ಮಂಡ್ಯ(ಡಿ.08): ಮಂಡ್ಯ ಮೂಲದ ಡಾ.ವಿವೇಕ್ ಮೂರ್ತಿ ಅಮೆರಿಕದ ಆರೋಗ್ಯ ಇಲಾಖೆಯ ಹೊಣೆ ಹೊರುತ್ತಾರೆಂಬ ಸುದ್ದಿಗೆ ಇದೀಗ ಫುಲ್ ಬ್ರೇಕ್ ಬಿದ್ದಿದೆ. ಡಾ.ಮೂರ್ತಿ ಜನರಲ್ ಸರ್ಜನ್ ಆಗುತ್ತಿದ್ದಾರೆ. ಕ್ಯಾಲಿಫೋರ್ನಿಯಾ ಆಟರ್ನಿ ಜನರಲ್ ಕ್ಸೇವಿಯರ್ ಬೆಕೆರಾ ಅವರಿಗೆ ಆರೋಗ್ಯ ಇಲಾಖೆಯ ಹೊಣೆ ನೀಡಲಾಗುತ್ತಿದೆ. 

ಕುಂದಾ​ಪುರದ ಮಾಲಾ ಅಡಿಗಗೆ ಅಮೆರಿಕ ಉನ್ನತ ಹುದ್ದೆ!

ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡೆನ್ ತಮ್ಮ ಆರೋಗ್ಯ ತಂಡವನ್ನು ಘೋಷಣೆ ಮಾಡಿದ್ದು, ಮಂಡ್ಯದ ವಿವೇಕ್ ಮೂರ್ತಿಯನ್ನು ಅಮೆರಿಕದ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಅತ್ಯುನ್ನತ ಹುದ್ದೆಯಾದ ಸರ್ಜನ್ ಜನರಲ್ ಆಗಿ ನೇಮಕ ಮಾಡಲಾಗಿದೆ.

ಈ ವಿಶ್ವಾಸಾರ್ಹ ಹಾಗೂ ನಿಪುಣರ ತಂಡ ಅಮೆರಿಕ ಈವರೆಗೆ ಎದುರಿಸಿದ ಕಠಿಣ ಸವಾಲುಗಳಲ್ಲಿ ಒಂದಾದ ಕೋವಿಡ್ ನಿಯಂತ್ರಿಸುವಲ್ಲಿ ಯಶಸ್ವಿಯಾಗಲಿದೆ ಎಣದು ಜೋ ಬೈಡೆನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಬೈಡೆನ್ ಸಂಪುಟದಲ್ಲಿ ಮಂಡ್ಯದ ವಿವೇಕ್ ಮೂರ್ತಿ , ಅರುಣ್ ಮಜುಂದಾರ್‌ಗೆ ಪ್ರಮುಖ ಹುದ್ದೆ?

62 ವರ್ಷದ ಬೆಕೆರಾ 12 ಬಾರಿ ಹೌಸ್ ಆಫ್ ರೆಪ್ರಸೆಂಟೇಟಿವ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅಮೆರಿಕ ಸರಕಾರದಲ್ಲಿ ಆರೋಗ್ಯದಂಥ ಮಹತ್ವದ ಇಲಾಖೆಯನ್ನು ನಿಭಾಯಿಸುವ ಮೊದಲ ಲ್ಯಾಟಿನ್ ಅಮೆರಿಕನ್ ಬೆಕೆನ್ ಆಗಲಿದ್ದಾರೆ.

ವಿಭಿನ್ನ ಹಿನ್ನೆಲೆಯುಳ್ಳ ಪ್ರತಿಭೆಗಳನ್ನು ಬೈಡನ್ ತಮ್ಮ ಸರಕಾರಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಅದರಲ್ಲಿಯೂ ವಿತ್ತ ಇಲಾಖೆಯಲ್ಲಿ ಹಲವು ಹೆಣ್ಣು ಮಕ್ಕಳಿಗೆ ಮಣೆ ಹಾಕಿರುವುದು ಹೊಸ ಅಧ್ಯಕ್ಷರ ಸರಕಾರದ ವಿಶೇಷ.