ಇದು ಚಿನ್ನದ ನೆಕ್ಲೇಸ್ ಅಲ್ಲ: ಸಮುದ್ರ ಚಿರತೆಯ ಸಿಟಿಸ್ಕ್ಯಾನ್ ಫೋಟೋ
ಈ ಫೋಟೋ ನೋಡಿದ್ರೆ ಬಂಗಾರದ ನೆಕ್ಲೇಸ್ ತರ ಕಾಣಿಸ್ತಿದೆ ಅಲ್ವಾ ಆದ್ರೆ ಇದು ಬಂಗಾರ ನೆಕ್ಲೇಸ್ ಅಥವಾ ಬಂಗಾರದ ಹೊಸ ಡಿಸೈನ್ ಅಲ್ಲ ಸಮುದ್ರ ಚಿರತೆ ಮೀನೊಂದರ ಸಿಟಿ ಸ್ಕ್ಯಾನ್ ಫೋಟೋ ಇದು.
ನ್ಯೂಯಾರ್ಕ್: ಈ ಫೋಟೋ ನೋಡಿದ್ರೆ ಬಂಗಾರದ ನೆಕ್ಲೇಸ್ ತರ ಕಾಣಿಸ್ತಿದೆ ಅಲ್ವಾ ಆದ್ರೆ ಇದು ಬಂಗಾರ ನೆಕ್ಲೇಸ್ ಅಥವಾ ಬಂಗಾರದ ಹೊಸ ಡಿಸೈನ್ ಅಲ್ಲ ಸಮುದ್ರ ಚಿರತೆ ಮೀನೊಂದರ ಸಿಟಿ ಸ್ಕ್ಯಾನ್ ಫೋಟೋ ಇದು. 30 ವರ್ಷದ ಈ ಲಿಯೋಪರ್ಡ್ ಈಲ್ ಎಂದು ಕರೆಯಲ್ಪಡುವ ಚಿರತೆ ಮೀನಿಗೆ ಇತ್ತೀಚೆಗೆ ಸಿಟಿ ಸ್ಕ್ಯಾನ್ ಮಾಡಿಸಲಾಗಿತ್ತು. ಅದರ ಬಾಯಿಯ ಮೇಲ್ಭಾಗದಲ್ಲಿ ಹೆಚ್ಚಿನ ಮಾಂಸ್ ಬೆಳವಣಿಗೆ ಹಿನ್ನೆಲೆಯಲ್ಲಿ ಪಶು ವೈದ್ಯರು ಅದಕ್ಕೆ ಸಿಟಿ ಸ್ಕ್ಯಾನ್ ಮಾಡಿಸುವಂತೆ ಸೂಚಿಸಿದ್ದರು. ಆದರೆ ಸಿಟಿ ಸ್ಕ್ಯಾನ್ ನಂತರ ಬಂದ ಫೋಟೋ ಈಗ ಬಹಳಷ್ಟು ಅಚ್ಚರಿಗೆ ಕಾರಣವಾಗಿದೆ.
ಅಮೆರಿಕಾ ಮೂಲದ ಪಾಯಿಂಟ್ ಡಿಫೈಯನ್ಸ್ ಝೂ ಮತ್ತು ಅಕ್ವೇರಿಯಂ, ಈ 30 ವರ್ಷದ ಲ್ಯಾರಿ ಗಾರ್ಡನ್ (Larry Gordon) ಎಂಬ ಹೆಸರಿನ ಮೀನಿನ ಆಕರ್ಷಕ ಚಿತ್ರಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದೆ. 30 ವರ್ಷದ ಚಿರತೆ ಈಲ್, ಲ್ಯಾರಿ ಗಾರ್ಡನ್‌ನ್ನು ಇತ್ತೀಚೆಗೆ ಸಿಟಿ ಸ್ಕ್ಯಾನ್‌ಗಾಗಿ ಸಮ್ಮಿಟ್ ವೆಟರ್ನರಿ ರೆಫರಲ್ ಸೆಂಟರ್‌ಗೆ ಕರೆದೊಯ್ಯಲಾಯ್ತು. ಮೃಗಾಲಯದ ಪಶುವೈದ್ಯ ಡಾ. ಕೇಡಿ, ಈಲ್‌ನ ಬಾಯಿಯಲ್ಲಿ ಮಾಂಸ ಸ್ವಲ್ಪ ಉಬ್ಬಿರುವುದನ್ನು ಗುರುತಿಸಿದ್ದರು.
