ಅಕ್ಕಿ ಉಡುಗೊರೆಯಿಂದ ಬದುಕುತ್ತಿದ್ದೇನೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಜಪಾನ್ ಕೃಷಿ ಸಚಿವ ಟಕು ಎಟೊ ರಾಜೀನಾಮೆ ನೀಡಿದ್ದಾರೆ. ಹಣದುಬ್ಬರ ಹಾಗೂ ಅಕ್ಕಿ ಕೊರತೆಯಿಂದ ಜನರು ತತ್ತರಿಸುತ್ತಿರುವಾಗ ಈ ಹೇಳಿಕೆ ಅಸಂವೇದನಾಶೀಲ ಎಂದು ಜನರು ಟೀಕಿಸಿದ್ದರು. ರಾಜೀನಾಮೆ ನೀಡಿದ ಎಟೊ, ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ. ಇದು ಇಶಿಬಾ ಸರ್ಕಾರಕ್ಕೆ ಹಿನ್ನಡೆ ಉಂಟುಮಾಡಬಹುದು.

ನವದೆಹಲಿ (ಮೇ.21): ಅಸಾಮಾನ್ಯ ರಾಜಕೀಯ ಬೆಳವಣಿಗೆಯಲ್ಲಿ ಅಕ್ಕಿಯ ಬಗ್ಗೆ ವಿವಾದಾತ್ಮಕ ಹೇಳಿಕೆಗೆ ಸಾರ್ವಜನಿಕರಿಂದ ವ್ಯಕ್ತವಾದ ಆಕ್ರೋಶದ ನಂತರ ಜಪಾನ್‌ನ ಕೃಷಿ ಸಚಿವ ಟಕು ಎಟೊ ರಾಜೀನಾಮೆ ನೀಡಿದ್ದಾರೆ. ಭಾರತದಲ್ಲಿ ಇಂಥ ಹೇಳಿಕೆಗಳು ಅತ್ಯಂತ ಸಾಮಾನ್ಯವಾಗಿರುವುದು ಮಾತ್ರವಲ್ಲ. ಹಾಗೇನಾದರೂ ಇಂಥ ಹೇಳಿಕೆಗೆ ರಾಜೀನಾಮೆ ಕೊಟ್ಟರೆಂದರೆ ಅದು ಶತಮಾನದ ಮಹಾ ಅಚ್ಚರಿ ಎಂದೇ ಹೇಳಬಹುದು. ಆದರೆ, ಹೆಚ್ಚುತ್ತಿರುವ ಆರ್ಥಿಕ ಒತ್ತಡಗಳ ನಡುವೆ ಈ ಘಟನೆ ಜಪಾನಿನ ಸಾರ್ವಜನಿಕರ ಮನಸ್ಸನ್ನು ತಟ್ಟಿದೆ. ಅಷ್ಟು ಮಾತ್ರವಲ್ಲದೆ ಜಪಾನ್‌ನ ರಾಜಕಾರಣ ಎಷ್ಟು ಶುದ್ದಾಚಾರದಲ್ಲಿದೆ ಅನ್ನೋದನ್ನ ಜಗತ್ತಿಗೆ ತೋರಿಸಿದೆ.

ವಿವಾದಾತ್ಮಕ ಹೇಳಿಕೆ ಏನಾಗಿತ್ತು?

