ಸಿಯೋಲ್(ನ. 25) ದಕ್ಷಿಣ ಕೋರಿಯಾದ ಫೇಮಸ್ ಬ್ಯಾಂಡ್ ಕೆ-ಗ್ರೂಪ್ ಕಾರಾದ ಮಾಜಿ ಸದಸ್ಯೆ, ದಕ್ಷಿಣ ಕೋರಿಯಾದ ಖ್ಯಾತ ಗಾಯಕಿ ಗೋ ಹರಾ ಅವರ ಮನೆಯಲ್ಲೇ ಶವವಾಗಿ ಪತ್ತೆಯಾಗಿದ್ದಾರೆ.

28 ವರ್ಷದ ಗಾಯಕಿ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳೀಯ ಸಮಯ ಸಂಜೆ ಆರು ಗಂಟೆ ವೇಳೆ ಘಟನೆ ಬೆಳಕಿಗೆ ಬಂದಿದೆ ಎಂದು ಸುದ್ದಿ ಸಂಸ್ಥೆಯೊಂದು ತಿಳಿಸಿದೆ. ಮೇಲು ನೋಟಕ್ಕೆ ಆತ್ಮಹತ್ಯೆ ಎಂದು ಕಂಡುಬಂದಿದ್ದರೂ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

60 ದಾಟಿದರೂ ಬ್ಯೂಟಿಗಾಗಿ ದಿನಾ ಮೂತ್ರ ಕುಡಿಯುತ್ತಾರಂತೆ ಈ ಗಾಯಕಿ!...

ಆರು ತಿಂಗಳ ಹಿಂದೆ ಸಹ ಗಾಯಕಿ ಮನೆಯಲ್ಲಿ ಜ್ಙಾನ ತಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಗಲೂ ಆತ್ಮಹತ್ಯೆಗೆ ಪ್ರಯತ್ನಪಟ್ಟ ಶಂಕೆ ಇತ್ತು ಎಂದು ಸ್ಥಳೀಯ ಮಾಧ್ಯವೊಂದು ಹೇಳಿದೆ. ಈ ವರ್ಷದ ಮೇ ನಲ್ಲಿ ಗೋ ಹರಾ ತಾನು ಆತ್ಮಹತ್ಯೆಗೆ ಯತ್ನಿಸಿದ್ದ ಬಗ್ಗೆ ಅಭಿಮಾನಿಗಳ ಕ್ಷಮಾಪಣೆ ಕೇಳಿದ್ದಳು. ಜಪಾನ್ ಪ್ರವಾಸ ಮುಗಿಸಿ ಕಳೆದ ವಾರ ಕೋರಿಯಾಕ್ಕೆ ಗಾಯಗಿ ಹಿಂದಿರುಗಿದ್ದರು.

ಕಳೆದ ಆಗಸ್ಟ್ ನಲ್ಲಿ ಗಾಯಗಿ ತುಂಬಾ ನೊಂದಿದ್ದರು. ಆಕೆಯ ಮಾಜಿ ಗೆಳೆಯ, ಡ್ರೆಸರ್ ಚಿಯೋ ಜೋಂಗ್ ಬಮ್ ಆಕೆಯ ಖಾಸಿಗಿ ವಿಡಿಯೋ ಲೀಕ್ ಮಾಡುತ್ತೇನೆ ಎಂದು ಹೇಳಿದ್ದ. ಈ ವಿಚಾರ ನ್ಯಾಯಾಲಯದ ಮೆಟ್ಟಿಲು ಸಹ ಏರಿತ್ತು. ಆತನಿಗೆ ಜೈಲು ಶಿಕ್ಷೆ ಸಹ ಆಗಿತ್ತು. ಕಳೆದ ಶನಿವಾರ ಗಾಯಕಿ ಇಸ್ಟಾಗ್ರ್ಯಾಮ್ ನಲ್ಲಿ ತಮ್ಮ ಕೊನೆಯ ಪೋಸ್ಟ್  ಹಾಕಿ ಗುಡ್ ನೈಟ್ ಎಂದು ಬರೆದಿದ್ದಳು.