂಬಂಧ ಸರಿಯಿಲ್ಲ.

ಹ್ಯಾರಿ- ಮೇಘನ್‌ ಸಂದರ್ಶನದಿಂದ ಓಪ್ರಾಗೆ 50 ಕೋಟಿ ರು. ಆದಾಯ!

ಬ್ರಿಟನ್‌ನ ಮಾಜಿ ಯುವರಾಜ ಹ್ಯಾರಿ ಮತ್ತು ಮೇಘನ್‌ರ ಸ್ಫೋಟಕ ಸಂದರ್ಶನ ನಡೆಸಿದ ಖ್ಯಾತ ನಿರೂಪಕಿ ಓಪ್ರಾ ವಿನೆ್ೊ್ರೕಗೆ ಸಂದರ್ಶನ ಭರ್ಜರಿ ಲಾಭ ತಂದುಕೊಟ್ಟಿದೆ. ಮೂಲಗಳ ಪ್ರಕಾರ ಈ ಸಂದರ್ಶನವನ್ನು ಅವರು ಅಮೆರಿಕದ ಬಹುಜನಪ್ರಿಯ ಚಾನೆಲ್‌ಗಳ ಪೈಕಿ ಒಂದಾದ ಸಿಬಿಎಸ್‌ಗೆ ಮಾರಾಟ ಮಾಡಿದ್ದರು. ಈ ಸಂದರ್ಶನವನ್ನು ಮೊದಲ ಪ್ರಸಾರದಲ್ಲೇ ಕನಿಷ್ಠ 1.71 ಕೋಟಿ ಜನ ವೀಕ್ಷಿಸಿದ್ದಾರೆ. ಆದರೆ ಸಂದರ್ಶನದಿಂದ ಹ್ಯಾರಿ- ಮೇಘನ್‌ಗೆ ಯಾವುದೇ ಹಣ ಸಂದಾಯವಾಗಿಲ್ಲ.

Follow Us:
Download App:
  • android
  • ios