ನೀನು ಒಂದೆಲ್ಲಾ ಒಂದು ದಿನ ಅಧ್ಯಕ್ಷೆಯಾಗಬಹುದು/  ಮೊಮ್ಮಗಳಿಗೆ  ಹೇಳಿದ ಕಮಲಾ ಹ್ಯಾರಿಸ್/ ಸೋಶಿಯಲ್ ಮೀಡಿಯಾದಲಲ್ಲಿ ವೈರಲ್/  ಈಗ ನೀನು ಅಧ್ಯಕ್ಷೆಯಾಗಲು ಸಾಧ್ಯವಿಲ್ಲ  35  ವರ್ಷ ಆಗಬೇಕು

ವಾಷಿಂಗ್ಟನ್, (08) ಅಮೆರಿಕ ಉಪಾಧ್ಯಕ್ಷೆಯಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅತಿ ಹತ್ತಿರಕ್ಕೆ ಹೋಗಿ ನಿಂತಿದ್ದಾರೆ. ಇದೇ ಸಂದರ್ಭ ಕಮಲಾ ತಮ್ಮ ಮೊಮ್ಮಗಳೊಂದಿಗೆ ಮಾತನಾಡಿದ ವಿಚಾರ ವೈರಲ್ ಆಗುತ್ತಿದೆ.

ಒಂದೆಲ್ಲಾ ಒಂದು ನೀನು ಅಧ್ಯಕ್ಷೆಯಾಗುತ್ತೀಯಾ ಎಂದು ಹೇಳಿರುವುದು ವೈರಲ್ ಆಗಿದೆ. ಹ್ಯಾರಿಸ್ ಸಂಬಂಧಿ ಮೀರಾ ವಿಡಿಯೋ ಹಂಚಿಕೊಂಡಿದ್ದಾರೆ.

ಹೊಸ ಅಧ್ಯಕ್ಷ ಬೈಡನ್‌ಗೆ ಗಜನಿ ಎಂದ ಕಂಗನಾ

ನಾಲ್ಕು ವರ್ಷ ಮೊಮ್ಮಗಳು ಅಮರಾ ಅಜಗು ಜೊತೆ ಮಾತನಾಡಿರುವ ವಿಚಾರ ವೈರಲ್ ಆಗಿದೆ. ನೀನು ಅಧ್ಯಕ್ಷೆಯಾಗಬಹುದು ಎಂದು ತಮ್ಮ ತೊಡೆ ಮೇಲೆ ಕೂರಿಸಿಕೊಂಡು ಕಮಲಾ ಹೇಳಿದ್ದಾರೆ.

ಈಗ ಅಲ್ಲ, ನಿನಗೆ 35 ವರ್ಷ ಆಗಬೇಕು ಎಂದು ಕಮಲಾ ಮೊಮ್ಮಗಳಿಗೆ ಹೇಳಿದ್ದಾರೆ. ಮೊಟ್ಟಮೊದಲ ಮಹಿಳಾ ಉಪಾಧ್ಯಕ್ಷೆ ಎಂಬ ಪಟ್ಟಕ್ಕೆ ಕಮಲಾ ಹತ್ತಿರದಲ್ಲಿ ನಿಂತಿದ್ದಾರೆ..

ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಜೋ ಬೈಡನ್ ಮತ್ತು ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರೀಸ್ ಗೆಲುವು ಸಾಧಿಸಿದ್ದಾರೆ.