ಜುಲೈ 4ರ ಅಮೆರಿಕ ಸ್ವಾತಂತ್ರ್ಯೋತ್ಸವದ ಒಳಗಾಗಿ ದೇಶವನ್ನು ಕೊರೋನಾ ಮುಕ್ತ ಮಾಡಲು ಅಮೆರಿಕಾ ಅಧ್ಯಕ್ಷರ ಪಣ| ಜು.4ರ ಗಡುವು ನಿಗದಿ ಮಾಡಿದ ಅಮೆರಿಕ ಅಧ್ಯಕ್ಷ ಬೈಡೆನ್‌!

ವಾಷಿಂಗ್ಟನ್‌(ಮಾ.13): ಜುಲೈ 4ರ ಅಮೆರಿಕ ಸ್ವಾತಂತ್ರ್ಯೋತ್ಸವದ ಒಳಗಾಗಿ ದೇಶವನ್ನು ಕೊರೋನಾ ಮುಕ್ತ ಮಾಡಲು ನೂತನ ಅಧ್ಯಕ್ಷ ಜೋ ಬೈಡೆನ್‌ ಗಡುವು ನಿಗದಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೇ 1ರಿಂದ ಅಮೆರಿಕದ ಯುವ ಜನತೆ ಲಸಿಕೆ ಪಡೆಯಲು ಅರ್ಹರು ಎಂದು ಘೋಷಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ದೇಶವನ್ನು ಉದ್ದೇಶಿಸಿ ಗುರುವಾರ ಮಾತನಾಡಿದ ಅವರು, ‘ದೇಶವನ್ನೇ ತಲ್ಲಣಿಸಿರುವ ಕೊರೋನಾ ಮಹಾಮಾರಿಯಿಂದ ಮುಕ್ತರಾಗಲು 2 ದಿನಾಂಕ ನಿಗದಿ ಮಾಡಲಾಗಿದೆ. ಒಂದು ಮೇ 1ರಿಂದ ಯುವಕರಿಗೂ ಲಸಿಕೆ ನೀಡಲಾಗುತ್ತದೆ. ಎರಡನೆಯದು ಜುಲೈ 4. ಈ ಬಾರಿಯೂ ಅಮೆರಿಕನ್ನರು ಮನೆಯಲ್ಲೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಬೇಕಿದೆ.

ಆದರೆ ಈ ಸ್ವಾತಂತ್ರ್ಯೋತ್ಸವನ್ನು ವಿಭಿನ್ನವಾಗಿ ಆಚರಿಸೋಣ. ಕೊರೋನಾದಿಂದಲೂ ಸ್ವತಂತ್ರರಾಗೋಣ’ ಎಂದು ಹೇಳಿದರು. ಅಮೆರಿಕದಲ್ಲಿ ಈವರೆಗೆ 2.99 ಕೋಟಿ ಮಂದಿಗೆ ಸೋಂಕು ತಗುಲಿದ್ದು, ಒಟ್ಟು 5.43 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ.