ವಾಷಿಂಗ್ಟನ್(ಡಿ.01): ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ ತಮ್ಮ ನಾಯಿಯ ಜೊತೆ ಆಟವಾಡುವಾಗ ಜಾರಿ ಬಿದ್ದು ಸಣ್ಣ ಪ್ರಮಾಣದಲ್ಲಿ ಪಾದದ ಮೂಳೆ ಮುರಿದುಕೊಂಡಿದ್ದಾರೆ. ಅದರಿಂದ ಗುಣಮುಖರಾಗಲು ಅವರು ಕೆಲ ವಾರಗಳ ಕಾಲ ವಾಕಿಂಗ್‌ ಬೂಟ್‌ ಬಳಸಿ ನಡೆಯಬೇಕಾಗುತ್ತದೆ. 78 ವರ್ಷದ ಬೈಡೆನ್‌ ಜನವರಿ 20ರಂದು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಅದಕ್ಕೆ ಒಂದೂವರೆ ತಿಂಗಳಿರುವಾಗ ಪಾದದ ಮೂಳೆ ಮುರಿದುಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ‘ಗೆಟ್‌ ವೆಲ್‌ ಸೂನ್‌!’ (ಬೇಗ ಹುಷಾರಾಗಿ) ಎಂದು ಟ್ವೀಟ್‌ ಮಾಡಿದ್ದಾರೆ.

ಕ್ಯಾಬಿನೆಟ್‌ ಸದಸ್ಯರ ಘೋಷಿಸಿದ ಅಮೆರಿಕ ಭಾವಿ ಅಧ್ಯಕ್ಷ ಬೈಡನ್‌: ಬ್ಲಿಂಕನ್ ವಿದೇಶಾಂಗ ಸಚಿವ!

ಒಂದೆರಡು ದಿನಗಳ ಹಿಂದೆ ತಮ್ಮ 2 ವರ್ಷದ ಜರ್ಮನ್‌ ಶೆಫರ್ಡ್‌ ನಾಯಿಯ ಜೊತೆ ಆಟವಾಡುವಾಗ ಬೈಡೆನ್‌ ಜಾರಿ ಬಿದ್ದಿದ್ದರು. ಆಗ ಕಾಲು ಉಳುಕಿತ್ತು. ಎಕ್ಸ್‌ರೇ ನಡೆಸಿದ ವೈದ್ಯರು ಬೇರೇನೂ ತೊಂದರೆಯಿಲ್ಲ ಎಂದಿದ್ದರು. ಆದರೆ, ನಂತರ ಸಿಟಿ ಸ್ಕಾನ್‌ ನಡೆಸಿದಾಗ ಪಾದದ ನಡುವಿನ ಮೂಳೆಯಲ್ಲಿ ಕಿರಿದಾಗಿ ಬಿರುಕು ಬಿಟ್ಟಿರುವುದು ಕಂಡುಬಂದಿದೆ ಎಂದು ಜಾಜ್‌ರ್‍ ವಾಷಿಂಗ್ಟನ್‌ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಬೈಡೆನ್‌ ಬಳಿ ಎರಡು ಜರ್ಮನ್‌ ಶೆಫರ್ಡ್‌ ನಾಯಿಗಳಿವೆ. ಅವರು ಅಧ್ಯಕ್ಷರಾದ ಮೇಲೆ ಈ ಎರಡು