ವಾಹಿನಿ ನೇರಪ್ರಸಾರ, ಅತಿಥಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು. ದಿಢೀರ್ ಸ್ಟುಡಿಯೋದ ಸೆಟ್ ಕುಸಿದು ನೇರವಾಗಿ ನಿರೂಪಕನ ಮೇಲೆ ಬಿದ್ದಿದೆ. ಈ ವಿಡಿಯೋ ವೈರಲ್ ಆಗಿದೆ. ಘಟನೆ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಕೊಲಂಬಿಯಾ(ಮಾ.11): ಇಎಸ್‌ಪಿಯನ್ ವಾಹಿನಿ ನೇರ ಪ್ರಸಾರದ ವೇಳೆ ಅವಘಡವೊಂದು ಸಂಭವಿಸಿದೆ. ಇಬ್ಬರು ನಿರೂಪಕರು ಹಾಗೂ ಅತಿಥಿಗಳು ಅಭಿಪ್ರಾಯ ಹಂಚಿಕೊಳ್ಳುತ್ತಿರುವಾಗಲೇ, ಸ್ಟುಡಿಯೋದ ಸೆಟ್ ನೇರವಾಗಿ ನಿರೂಪಕನ ಮೇಲೆ ಬಿದ್ದ ಘಟನೆ ನಡೆದಿದೆ.

ಕೆಸರಿಲ್ಲಾಂದ್ರೆ ತಂದೂರಿ ಚಿಕನ್ ಥರಾ ಬೆಂದು ಹೋಗ್ತಿದ್ದೆ ಎಂದ ರಿಷಭ್

ಕೊಲಂಬಿಯಾದಲ್ಲಿ ಈ ಘಟನೆ ನಡೆದಿದೆ. ಇಎಸ್‌ಪಿಯನ್ ನೇರ ಪ್ರಸಾರ ನಡೆಯುತ್ತಿರುವ ವೇಳೆ ಆ್ಯಂಕರ್ ಮೇಲೆ ಸ್ಟುಡಿಯೋದ ಸೆಟ್ ಕಳಬಿ ಬಿದ್ದಿದೆ. ಅದೃಷ್ಠವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಆದರೆ ಒಂದು ಕ್ಷಣ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಣ್ಣ ಪುಟ್ಟ ತರಚಿದ ಗಾಯಗಳನ್ನು ಹೊರತುಪಡಿಸಿದರೆ ಯಾವುದೇ ಸಮಸ್ಯಯಾಗಿಲ್ಲ.

ಮತ್ತೋರ್ವ ಆ್ಯಂಕರ್ ತಕ್ಷಣವೇ ಇದೀಗ ಪುಟ್ಟ ಬ್ರೇಕ್ ಎಂದು ಪರಿಸ್ಥಿತಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಸ್ಟುಡಿಯೋ ಕ್ಯಾಮರದಲ್ಲಿ ರೆಕಾರ್ಡ್ ಆಗಿರುವ ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Scroll to load tweet…

ತಕ್ಷಣವೇ ವಾಹಿನಿ ಹಲವರು ಕರೆ ಹಾಗೂ ಮೆಸೇಜ್ ಮಾಡಿದ್ದಾರೆ. ಸ್ಟುಡಿಯೋದಲ್ಲಿ ಏನಾಗಿದೆ ಎಂದು ಪ್ರಶ್ನಿಸಿದ್ದಾರೆ. ಬಳಿಕ ಇಎಸ್‌ಪಿಯನ್ ವಾಹಿನಿ ಸ್ಪಷ್ಟನೆ ನೀಡಿದೆ. ಯಾವುದೇ ಅಪಾಯ ಎದುರಾಗಿಲ್ಲ ಎಂದಿದೆ.