ಇಸ್ಲಾಮಾಬಾದ್‌ [ಫೆ.29]: 2019ರ ಫೆ.27 ರಂದು ಪಾಕಿಸ್ತಾನದ ಯುದ್ಧ ವಿಮಾನ ಹೊಡೆದುರುಳಿಸಿ, ಬಳಿಕ ಪಾಕ್‌ ವಿಮಾನಗಳ ದಾಳಿಗೆ ಸಿಕ್ಕು ಅಚಾನಕ್ಕಾಗಿ ಪಾಕ್‌ ಭೂ ಪ್ರದೇಶದಲ್ಲಿ ಇಳಿದು, ಅಲ್ಲಿನ ಸೇನೆಯಿಂದ ಬಂಧನಕ್ಕೊಳಗಾಗಿದ್ದ ವೀರ ಯೋಧ ಅಭಿನಂದನ್‌ ವರ್ತಮಾನ್‌ಗೆ ಚಹಾ ತಯಾರಿಸಿಕೊಟ್ಟಚಾಯ್‌ವಾಲ ಪತ್ತೆಯಾಗಿದ್ದಾರೆ.

ಪಾಕ್‌ನ ಉರ್ದು ವಾಹಿನಿಯ ಪತ್ರಕರ್ತರೊಬ್ಬರು ಚಾಯ್‌ವಾಲ ಅನ್ವರ್‌ ಅಲಿ ಎಂಬಾತನನ್ನು ಸಂದರ್ಶನ ಮಾಡಿದ್ದಾರೆ. ಈ ವೇಳೆ ಹೌದು, ನಾನೇ ಭಾರತೀಯ ಪೈಲಟ್‌ಗೆ ಚಹಾ ಮಾಡಿಕೊಟ್ಟಿದ್ದೆ. 

ವಾಯುಸೇನಾ ದಿನ: ಮಿಗ್ 21 ಯುದ್ಧ ವಿಮಾನದಲ್ಲಿ ಅಭಿನಂದನ್ ಸಾಹಸ!..

ಟೀ ಮಾಡಿಕೊಟ್ಟದ್ದಕ್ಕೆ ನನ್ನನ್ನು ಅಭಿನಂದನ್‌ ಹೊಗಳಿ ಧನ್ಯವಾದ ಸಮರ್ಪಿಸಿದ್ದರು ಎಂದು ಅನ್ವರ್‌ ಹೇಳಿದ್ದಾನೆ.ಅಲ್ಲದೇ ಶತ್ರು ದೇಶವೊಂದರ ಯೋಧನಿಗೆ ಪಾನೀಯ ತಯಾರಿಸಿಕೊಡುವಾಗ ನಿಮಗೆ ಹೇಗೆ ಅನ್ನಿಸಿತ್ತು ಎನ್ನುವ ಪ್ರಶ್ನೆಗೆ, ಅಂದು ಅವರು ನನ್ನ ಅತಿಥಿಯಾಗಿದ್ದರು ಎಂದು ಚಾಯ್‌ವಾಲ ಹೇಳಿರುವ ಮಾತು ಮೆಚ್ಚುಗೆ ಗಳಿಸಿದೆ. 

ಪಾಕ್‌ ಸೇನೆಯಿಂದ ಬಂಧನಕ್ಕೊಳಗಾದ ಬಳಿಕ ಟೀ ಕುಡಿಯುತ್ತಾ, ಕೆಲವು ಸೂಕ್ಷ್ಮ ಪ್ರಶ್ನೆಗಳಿಗೆ ‘ಇದಕ್ಕೆ ನಾನು ಉತ್ತರಿಸುವಂತಿಲ್ಲ’ ಎಂದು ಅಭಿ ಹೇಳುವ ಮಾತುಗಳು ಇಂಟರ್ನೆಟ್‌ನಲ್ಲಿ ಭಾರೀ ಪ್ರಸಿದ್ದಿ ಪಡೆದಿತ್ತು. ಜತೆಗೆ ಟೀ ಚೆನ್ನಾಗಿದೆ ಎಂದು ಅಭಿನಂದನ್‌ ಹೇಳಿದ್ದರು.

ಫೆಬ್ರವರಿ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