ದ್ವೀಪ ನಮ್ಮದೆಂದು ಶಿಪ್ ಕಳಿಸಿದ ಚೀನಾಕ್ಕೆ ಜಪಾನ್ ಕೊಟ್ಟ 'ಬಹುಮಾನ'!

ಭಾರತ ಮಾತ್ರ ಅಲ್ಲ ಜಪಾನ್ ಜತೆಗೂ ಚೀನಾ ತಿಕ್ಕಾಟ/  ದ್ವೀಪ್ ಪ್ರದೇಶದಲ್ಲಿ ಜಪಾನ್ ಗೆ ಉಪಟಳ ಕೊಡಹೊರಟ ಚೀನಾ/ ಪ್ರದೇಶ ತಮ್ಮದೆಂದು ಮೊದಲಿನಿಂದಲೂ ಹೇಳಿಕೊಂಡು ಬಂದಿರುವ ಎರಡು ದೇಶಗಳು

Japan changes administrative status of disputed islands China dispatches ships

ನವದೆಹಲಿ(ಜೂ. 22)  ಕುತಂತ್ರಿ ಚೀನಾದ ಕಿತಾಪತಿ ಭಾರತದೊಂದಿಗೆ ಮಾತ್ರ ಅಂದುಕೊಂಡಿದ್ದರೆ ಅದು ನಮ್ಮ ತಪ್ಪು. ಚೀನಾದ ಕುತಂತ್ರಿತನ ತಾಳಲಾರದೆ ಜಪಾನ್ ಸಹ ತನ್ನ ಆಡಳಿತದಲ್ಲಿ ಕೆಲ ಬದಲಾವಣೆ ಮಾಡಿಕೊಂಡಿದೆ.

ಗಡಿ ಪ್ರದೇಶದಲ್ಲಿನ ಕೆಲವು ದ್ವೀಪಗಳನ್ನು ಚೀನಾ ಮತ್ತು ಜಪಾನ್ ತನ್ನ ಭಾಗ ಎಂದು ಮೊದಲಿನಿಂದಲೂ ಹೇಳಿಕೊಂಡು ಬಂದಿವೆ.

ಜಪಾನ್ ಓಕಿನೋವಾ ನಗರ ಆಡಳಿತ ಸೋಮವಾರ ಮಸೂದೆಯೊಂದನ್ನು ಪಾಸ್ ಮಾಡಿದೆ. ಇಶಿಗಾಕಿ ಆಡಳಿತ ತನ್ನ ವೈಖರಿಯನ್ನು ಬದಲಾಯಿಸಿಕೊಳ್ಳಬೇಕಿದೆ.  ದ್ವೀಪಗಳ ಸಮೂಹ ಸೆಂಕಾಕುಸ್ ಆಡಳಿತ ಬದಲಾಗಬೇಕಿದೆ ಎಂದು ಮಸೂದೆ ಹೇಳಿದೆ. ಚೀನಾ ಈ ಪ್ರದೇಶವನ್ನು ಡೈಯೋಯುಸ್ ಎಂದು ಕರೆಯುತ್ತದೆ.

ಗ್ವಾಲ್ವಾನ್ ನದಿಯನ್ನೇ ತಿರುಗಿಸಲು ಚೀನಾ ಕಸರತ್ತು ಮಾಡಿತ್ತು

ಈ ದ್ವೀಪ ಪ್ರದೇಶದಲ್ಲಿ ಜನವಸತಿ ಇಲ್ಲ. ಜಪಾನ್ ಈ ತೀರ್ಮಾನ ತೆಗೆದುಕೊಂಡಿರುವುದಕ್ಕೆ ಬೀಜಿಂಗ್ ವಿರೋಧ ವ್ಯಕ್ತಪಡಿಸಿದ್ದು ಕೋಸ್ಟ್ ಗಾರ್ಡ್ ಹಡಗುಗಳನ್ನು ಕಳಿಸಿಕೊಟ್ಟಿದೆ.

ಟೊನೋಶಿರೋ ಎಂದು ಕರೆಯಲಾಗುತ್ತಿದ್ದ ಪ್ರದೇಶವನ್ನು ಇನ್ನು ಮುಂದೆ ಟೊನೋಶಿರೋ ಸೆಂಕಾಕು ಎಂದು ಕರೆಯಲಾಗುತ್ತದೆ.  1,931  ಕಿಮೀ ಗಡಿ ಹೊಂದಿರುವ ದ್ವೀಪಗಳು 1972 ರಿಂದ ಜಪಾನ್ ಹಿಡಿತದಲ್ಲಿಯೇ ಇವೆ. ಆದರೆ ಚೀನಾ ಈ ಭೂಭಾಗ ತನಗೆ ಸೇರಿದ್ದು ಎಂದು ಹೇಳಿಕೊಂಡೇ ಬಂದಿದೆ.

ಜಪಾನ್ ಈ ತೀರ್ಮಾನ ತೆಗೆದುಕೊಳ್ಳುತ್ತಿದ್ದಂತೆ ಚೀನಾ ಖಾರವಾಗಿ ಪ್ರತಿಕ್ರಿಯೆ ನೀಡಿದೆ. ಜಪಾನ್ ಯಾವ ಆಧಾರದಲ್ಲಿ ಇಂಥ ತೀರ್ಮಾನ ತೆಗೆದುಕೊಂಡಿದೆ ಗೊತ್ತಿಲ್ಲ. ಈ ಪ್ರದೇಶ ನಮ್ಮ ಅವಿಭಾಜ್ಯ ಅಂಗ ಎಂದು ಚೀನಾ ವಿದೇಶಾಂಗ ವಕ್ತಾರ ಜಾಹೋ ಲಿಜಿಯಾನ್ ಹೇಳಿದ್ದಾರೆ.

ಏಪ್ರಿಲ್ ನಿಂದಲೇ ಈ ಪ್ರದೇಶದಲ್ಲಿ ಚೀನಾ ಹಡಗುಗಳು ಕಾಣಿಸಿಕೊಳ್ಳುತ್ತಿವೆ ಎಂದು ಆರೋಪಿಸಿರುವ ಜಪಾನ್ ನಾವು ಆಡಳಿತಾತ್ಮಕ ಬದಲಾವಣೆ ಮಾಡಿಕೊಂಡಿದ್ದೇವೆ ಎಂದಿದೆ.

ಒಟ್ಟಿನಲ್ಲಿ ಇತ್ತ ಭಾರತದ ಗಡಿಯಲ್ಲಿ ತಂಟೆ ಮಾಡಲು ಬಂದಿರುವ ಚೀನಾಕ್ಕೆ ಅತ್ತ ಜಪಾನ್ ಸಹ ಸರಿಯಾದ ಏಟನ್ನೇ ನೀಡಿದೆ.

 

 

Latest Videos
Follow Us:
Download App:
  • android
  • ios