ನಾಯಿಯಂತೆ ರೂಪಾಂತರಗೊಂಡಿದ್ದ ಜಪಾನಿನ ವ್ಯಕ್ತಿಗೀಗ ಪಾಂಡಾ ಆಗುವ ಆಸೆಯಂತೆ!

ಜಪಾನ್‌ನ ವ್ಯಕ್ತಿಯೊಬ್ಬರು ಬರೋಬ್ಬರಿ 12 ಲಕ್ಷ ರೂಪಾಯಿ ಖರ್ಚು ಮಾಡಿ ತನ್ನನ್ನು ನಾಯಿಯಂತೆ ಪರಿವರ್ತನೆ ಮಾಡಿಸಿಕೊಂಡ ವಿಷಯ ಎಲ್ಲರಿಗೂ ಗೊತ್ತೇ ಇದೆ. ಈಗ ಅದೇ ವ್ಯಕ್ತಿ ಮತ್ತೊಂದು ಪ್ರಾಣಿಯಾಗಲು ಬಯಸಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

Japanese Man Who Transformed Into A Dog Now Wants To Become A Panda Or Fox Vin

ಜಪಾನ್‌ನ ವ್ಯಕ್ತಿಯೊಬ್ಬರು ಬರೋಬ್ಬರಿ 11 ಲಕ್ಷ ರೂಪಾಯಿ ಖರ್ಚು ಮಾಡಿ ತನ್ನನ್ನು ನಾಯಿಯಂತೆ ಪರಿವರ್ತನೆ ಮಾಡಿಸಿಕೊಂಡ ವಿಷಯ ಎಲ್ಲರಿಗೂ ಗೊತ್ತೇ ಇದೆ.  ಈಗ ಅದೇ ವ್ಯಕ್ತಿ ಮತ್ತೊಂದು ಪ್ರಾಣಿಯಾಗಲು ಬಯಸಿದ್ದಾರೆ. ಟೊಕೊ ಎಂಬ ವ್ಯಕ್ತಿ ತನ್ನ ಯೂಟ್ಯೂಬ್ ಚಾನೆಲ್ 'ಐ ವಾಂಟ್ ಟು ಬಿ ಎ ಅನಿಮಲ್'ನಲ್ಲಿ ನಾಯಿಯಂತೆ ಪರಿವರ್ತನೆಯಾಗುವ ವೀಡಿಯೋವನ್ನು ಪೋಸ್ಟ್ ಮಾಡಿದ್ದರು. ಈ ಮೂಲಕ ಬಾಲ್ಯದ ಕನಸನ್ನು ನನಸಾಗಿಸಲು ಬಯಸುತ್ತೇನೆ ಎಂದಿದ್ದರು. ಈಗ ಅದೇ ಟೊಕೊ ಪಾಂಡಾ ಆಗಬೇಕೆಂದು ಬಯಸಿದ್ದಾರೆ.

ಇತ್ತೀಚೆಗೆ, ಟೊಕೊ ಜಪಾನಿನ ಸುದ್ದಿ ಔಟ್‌ಲೆಟ್‌ನೊಂದಿಗೆ ಮಾತನಾಡುತ್ತಾ, ತಾನು ಈಗ ಹೊಸ ಪ್ರಾಣಿಯಾಗಿ ಬದುಕಲು ಬಯಸುತ್ತೇನೆ ಎಂದು ಹೇಳಿದರು. ನಾನು ನಾಲ್ಕು ರೀತಿಯ ಪ್ರಾಣಿಯಾಗಲು ಬಯಸುತ್ತೇನೆ. ಆದರೆ ಕೆಲವೊಂದು ಕಾರಣಗಳಿಂದ ಅದರಲ್ಲಿ ಎರಡು ಪ್ರಾಣಿಯಾಗುವುದು ಸಾಧ್ಯವಿಲ್ಲ. ಆದರೆ ನಾನು ನನ್ನ ನೆಚ್ಚಿನ ಪಾಂಡಾ ಆಗಬಹುದು ಎಂದು ಟೊಕೊ ಹೇಳಿದ್ದಾರೆ.

ಈ ಟಾಯ್ಲೆಟ್ ಒಳಗಿಂದೆಲ್ಲ ಕಾಣಿಸುತ್ತೆ, ಆದರೂ ಜನ ಇಲ್ಲಿಗೇ ಹೋಗ್ತಾರೆ! ಇದಕ್ಕೊಂದು ಟ್ವಿಸ್ಟ್ ಇದೆ

ಆನ್‌ಲೈನ್‌ನಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರೂ ಟೊಕೊ ನಾಯಿಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದರು. 'ನಾನು ಪ್ರಾಣಿಗಳನ್ನು ಪ್ರೀತಿಸುತ್ತೇನೆ. ಹೀಗಾಗಿ ನಾಯಿಯಂತೆ ನಟಿಸುವುದನ್ನು ಇಷ್ಟಪಡುತ್ತೇನೆ' ಎಂದು ಅವರು ಹೇಳಿದರು. 'ಇದು ನನ್ನ ಹವ್ಯಾಸ, ಹಾಗಾಗಿ ನಾನು ಅದನ್ನು ಮಾಡುತ್ತಲೇ ಇರುತ್ತೇನೆ. ಇದು ನನಗೆ ಸಂತೋಷವನ್ನು ನೀಡುತ್ತದೆ ಮತ್ತು ಇದು ಇತರ ಜನರನ್ನು ಸಂತೋಷಪಡಿಸುತ್ತದೆ' ಎಂದಿದ್ದರು. ಈಗ ಮನುಷ್ಯನಿಂದ ಪಾಂಡಾ ಆಗಿ ಬದಲಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಮನಶ್ಶಾಸ್ತ್ರಜ್ಞರು ಟೊಕೊ ಥೆರಿಯನ್ ಆಗಿರಬಹುದು ಎಂದು ಹೇಳುತ್ತಾರೆ. ಮಾತ್ರವಲ್ಲ ಟೊಕೊವನ್ನು ಮಾನವರಲ್ಲದ ಪ್ರಾಣಿ ಜಾತಿ ಎಂದು ಗುರುತಿಸುತ್ತಾರೆ. ಇಂಥವರು ಮನುಷ್ಯರಾಗಿ ಇರುವ ಬದಲು ಪ್ರಾಣಿಗಳಂತೆ ಇರಲು ಇಷ್ಟಪಡುತ್ತಾರೆ. ಪಿಟ್ಸ್‌ಬರ್ಗ್‌ನ ಡುಕ್ವೆಸ್ನೆ ವಿಶ್ವವಿದ್ಯಾನಿಲಯದ ಮನೋವಿಜ್ಞಾನದ ಸಹಾಯಕ ಪ್ರಾಧ್ಯಾಪಕ ಡಾ ಎಲಿಜಬೆತ್ ಫೀನ್, 'ಮಾನವರೂಪಿ ಪ್ರಾಣಿಗಳ ಅಭಿಮಾನಿಗಳು ಮತ್ತು ಥೆರಿಯನ್‌ಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಬಹಳ ಮುಖ್ಯ'ಎಂದು ಹೇಳಿದರು. 

ಹೆಚ್ಚುತ್ತಿದೆ ಸೆಕ್ಸ್‌ ಇಲ್ಲದ ಫ್ರೆಂಡ್‌ಶಿಪ್‌ ಮ್ಯಾರೀಜ್‌, ಅಮೃತಧಾರೆಯ ಗೌತಮ್-ಭೂಮಿಕಾ ಸಂಬಂಧದ ಹಾಗಾ?

Latest Videos
Follow Us:
Download App:
  • android
  • ios