ಜಪಾನ್‌ನಲ್ಲಿ ತೀವ್ರ ಹಣದುಬ್ಬರದ ನಡುವೆ ಮಾತನಾಡಿದ ಎಟೊ, 'ಬೆಂಬಲಿಗರಿಂದ ನಿಯಮಿತವಾಗಿ ಉಡುಗೊರೆಯಾಗಿ ಅಕ್ಕಿ ಪಡೆಯುತ್ತಿದ್ದರಿಂದ ತಾನು ಎಂದಿಗೂ ಅಕ್ಕಿ ಖರೀದಿಸುವ ಅಗತ್ಯವಿರಲಿಲ್ಲ..' ಎಂದು ಹೇಳಿದ್ದರು. ಇದೇ ಮಾತು ಅವರ ರಾಜೀನಾಮೆಗೆ ಕಾರಣವಾಗಿದೆ. ವಿಶೇಷವಾಗಿ ದೇಶವು ಅಕ್ಕಿ ಕೊರತೆ ಮತ್ತು ಗಗನಕ್ಕೇರುತ್ತಿರುವ ಆಹಾರ ಬೆಲೆಗಳಿಂದ ಬಳಲುತ್ತಿರುವಾಗ ಈ ಹೇಳಿಕೆಯನ್ನು ಅತ್ಯಂತ ಅಸಂವೇದನಾಶೀಲವೆಂದು ಜಪಾನ್‌ನ ಜನ ಪರಿಗಣಿಸಿದ್ದರು. ಅವರ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದ್ದು ಮಾತ್ರವಲ್ಲದೆ, ಅನೇಕರು ಸಚಿವರು ಸಾಮಾನ್ಯ ನಾಗರಿಕರ ದಿನನಿತ್ಯದ ಕಷ್ಟಗಳು ಅವರಿಗೆ ಅರ್ಥವೇ ಆಗಿಲ್ಲ ಎಂದು ಆರೋಪಿಸಿದರು.

ಜುಲೈನಲ್ಲಿ ನಡೆಯುವ ರಾಷ್ಟ್ರೀಯ ಚುನಾವಣೆಗೂ ಮುನ್ನ ಈಗಾಗಲೇ ಸಂಕಷ್ಟದಲ್ಲಿರುವ ಇಶಿಬಾ ಅವರ ಅಲ್ಪಮತದ ಸರ್ಕಾರಕ್ಕೆ ಮತ್ತಷ್ಟು ತೊಂದರೆಯಾಗಬಹುದು ಎಂದು ಭಾವಿಸಲಾಗಿತ್ತು. "ಗ್ರಾಹಕರು ಏರುತ್ತಿರುವ ಅಕ್ಕಿ ಬೆಲೆಗಳಿಂದ ಹೆಣಗಾಡುತ್ತಿರುವ ಸಮಯದಲ್ಲಿ ನಾನು ಅತ್ಯಂತ ಅನುಚಿತ ಹೇಳಿಕೆ ನೀಡಿದ್ದೇನೆ" ಎಂದು ಪ್ರಧಾನ ಮಂತ್ರಿ ಕಚೇರಿಯಲ್ಲಿ ರಾಜೀನಾಮೆ ನೀಡಿದ ನಂತರ ಎಟೊ ಸುದ್ದಿಗಾರರಿಗೆ ತಿಳಿಸಿದರು. ಪ್ರಧಾನಿ ಶಿಗೇರು ಇಶಿಬಾ ತಮ್ಮ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ಎಟೊ ಹೇಳಿದರು.

"ನಾನು ಮುಖ್ಯಸ್ಥನಾಗಿ ಉಳಿಯುವುದು ಸೂಕ್ತವಲ್ಲ ಎಂದು ಭಾವಿಸಿದೆ" ಎಂದು ಎಟೊ ರಾಜೀನಾಮೆ ನೀಡುವ ವೇಳೆ ಹೇಳಿದ್ದಾರೆ. ಸರ್ಕಾರವು ಅಕ್ಕಿ ಬೆಲೆ ಸವಾಲುಗಳನ್ನು ನಿಭಾಯಿಸಬೇಕಾಗಿದೆ. ಎಟೊ ಜನರಲ್ಲಿ ಕ್ಷಮೆಯಾಚಿಸಿದ್ದು ಮಾತ್ರವಲ್ಲದೆ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡರು. ನಾನು ಸ್ವತಃ ಅಕ್ಕಿ ಖರೀದಿ ಮಾಡುತ್ತೇವೆ. ಉಡುಗೊರೆ ನೀಡುವ ಅಕ್ಕಿಗಳಿಂದ ಬದುಕುತ್ತಿಲ್ಲ ಎಂದು ಹೇಳಿದರು ಎಟೊ ಅವರ ಸ್ಥಾನಕ್ಕೆ ಜನಪ್ರಿಯ ಮಾಜಿ ಪರಿಸರ ಸಚಿವ ಶಿಂಜಿರೊ ಕೊಯಿಜುಮಿ ಆಯ್ಕೆ ಆಗುವ ಸಾಧ್ಯತೆಗಳಿದೆ ಎನ್ನಲಾಗಿದೆ.

