ಖಲಿಸ್ತಾನಿ ಉಗ್ರ ಹರ್ದೀಪ್‌ ನಿಜ್ಜರ್‌ ಹತ್ಯೆಗೆ ಸಂಬಂಧಿಸಿದಂತೆ ಭಾರತ ಹಾಗೂ ಕೆನಡಾ ನಡುವೆ ಬಿಕ್ಕಟ್ಟು ಉಂಟಾಗಿರುವ ಬೆನ್ನಲ್ಲೇ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಅಮೆರಿಕ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.  

ವಾಷಿಂಗ್ಟನ್‌: ಖಲಿಸ್ತಾನಿ ಉಗ್ರ ಹರ್ದೀಪ್‌ ನಿಜ್ಜರ್‌ ಹತ್ಯೆಗೆ ಸಂಬಂಧಿಸಿದಂತೆ ಭಾರತ ಹಾಗೂ ಕೆನಡಾ ನಡುವೆ ಬಿಕ್ಕಟ್ಟು ಉಂಟಾಗಿರುವ ಬೆನ್ನಲ್ಲೇ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಅಮೆರಿಕ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ನಿಜ್ಜರ್‌ ಹತ್ಯೆಯಲ್ಲಿ ಭಾರತ ಕೈವಾಡ ಇದೆ ಎಂದು ಕೆನಡಾ ಹೇಳಿದ ಬಳಿಕ ಈ ಕುರಿತಾಗಿ ತನಿಖೆ ನಡೆಯಬೇಕು. ಇದಕ್ಕೆ ಭಾರತವೂ ಸಹಕಾರ ನೀಡಬೇಕು ಎಂದು ಅಮೆರಿಕ ಹೇಳಿತ್ತು. ಅದರ ಬೆನ್ನಲ್ಲೇ ಜೈಶಂಕರ್‌ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಉಭಯ ನಾಯಕರು ಭಾರತೀಯ ಕಾಲಮಾನದಂತೆ ಗುರುವಾರ ತಡರಾತ್ರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಯಾವ ವಿಷಯವನ್ನು ಚರ್ಚಿಸಲಾಗುತ್ತದೆ ಎಂಬುದನ್ನು ಬಹಿರಂಗಗೊಳಿಸದಿದ್ದರೂ ಸಹ, ಈ ಕುರಿತಾಗಿ ಪ್ರತಿಕ್ರಿಯಿಸಿರುವ ಅಮೆರಿಕ ವಿದೇಶಾಂಗ ಸಚಿವಾಲಯ ವಕ್ತಾರ ಮ್ಯಾಥ್ಯೂ ಮಿಲ್ಲರ್‌, ನಿಜ್ಜರ್‌ ಹತ್ಯೆಯಲ್ಲಿ ಕೆನಡಾ ಆರೋಪದ ಕುರಿತಾಗಿ ತನಿಖೆಗೆ ಸಹಕರಿಸುವಂತೆ ನಾವು ಹೇಳುತ್ತೇವೆ ಎಂದು ಹೇಳಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಇದಕ್ಕೂ ಮೊದಲು ಅಮೆರಿಕದ ಭದ್ರತಾ ಸಲಹೆಗಾರ ಸುಲ್ಲಿವಾನ್‌ ಅವರನ್ನು ಭೇಟಿ ಮಾಡಿದ ಜೈಶಂಕರ್‌ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಗಳ ಕುರಿತಾಗಿ ಚರ್ಚೆ ನಡೆಸಿದರು.

Scroll to load tweet…

ದೇಶದ 12ಕ್ಕಿಂತ ಚಿಕ್ಕ ಶೇ. 42ರಷ್ಟು ಮಕ್ಕಳಿಂದ ದಿನಕ್ಕೆ 4 ಗಂಟೆ ಮೊಬೈಲ್‌ ಬಳಕೆ: ಆತಂಕಕಾರಿ ವರದಿ

ನಿಜ್ಜರ್‌ ಕೊಲೆಯಲ್ಲಿ ಭಾರತದ ಪಾತ್ರಕ್ಕೆ ಸಾಕ್ಷ್ಯ: ಕೆನಡಾ ಎಂಪಿ

ವಾಷಿಂಗ್ಟನ್‌: ಕೆನಡಾ ಪ್ರಜೆ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ನ್ಯೂ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷ, ಸಂಸದ ಜಗ್‌ಮೀತ್‌ ಸಿಂಗ್‌ ಹೇಳಿದ್ದಾರೆ. ಅಲ್ಲದೆ ಈ ಕುರಿತು ತಮ್ಮ ಬಳಿ ಸಾಕ್ಷ್ಯವಿದೆ ಎಂದು ಪ್ರಧಾನಿ ಜಸ್ಟಿನ್‌ ಟ್ರುಡೋ ಸರ್ಕಾರಕ್ಕೆ ಬೆಂಬಲ ನೀಡಿರುವ ಜಗಮೀತ್‌ ಹೇಳಿದ್ದಾರೆ.
ಕೆನಡಾ ದೇಶದ ಬೇಹುಗಾರಿಕಾ ಸುದ್ದಿಸಂಸ್ಥೆ ನೀಡಿದ ವರದಿಯ ಆಧಾರದ ಮೇಲೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಈ ಹೇಳಿಕೆಯನ್ನು ನೀಡಿದ್ದಾರೆ. ಕೆನಡಾದಲ್ಲಿ ಬಹಳ ದೀರ್ಘ ಕಾಲದಿಂದಲೂ ಸಿಖ್ಖರ ಮೇಲೆ ತೀವ್ರತರವಾದ ಗುರಿ ಮಾಡಿ ದಾಳಿ ನಡೆಯುತ್ತಿದೆ. ಆದರೆ ಅದು ಗುರುತಿಸಲ್ಪಡುತ್ತಿಲ್ಲ. ಇದರಲ್ಲಿ ಭಾರತ ಸರ್ಕಾರ ಕೈ ಜೋಡಿಸುತ್ತಿದೆ ಎಂಬುದನ್ನು ಅಮೆರಿಕ ಸರ್ಕಾರ ಕೂಡ ಒಪ್ಪಿಕೊಂಡಿದೆ ಎಂಬುದಾಗಿ ಅವರು ತಿಳಿಸಿದ್ದಾರೆ.

ವಿದೇಶಗಳಲ್ಲಿ 1 ಕೋಟಿಗೂ ಹೆಚ್ಚು ಪಾಕಿಸ್ತಾನಿಯರಿಂದ ಭಿಕ್ಷಾಟನೆ: ವಲಸಿಗರ ಬಗ್ಗೆ ಸೌದಿ, ಇರಾಕ್ ಆಕ್ಷೇಪ