ಅಮೇರಿಕಾದಲ್ಲಿ ಗೆದ್ದ ಡೊನಾಲ್ಡ್ ಟ್ರಂಪ್‌ಗೆ 'ಟೋಟಲ್ ಕಿಲ್ಲರ್' ಎಂದ ಸಂಸದೆ ಕಂಗನಾ ರಾಣಾವತ್!
ಪೆನ್ಸಿಲ್ವೇನಿಯಾ ರ್ಯಾಲಿಯಲ್ಲಿ ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಿದ ಚಿತ್ರವನ್ನು ಹಂಚಿಕೊಂಡ ಕಂಗನಾ ರಣಾವತ್, ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ.
ಬಾಲಿವುಡ್ ನಟಿ ಮತ್ತು ರಾಜಕಾರಣಿ ಕಂಗನಾ ರಣಾವತ್ 2024ರ ಅಮೆರಿಕ ಚುನಾವಣೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಮುಂದಿನ ಅಧ್ಯಕ್ಷರ ಆಯ್ಕೆಗಾಗಿ ಮತದಾನ ನವೆಂಬರ್ 5 ರಂದು ಮುಕ್ತಾಯಗೊಂಡಿತ್ತು. ಈ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ಸ್ಪರ್ಧಿಸಿದ್ದಾರೆ. 2024ರ ಅಮೆರಿಕ ಚುನಾವಣಾ ಫಲಿತಾಂಶಕ್ಕಾಗಿ ಎಲ್ಲರೂ ಕಾಯುತ್ತಿರುವಾಗ, ಬಿಜೆಪಿ ರಾಜಕಾರಣಿ ಕಂಗನಾ, ಡೊನಾಲ್ಡ್ ಟ್ರಂಪ್ ಅವರನ್ನು ಮುಂದಿನ ಅಧ್ಯಕ್ಷರನ್ನಾಗಿ ಬೆಂಬಲಿಸಿ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ಪೆನ್ಸಿಲ್ವೇನಿಯಾ ರ್ಯಾಲಿಯಲ್ಲಿ ಟ್ರಂಪ್ ಮೇಲೆ ಗುಂಡು ಹಾರಿಸಿದ ಚಿತ್ರವನ್ನು ಕಂಗನಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ಈ ಸಮಯದಲ್ಲಿ ನಾನು ಅಮೆರಿಕಾದಲ್ಲಿದ್ದಿದ್ದರೆ, ನಾನು ಟ್ರಂಪ್‌ಗೆ ಮತ ಹಾಕುತ್ತಿದ್ದೆ. ಗುಂಡು ಹಾರಿಸಿದ ನಂತರ ಅವರು ತಮ್ಮ ಭಾಷಣವನ್ನು ಮುಗಿಸಿದ ರೀತಿ, ಅವರು ನಿಜವಾದ ಕಿಲ್ಲರ್" ಎಂದು ಬರೆದಿದ್ದಾರೆ.
ಈ ವರ್ಷದ ಜುಲೈನಲ್ಲಿ ಪ್ರಚಾರದ ವೇಳೆ ಟ್ರಂಪ್ ಮೇಲೆ ಗುಂಡು ಹಾರಿಸಲಾಗಿತ್ತು. ಟ್ರಂಪ್ ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ಸಭೆಗೆ ಹೋಗಿದ್ದರು. ಅವರ ಭಾಷಣ ಕೇಳಲು ದೊಡ್ಡ ಸಮೂಹ ಜಮಾಯಿಸಿತ್ತು. ಟ್ರಂಪ್ ವೇದಿಕೆಯಲ್ಲಿ ಭಾಷಣ ಆರಂಭಿಸಿದರು. ಆಗ ಅವರ ಮೇಲೆ ಗುಂಡು ಹಾರಿಸಲಾಯಿತು. ಗುಂಡು ಟ್ರಂಪ್ ಅವರ ಬಲ ಕಿವಿಯ ಪಕ್ಕದಿಂದ ಹಾದುಹೋಯಿತು. ರಕ್ತಸ್ರಾವವಾಯಿತು. ಆದರೂ ಅವರು ಬಿಟ್ಟುಕೊಡಲಿಲ್ಲ. ನಂತರ ಎದ್ದು ನಿಂತು ಗಾಳಿಯಲ್ಲಿ ಮುಷ್ಟಿಯುದ್ದರಿಸಿದರು. ಆ ಚಿತ್ರ ಕ್ಷಣಾರ್ಧದಲ್ಲಿ ವೈರಲ್ ಆಯಿತು. ಉಳಿದ ಪ್ರೇಕ್ಷಕರು ಕೂಡ ಕುಳಿತರು. ಟ್ರಂಪ್ ಅವರನ್ನು ಬೇಗನೆ ಅಲ್ಲಿಂದ ಕರೆದೊಯ್ಯಲಾಯಿತು.
ಇದನ್ನೂ ಓದಿ: ನನ್ನ ಗೆಳೆಯ ಡೋನಾಲ್ಡ್ ಟ್ರಂಪ್‌ಗೆ ಅಭಿನಂದನೆ, ಶುಭಾಶಯದಲ್ಲೂ ಸಂದೇಶ ರವಾನಿಸಿದ ಮೋದಿ!
ಈ ಘಟನೆಯ ಬಗ್ಗೆ ಕಂಗನಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಾವು ಟ್ರಂಪ್ ಅವರನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ. ಈ ಮಧ್ಯೆ, ಭಾರತೀಯ ಮೂಲದ ಕಮಲಾ ಹ್ಯಾರಿಸ್ ಟ್ರಂಪ್ ವಿರುದ್ಧ ಸ್ಪರ್ಧಿಸಿದ್ದರು. ಅಮೆರಿಕದಲ್ಲಿ ಹ್ಯಾರಿಸ್ ಅವರ ಜನಪ್ರಿಯತೆ ಕಡಿಮೆಯಿಲ್ಲ. ಅಲ್ಲಿನ ಜನರು, ವಿಶೇಷವಾಗಿ ಮಹಿಳೆಯರು ಅವರನ್ನು ಬೆಂಬಲಿಸುತ್ತಾರೆ. ಅಮೆರಿಕದಲ್ಲಿ ಈ ಬಾರಿ ವಲಸೆ ನೀತಿಯ ಜೊತೆಗೆ ಗರ್ಭಪಾತದ ಹಕ್ಕುಗಳ ಬಗೆ ಕಾಯ್ದೆ ಮಾಡುವುದು ಪ್ರಚಾರದ ಪ್ರಮುಖ ವಿಷಯವಾಗಿದ್ದವು. ಹಾಗಾಗಿ ಮಹಿಳೆಯರ ಬೆಂಬಲ ಕಮಲಾ ಅವರ ಕಡೆಗಿತ್ತು.
ಈ ಮಧ್ಯೆ, ಕಂಗನಾ ಅವರ ಪೋಸ್ಟ್ ವೈರಲ್ ಆಗಿದೆ. ಅವರ ಹೇಳಿಕೆ ಗಮನ ಸೆಳೆದಿದೆ. ಅಮೆರಿಕ ಚುನಾವಣೆಯ ಬಗ್ಗೆ ಪ್ರತಿಕ್ರಿಯಿಸುವ ಮೂಲಕ ಕಂಗನಾ ಸುದ್ದಿಯಾಗಿದ್ದಾರೆ. ಈ ಬಾರಿ ಅವರು ಟ್ರಂಪ್ ಅವರ ಮೇಲಿನ ತಮ್ಮ ಒಲವನ್ನು ವ್ಯಕ್ತಪಡಿಸಿದ್ದಾರೆ.