Asianet Suvarna News Asianet Suvarna News

ಲಂಡನ್‌ನಲ್ಲಿ ಮತ್ತೆ ಖಲಿಸ್ತಾನಿ ಕಿತಾಪತಿ: ಕಚೇರಿ ಮೇಲೆ ನೀರಿನ ಬಾಟಲ್‌ ಎಸೆದು ಪುಂಡಾಟ

ಬ್ರಿಟನ್‌ನಲ್ಲಿ ಖಲಿಸ್ತಾನಿ ಹೋರಾಟಗಾರರ ಪುಂಡಾಟ ಮುಂದುವರೆದಿದ್ದು, ಬುಧವಾರ ಲಂಡನ್‌ನ ಭಾರತೀಯ ರಾಯಭಾರ ಕಚೇರಿ ಎದುರು 2000ಕ್ಕೂ ಹೆಚ್ಚು ಖಲಿಸ್ತಾನಿಗಳು ನೆರೆದು ಪ್ರತಿಭಟನೆ ನಡೆಸಿದ್ದಾರೆ.

Khalistani protest again in London A water bottle was thrown on the Indian Embassy office in London akb
Author
First Published Mar 24, 2023, 9:26 AM IST

ಲಂಡನ್‌: ಬ್ರಿಟನ್‌ನಲ್ಲಿ ಖಲಿಸ್ತಾನಿ ಹೋರಾಟಗಾರರ ಪುಂಡಾಟ ಮುಂದುವರೆದಿದ್ದು, ಬುಧವಾರ ಲಂಡನ್‌ನ ಭಾರತೀಯ ರಾಯಭಾರ ಕಚೇರಿ ಎದುರು 2000ಕ್ಕೂ ಹೆಚ್ಚು ಖಲಿಸ್ತಾನಿಗಳು ನೆರೆದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಭಾರತದ ವಿರುದ್ಧ ಘೋಷಣೆಗಳನ್ನು ಕೂಗಿದ್ದಲ್ಲದೇ ನೀರಿನ ಬಾಟೆಲ್‌ಗಳನ್ನು ಕಚೇರಿಯತ್ತ ಎಸೆದಿದ್ದಾರೆ. ಬ್ರಿಟನ್‌ನ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರತಿಭಟನಾಕಾರರು ರಾಯಭಾರಿ ಕಚೇರಿ ಎದುರು ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳನ್ನು ತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಪ್ರತಿಭಟನೆಯ ಕುರಿತಾಗಿ ಮೊದಲೇ ಮಾಹಿತಿ ಪಡೆದುಕೊಂಡಿದ್ದ ಭದ್ರತಾ ಪಡೆಗಳು ರಾಯಭಾರ ಕಚೇರಿಗೆ ಭದ್ರತೆ ಒದಗಿಸಿದ್ದಾರೆ. ಇದಕ್ಕೂ ಮೊದಲು ಭಾನುವಾರ ದಾಳಿ ನಡೆಸಿದ್ದ ಖಲಿಸ್ತಾನಿ ಬೆಂಬಲಿಗರು (Khalistani supporters) ಭಾರತದ ಧ್ವಜವನ್ನು (Indian flag) ಕೆಳಗಿಳಿಸಿ ಪುಂಡಾಟ ಮಾಡಿದ್ದರು.

ಭಾರತದ ಬಿಸಿಗೆ ಬೆಚ್ಚಿದ ಬ್ರಿಟನ್‌

ಇಲ್ಲಿನ ಭಾರತೀಯ ರಾಯಭಾರಿ ಕಚೇರಿ ಮೇಲೆ ದಾಳಿ ಕುರಿತಾಗಿ ಭಾರತ ಪ್ರತಿಭಟನೆ ವ್ಯಕ್ತಪಡಿಸಿದ ಬೆನ್ನಲ್ಲೇ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಕಚೇರಿಗೆ 2 ಸ್ಥರದ ಭದ್ರತೆಯನ್ನು ಒದಗಿಸಲಾಗಿದೆ. ಖಲಿಸ್ತಾನಿ ಬೆಂಬಲಿಗರು ಬುಧವಾರ ಮತ್ತೊಮ್ಮೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿರುವ ಬ್ರಿಟನ್‌ ರಾಯಭಾರಿ ಕಚೇರಿ (British Embassy) ಎದುರು ಅಳವಡಿಸಲಾಗಿದ್ದ ತಡೆಗೋಡೆಗಳನ್ನು ಭಾರತ ತೆರವುಗೊಳಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಬ್ರಿಟನ್‌ ಆಡಳಿತ ಲಂಡನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಭದ್ರತೆಯನ್ನು ಹೆಚ್ಚು ಮಾಡಿದೆ. ಭದ್ರತಾ ಪಡೆಗಳನ್ನು ನೇಮಕ ಮಾಡಲಾಗಿದ್ದು, ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಅಲ್ಲದೇ ಕಚೇರಿಗೆ 3 ಸ್ಥರದ ಭದ್ರತೆಯನ್ನು ಒದಗಿಸಲಾಗಿದೆ ಎಂದು ಬ್ರಿಟನ್‌ ಆಡಳಿತ (British administration) ಹೇಳಿದೆ. ಅಲ್ಲದೇ ಭಾರತದ ರಾಯಭಾರ ಕಚೇರಿ ಮೇಲೆ ನಡೆದ ದಾಳಿಯನ್ನು ಖಂಡಿಸಿರುವ ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿ ಕ್ಲೆವರ್ಲೀ (British Foreign Secretary Cleverley), ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಅಮೃತಪಾಲ್‌ಗೆ ಆಶ್ರಯ ನೀಡಿದ ಮಹಿಳೆ ಅರೆಸ್ಟ್, ಖಲಿಸ್ತಾನಿ ನಾಯಕನ ಲೋಕೇಶನ್ ಪತ್ತೆ ಹಚ್ಚಿದ ಪೊಲೀಸ್!


ಆತ್ಮಾಹುತಿ ದಾಳಿಕೋರರ ಸಜ್ಜುಗೊಳಿಸುತ್ತಿದ್ದ ಅಮೃತ್‌ಪಾಲ್‌: ಗುರುದ್ವಾರಗಳಲ್ಲಿ ಶಸ್ತ್ರಾಸ್ತ್ರ ಸಂಗ್ರಹ

Follow Us:
Download App:
  • android
  • ios