ವಾಷಿಂಗ್ಟನ್(ಡಿ.12): ಅಮೆರಿಕಾ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಕೊನೆಗೂ ತನ್ನ ಪುತ್ರನ ವ್ಯವಹಾರಗಳ ಬಗ್ಗೆ ಮೌನಮುರಿದಿದ್ದಾರೆ. ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ತನ್ನ ಪುತ್ರ ಹಂಟರ್‌ ಬೈಡೆನ್‌ನನ್ನು ಅವರು ಸಮರ್ಥಿಸಿ ಕೊಂಡಿದ್ದಾರೆ.

ಅಮೆರಿಕದ ಆರೋಗ್ಯ ಸೇವೆಗೆ ಮಂಡ್ಯದ ಮೂರ್ತಿ ಮುಖ್ಯಸ್ಥ!

ಹಂಟರ್‌ ಬೈಡೆನ್‌ ವ್ಯವಹಾರ ಮತ್ತು ತೆರಿಗೆ ಬಗ್ಗೆ ಫೆಡರಲ್‌ ಸಂಸ್ಥೆಗಳು ತನಿಖೆ ನಡೆಯುತ್ತಿದೆ.  ನೂತನ ಕ್ಯಾಬಿನೆಟ್‌ ಸದಸ್ಯರನ್ನು ಪರಿಚಯಿಸುವ ಕಾರ್ಯಕ್ರಮದ ಕೊನೆಗೆ, ಹಂಟರ್‌ ಬೈಡೆನ್‌ ಬಗ್ಗೆ ಪತ್ರಕರ್ತರು ಜೋ ಬೈಡೆನ್‌ರನ್ನು ಪ್ರಶ್ನಿಸಿದ್ದಾರೆ. 

ಅದಕ್ಕೆ ಜೋ ಬೈಡೆನ್‌, 'ನನ್ನ ಪುತ್ರನ ಬಗ್ಗೆ ಹೆಮ್ಮೆ ಇದೆ' ಎಂದಷ್ಟೇ ಹೇಳಿ ನಿರ್ಗಮಿಸಿದ್ದಾರೆ.

ನಾಯಿ ಜೊತೆ ಆಡುವಾಗ ಬೈಡೆನ್‌ ಕಾಲು ಮುರಿತ, ಬೇಗ ಹುಷಾರಾಗಿ ಎಂದ ಟ್ರಂಪ್‌!

ಹಂಟರ್‌ ಬೈಡೆನ್‌  ವ್ಯವಹಾರಗಳಿಗೆ ಸಂಬಂಧಿಸಿದಂತೆ, ಅಧ್ಯಕ್ಷೀಯ ಚುನಾವಣೆ ಪ್ರಚಾರದ ವೇಳೆಯೂ ಜೋ ಬೈಡೆನ್‌  ಇಕ್ಕಟ್ಟಿಗೆ ಸಿಲುಕಿದ್ದರು.  ಬರಾಕ್ ಒಬಾಮಾ ಕಾಲದಲ್ಲಿ ಉಪಾಧ್ಯಕ್ಷರಾಗಿದ್ದಾಗ, ಅಧಿಕಾರ ದುರ್ಬಳಕೆ ಮಾಡಿ ಮಗನ ವ್ಯವಹಾರಕ್ಕೆ ನೆರವಾಗಿದ್ದರು ಎಂಬ ಆರೋಪ ಅವರ ವಿರುದ್ಧ ಕೇಳಿಬಂದಿತ್ತು.