Asianet Suvarna News Asianet Suvarna News

ಹೊಸದಾಗಿ ಸಿಕ್ಕ ಬೃಹತ್ ಕೀಟಕ್ಕೆ ಪ್ರಧಾನಿ ಹೆಸರು

ಹೊಸದಾಗಿ ಪತ್ತೆಯಾಯ್ತು ಬೃಹತ್ ಕೀಟ | ಕೀಟಕ್ಕೆ ಪ್ರಧಾನಿಯ ಹೆಸರು | ಇದು ನನಗೆ ಗೌರವ ಎಂದ ಪ್ರಧಾನ ಮಂತ್ರಿ

Jacinda Ardern very honored after large insect species gets her name dpl
Author
Bangalore, First Published Mar 13, 2021, 10:37 AM IST

ವಿಲ್ಲಿಂಗ್ಟನ್(ಮಾ.13): ಹೊಸದಾಗಿ ಏನಾದರೂ ಕೀಟ ಸಿಕ್ಕರೆ, ಅದು ಸಿಕ್ಕಿದ ಸ್ಥಳ, ಸಂದರ್ಭ, ಪ್ರದೇಶ, ಸ್ವಭಾಗ, ಗುಣ ಇತ್ಯಾದಿ ನೆನಪಿರುವ ಹಾಗೆ ಒಂದು ಹೆಸರನ್ನು ನೀಡಲಾಗುತ್ತದೆ. ಆದರೆ ಇಲ್ಲಿ ಪತ್ತೆಯಾದ ಬೃಹತ್ ಕೀಟಕ್ಕೆ ಪ್ರಧಾನಿಯ ಹೆಸರಿಡಲಾಗಿದೆ.

ಕೀಟಕ್ಕೆ ತನ್ನ ಹೆಸರಿಡಲಾಗಿದೆ ಎಂದು ತಿಳಿದ ಪ್ರಧಾನಿ ಖುಷಿಯಾಗಿದ್ದಾರೆ. ನ್ಯೂಝಿಲೆಂಡ್‌ ಪ್ರಧಾನಿ ಜಸಿಂದಾ ಆರ್ಡರ್ನ್ ದೊಡ್ಡ ಕೀಟವೊಂದಕ್ಕೆ ತಮ್ಮ ಹೆಸರು ಇಟ್ಟ ಕಾರಣ ತುಂಬಾ ಹೆಮ್ಮೆ ಎನಿಸುತ್ತದೆ ಎಂದು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 

ಸೋಂಕು ಅಂತ್ಯಕ್ಕೆ ಜು.4ರ ಗಡುವು ನಿಗದಿ ಮಾಡಿದ ಅಮೆರಿಕ ಅಧ್ಯಕ್ಷ ಬೈಡೆನ್‌!

ಹೆಮಿಯಾಂಡ್ರಸ್ ಜಸಿಂದಾ ಎಂದು ಹೊಸ ಕೀಟಕ್ಕೆ ಹೆಸರಿಡಲಾಗಿದೆ. ವೆಟಾ ಜಾತಿಗೆ ಸೇರಿದ ಈ ಹೊಸ ಕೀಟ ಹಾರುವುದಿಲ್ಲ. ಈ ಕೀಟ ಕೆಂಪು ಬಣ್ಣದಲ್ಲಿದ್ದು, ಉದ್ದನೆಯ ಕಾಲುಗಳಿವೆ. ಇದು ಆರ್ಡನ್ ಅವರ ಲೇಬರ್ ಪಾರ್ಟಿಯ ಕಲರ್ ಮತ್ತು ಚಿಹ್ನೆಯನ್ನು ಹೋಲುತ್ತದೆ ಎನ್ನಲಾಗಿದೆ.

ಈ ಬಗ್ಗೆ ನ್ಯೂಝಿಲೆಂಡ್ ಪ್ರಧಾನಿಗೆ ಗೊತ್ತಿತ್ತು. ಅವರಿಗಿದು ಹೆಮ್ಮೆಯಾಗಿದೆ ಎಂದು ಅವರ ವಕ್ತಾರ ತಿಳಿಸಿದ್ದಾರೆ. ಸೌದಿ ಅರೆಬಿಯಾದಲ್ಲಿ ಒಂದು ಜೀರುಂಡೆ ಮತ್ತು ಇರುವೆಗೂ ಇವರ ಹೆಸರಿಡಲಾಗಿದೆ. 

ನೇರ ಪ್ರಸಾದ ವೇಳೆ ಟಿವಿ ನಿರೂಪಕನ ಮೇಲೆ ಬಿದ್ದ ಸ್ಟುಡಿಯೋ ಸೆಟ್; ವಿಡಿಯೋ ವೈರಲ್

ಕೀಟವನ್ನು ಹೆಸರಿಸಿ ಔಪಚಾರಿಕವಾಗಿ ವಿವರಿಸಿದ ವಿಜ್ಞಾನಿ ಸ್ಟೀವನ್ ಟ್ರೂವಿಕ್, "ಪ್ರಧಾನ ಮಂತ್ರಿಯ ಗುಣಲಕ್ಷಣಗಳನ್ನು ಪ್ರತಿಬಿಂಬಿಸಿದ್ದಕ್ಕಾಗಿ ಈ ಹೆಸರು ನೀಡಲಾಗಿದೆ ಎಂದು ಹೇಳಿದ್ದಾರೆ.

ನ್ಯೂಜಿಲೆಂಡ್‌ನ ಮಾಸ್ಸಿ ವಿಶ್ವವಿದ್ಯಾಲಯದ ವಿಕಸನೀಯ ಪರಿಸರ ವಿಜ್ಞಾನದ ಪ್ರಾಧ್ಯಾಪಕ ಟ್ರೂವಿಕ್, ಇದು ಹೊಡೆಯುವ ಆಕರ್ಷಕ ಜಾತಿ ಕೀಟವಾಗಿದೆ ಎಂದು ಹೇಳಿದ್ದಾರೆ. ಇದೀಗ ಸಿಕ್ಕಿರುವ ಕೀಟ ಗಾಢ ಬಣ್ಣದ್ದಾಗಿದ್ದು, ದೊಡ್ಡ ಗಾತ್ರದಲ್ಲಿದೆ. ಇದು ನಾರ್ತ್‌ಲೆಂಡ್‌ನ ಅರಣ್ಯಗಳಲ್ಲಿ ಕಂಡು ಬರುತ್ತವೆ.

Follow Us:
Download App:
  • android
  • ios