ಕಾವ್ಯ ಪ್ರದರ್ಶನಕ್ಕಾಗಿಯೇ ಇರುವ ಇಟಲಿಯ ಪಿಯಾಸೆಂಜಾ ಮ್ಯೂಸಿಯಂನಲ್ಲಿ ಅಂಕೋಲಾದ ಕವಯತ್ರಿ ರೇಣುಕಾ ರಮಾನಂದ ಅವರ ಕವಿತೆ ಸ್ಥಾನ ಪಡೆದಿದೆ. 

ಕಾರವಾರ (ಸೆ.28): ಕವಿತೆ, ವಿಶ್ವ ಕಾವ್ಯ ಪ್ರದರ್ಶನಕ್ಕಾಗಿಯೇ ಇರುವ ಇಟಲಿಯ ಪಿಯಾಸೆಂಜಾ ಮ್ಯೂಸಿಯಂನಲ್ಲಿ ಅಂಕೋಲಾದ ಕವಯತ್ರಿ ರೇಣುಕಾ ರಮಾನಂದ ಅವರ ಕವಿತೆ ಸ್ಥಾನ ಪಡೆದಿದೆ.

Add Asianetnews Kannada as a Preferred SourcegooglePreferred

ಭಾರತದ 15 ಭಾಷೆಗಳ ಇಪ್ಪತ್ತೆಂಟು ಕವಿಗಳ 250 ಕವಿತೆಗಳು, ಕವಿಗಳ ಕೈಬರಹ, ಅವರದ್ದೇ ವಾಚನದ ವಿಡಿಯೋ, ಅದರ ಇಂಗ್ಲಿಷ್‌ ಅನುವಾದದ ಪ್ರದರ್ಶನ ಸೆ.26 ಆರಂಭವಾಗಿದೆ. ಈ ಪ್ರದರ್ಶನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಅಂಕೋಲೆಯ ಕವಯತ್ರಿ ರೇಣುಕಾ ರಮಾನಂದರ ಕನ್ನಡ ಕವಿತೆಯೂ ಇರುವುದು ವಿಶೇಷ. 

ಟ್ರಂಪ್ ಜತೆ ಸೇರಿಕೊಂಡ ಪುಟಿನ್, ನೊಬೆಲ್ ಶಾಂತಿ ಪುರಸ್ಕಾರಕ್ಕೆ ಹೆಸರು .

ಇದು ಗ್ಲೋಬಲ್ ಪೊಯೆಟ್ರಿ ಪ್ಯಾಚ್‌ ವರ್ಕ್ನ ರಕ್‌ ರಾರ‍ಯಕ್‌ ಕಲಾಕವನ ಅನುಸ್ಥಾಪನಾ ಯೋಜನೆಯಾಗಿದ್ದು, ಇದರಲ್ಲಿ ಭಾರತ ದೇಶದ ವೈವಿಧ್ಯತೆಯನ್ನು ಸಂಭ್ರಮಿಸುವ ಬಹುಭಾಷಿಕ ಹಾಗೂ ಪ್ರಾಂತಿಕ ವಿಚಾರ ಧ್ವನಿಸುವ ಭಾರತೀಯ ಭಾಷೆಯ ಕವಿತೆಗಳನ್ನು ಒಳಗೊಂಡಿವೆ. ಪ್ರಖ್ಯಾತ ಕವಯತ್ರಿ ಮಮತಾ ಸಾಗರ ಈ ಕವನಗಳ ಆಯ್ಕೆ ಮಾಡಿದ್ದಾರೆ.