Asianet Suvarna News Asianet Suvarna News

ಅಮೆರಿಕದ ಎನ್‌ಇಸಿ ಉಪ ನಿರ್ದೇಶಕಿಯಾಗಿ ಭಾರತ ಮೂಲದ ಸಮೀರಾ ಫಾಝಿಲಿ ನೇಮಕ!

ಕಾಶ್ಮೀರ ಮೂಲದ ಸಮೀರಾ ಫಾಜಿಲಿಗೆ ಅಮೆರಿಕದಲ್ಲಿ ಉನ್ನತ ಹುದ್ದೆ| ಶ್ವೇತಭವನದ ರಾಷ್ಟ್ರೀಯ ಆರ್ಥಿಕ ಮಂಡಳಿಯ ಉಪ ನಿರ್ದೇಶಕರಾಗಿ ನೇಮಕ| ಬೈಡೆನ್ ತಂಡಕ್ಕೆ ಮತ್ತೊಬ್ಬ ಭಾರತೀಯ ಮೂಲದ ಮಹಿಳೆ

Joe Biden names Indian American Sameera Fazili as Deputy Director of National Economic Council pod
Author
Bangalore, First Published Jan 17, 2021, 5:02 PM IST

ವಾಷಿಂಗ್ಟನ್(ಜ.17): ಕಾಶ್ಮೀರ ಮೂಲದ ಸಮೀರಾ ಫಾಜಿಲಿ ಶ್ವೇತಭವನದ ರಾಷ್ಟ್ರೀಯ ಆರ್ಥಿಕ ಮಂಡಳಿಯ ಉಪ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಈ ಮೂಲಕ ಮತ್ತೊಬ್ಬ ಭಾರತೀಯ ಮೂಲದ ಮಹಿಳೆ ಜೋ ಬೈಡೆನ್ ಆಡಳಿತದಲ್ಲಿ ಉನ್ನತ ಹುದ್ದೆ ನೀಡಲಾಗಿದೆ.

ಶ್ರೀನಗರದಲ್ಲಿ ಸಮೀರಾ ಫಾಜಿಲಿ ಕುಟುಂಬ ಸದಸ್ಯರು ನೆಲೆಸಿದ್ದಾರೆ. ಹೀಗಿರುವಾಗ ಚಿಕ್ಕಪ್ಪ ರೂಫ್ ಫಾಜಿಲಿ ಸಂತಸ ವ್ಯಕ್ತಪಡಿಸಿದ್ದು, ಇದು ಭಾರತೀಯರಿಗೆ ಸಂತಸ ಹಾಗೂ ಹೆಮ್ಮೆಯ ವಿಚಾರವೆಂದಿದ್ದಾರೆ. ಸಮೀರಾ ಫಾಜಿಲಿ ಹೆತ್ತವರು 1970 – 71 ರಲ್ಲಿ ಜಮ್ಮು ಕಾಶ್ಮೀರದಿಂದ ಅಮೆರಿಕಕ್ಕೆ ತೆರಳಿದ್ದರು. ಸಮೀರಾ ಕಣಿವೆ ನಾಡಿನಲ್ಲಿ ಜನಿಸದಿದ್ದರೂ ಉತ್ತಮ ನಂಟು ಹೊಂದಿದ್ದಾರೆ. 2007 ರಲ್ಲಿ ಅವರು ಕೊನೆಯ ಬಾರಿಗೆ ಕಣಿವೆ ನಾಡಿಗೆ ಭೇಟಿ ನೀಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ ಅವರ ಚಿಕ್ಕಪ್ಪ.

ಸಮೀರಾ  ತಂದೆ, ತಾಯಿ ವೃತ್ತಿಯಲ್ಲಿ ವೈದ್ಯರು. ಮಗಳು ಕೂಡ ವೈದ್ಯೆ ಆಗಬೇಕೆಂದು ಅವರ ಕನಸಾಗಿತ್ತು. ಆದರೆ, ಸಮೀರಾಗೆ ಸಾರ್ವಜನಿಕ ಸೇವೆಯಲ್ಲಿ ಹೆಚ್ಚು ಆಸಕ್ತಿ ಇತ್ತು. ಈ ಮೊದಲು ಫೆಡರಲ್ ರಿಸರ್ವ್ ಬ್ಯಾಂಕ್ ಆಫ್ ಅಟ್ಲಾಂಟಾದಲ್ಲಿ ಕಾರ್ಯನಿರ್ವಹಿಸಿದ್ದ ಸಮೀರಾ ಆರ್ಥಿಕ ಅಭಿವೃದ್ಧಿಯ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. 

ಡಿಸೆಂಬರ್ ನಲ್ಲಿ ಕಾಶ್ಮೀರಾ ಮೂಲದ ಮಹಿಳೆ ಆಯೇಷಾ ಶಾರನ್ನು ಶ್ವೇತಭವನದ ಆಫೀಸ್ ಆಫ್ ಡಿಜಿಟಲ್ ಸ್ಟ್ರಾಟಜಿಯಲ್ಲಿ ಸಹ ವ್ಯವಸ್ಥಾಪಕರಾಗಿ ನೇಮಕ ಮಾಡಲಾಗಿತ್ತು. ಬರಾಕ್ ಒಬಾಮ ಆಡಳಿತದಲ್ಲಿ ಸಮೀರಾ  ಶ್ವೇತಭವನದ ರಾಷ್ಟ್ರೀಯ ಆರ್ಥಿಕ ಮಂಡಳಿಯ ಹಿರಿಯ ಸಲಹೆಗಾರರಾಗಿ ಮತ್ತು ದೇಶೀಯ ಹಣಕಾಸು, ಅಂತರರಾಷ್ಟ್ರೀಯ ವ್ಯವಹಾರಗಳ ಅಮೆರಿಕ ಖಜಾನೆ ಇಲಾಖೆಯಲ್ಲಿ ಹಿರಿಯ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಈ ಮೊದಲು ಸಮೀರಾ ಯೇಲ್ ಕಾನೂನು ಶಾಲೆಯಲ್ಲಿ ಕಾನೂನು ಉಪನ್ಯಾಸಕರಾಗಿ ಕೆಲಸ ಮಾಡಿದ್ದರು. ಪತಿ, ಮೂವರು ಮಕ್ಕಳೊಂದಿಗೆ ಜಾರ್ಜಿಯಾದಲ್ಲಿ ನೆಲೆಸಿರುವ ಅವರು ಯೇಲ್ ಲಾ ಸ್ಕೂಲ್ ಮತ್ತು ಹಾರ್ವರ್ಡ್ ಕಾಲೇಜಿನ ಪದವೀಧರೆಯಾಗಿದ್ದಾರೆ.

ರಾಷ್ಟ್ರೀಯ ಆರ್ಥಿಕ ಮಂಡಳಿ

ರಾಷ್ಟ್ರೀಯ ಆರ್ಥಿಕ ಮಂಡಳಿಯು ದೇಶದ ಆರ್ಥಿಕ ನೀತಿ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಸಂಯೋಜಿಸುವ ಜತೆಗೆ ಅಮೆರಿಕ ಅಧ್ಯಕ್ಷರಿಗೆ ಆರ್ಥಿಕ ನೀತಿ ಕುರಿತು ಸಲಹೆ ನೀಡುತ್ತದೆ.

Follow Us:
Download App:
  • android
  • ios