ರಾಜೀನಾಮೆ ಅಂಗೀಕರಿಸಿದ ಪ್ರಧಾನಿ

ಪ್ರತಿಕೂಲ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ, ಎಟೊ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು, ಪ್ರಧಾನಿ ಶಿಗೇರು ಇಶಿಬಾ ಅದನ್ನು ತಕ್ಷಣವೇ ಅಂಗೀಕರಿಸಿದರು. ಈ ರಾಜೀನಾಮೆಯನ್ನು ರಾಜಕೀಯ ಹಾನಿಯನ್ನು ತಡೆಗಟ್ಟಲು ಮತ್ತು ಸಾರ್ವಜನಿಕ ಭಾವನೆಯನ್ನು ಶಮನಗೊಳಿಸುವ ಪ್ರಯತ್ನವೆಂದು ಪರಿಗಣಿಸಲಾಗಿದೆ.

ಇಶಿಬಾ ಸರ್ಕಾರಕ್ಕೆ ಆಗಲಿರುವ ಪರಿಣಾಮಗಳು

ಈ ಘಟನೆಯು ಈಗಾಗಲೇ ಸಂಕಷ್ಟದಲ್ಲಿರುವ ಇಶಿಬಾ ಆಡಳಿತವನ್ನು ಮತ್ತಷ್ಟು ದುರ್ಬಲಗೊಳಿಸಬಹುದು ಎಂದು ರಾಜಕೀಯ ವಿಶ್ಲೇಷಕರು ನಂಬಿದ್ದಾರೆ. ಸರ್ಕಾರವು ಅಲ್ಪಮತದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕ ಅನುಮೋದನೆ ಕ್ಷೀಣಿಸುತ್ತಿರುವುದರಿಂದ, ಈ ಪ್ರಸಂಗವು ಅಸ್ತಿತ್ವದಲ್ಲಿರುವ ಸವಾಲುಗಳನ್ನು ಇನ್ನಷ್ಟು ತೀವ್ರಗೊಳಿಸಿದೆ. ಪ್ರಮುಖ ಕ್ಯಾಬಿನೆಟ್ ಸದಸ್ಯರ ರಾಜೀನಾಮೆಯು ಅನೇಕರು ಧ್ವನಿರಹಿತ ಹೇಳಿಕೆ ಎಂದು ನೋಡುವುದರಿಂದ ಜೀವನ ವೆಚ್ಚದ ಬಿಕ್ಕಟ್ಟನ್ನು ಪರಿಹರಿಸುವ ಸರ್ಕಾರದ ಸಾಮರ್ಥ್ಯದ ಮೇಲಿನ ನಂಬಿಕೆಯನ್ನು ಕ್ಷೀಣಿಸಬಹುದು.

ಜಪಾನ್ ತನ್ನ ಆರ್ಥಿಕ ತೊಂದರೆಗಳನ್ನು ನಿಭಾಯಿಸುತ್ತಲೇ ಇರುವುದರಿಂದ, ರಾಜೀನಾಮೆಯು ರಾಜಕೀಯ ಹೊಣೆಗಾರಿಕೆ ಮತ್ತು ಸಾರ್ವಜನಿಕ ಅಧಿಕಾರಿಗಳಿಂದ ನಿರೀಕ್ಷಿಸಲಾದ ಸೂಕ್ಷ್ಮತೆಯ ಬಗ್ಗೆ ವ್ಯಾಪಕವಾದ ಚರ್ಚೆಗಳನ್ನು ಹುಟ್ಟುಹಾಕಿದೆ.