ಮುರಿದ ಹಲ್ಲಿನ ಕಾರಣದಿಂದ ಆ ರೀತಿ ಉಬ್ಬಿದ್ದು, ಆ ಹಲ್ಲು ಹೊರತೆಗೆದ ನಂತರ ಪಶುವೈದ್ಯಕೀಯ ತಂಡವು ಈ ಬೆಳವಣಿಗೆ ತಡೆಯಲು ಲ್ಯಾರಿ ಗಾರ್ಡನ್‌ಗೆ ಪಶುವೈದ್ಯಕೀಯ ದಂತವೈದ್ಯರೊಡಗೂಡಿ ಶಸ್ತ್ರಚಿಕಿತ್ಸೆಗೆ ಮುಂದಾದರು ಎಂದು ಇನ್ಸ್ಟಾಗ್ರಾಮ್ (Instagram,) ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಲ್ಯಾರಿ ಗಾರ್ಡನ್ ಐದು ಅಡಿ ಉದ್ದವಿದ್ದು, 16 ಪೌಂಡ್ ತೂಕವಿದೆ. ಈ ಸಮುದ್ರ ಜೀವಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ವಾಷಿಂಗ್ಟನ್‌ನ ಟಮಾಕೊದಲ್ಲಿರುವ ಸಮ್ಮಿಟ್ ವೆಟರ್ನರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಮೀನುಗಾರರ ಬಲೆಗೆ ಬಿತ್ತು ಅತೀ ಅಪರೂಪದ ನೀಲಿ ಸಿಗಡಿ
ಟೊಮೊಗ್ರಫಿಯನ್ನು ಸೂಚಿಸುವ ಈ ಸಿಟಿ ಸ್ಕ್ಯಾನ್, ಈಲ್‌ನ ಅಸ್ಥಿಪಂಜರದ ಸೂಕ್ಷ್ಮ ವಿವರಗಳನ್ನು 3D ಯಲ್ಲಿ ತೋರಿಸಿದೆ. ಪಾಯಿಂಟ್ ಡಿಫೈಯನ್ಸ್ ಝೂ ಮತ್ತು ಅಕ್ವೇರಿಯಂ (Defiance Zoo and Aquarium ) ಕೆಲ ದಿನಗಳ ಹಿಂದೆ ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ಲಕ್ಷಾಂತರ ಜನ ಈ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಮುದ್ರ ಚಿರತೆ ಅಥವಾ ಚಿರತೆ ಈಲ್ (leopard eel) ಹಾವು ಜಾತಿಗೆ ಸೇರಿದ ಸಮುದ್ರ ಜೀವಿ, ಫ್ರಾನ್ಸ್‌ನ ಪ್ರಾಣಿಶಾಸ್ತ್ರಜ್ಞ ಅಕಿಲ್ಲೆ ವ್ಯಾಲೆನ್ಸಿಯೆನ್ಸ್ ಅವರು 1839 ರಲ್ಲಿಯೇ ಇದನ್ನು ಗುರುತಿಸಿದ್ದರು. ಇವುಗಳಲ್ಲಿ ಗಂಡು ಚಿರತೆ ಈಲ್‌ಗಳು 64.8 ಸೆಂಟಿ ಮೀಟರ್‌ನಷ್ಟು ಉದ್ದ ಬೆಳೆಯುತ್ತವೆ. ಸಾಮಾನ್ಯವಾಗಿ ಪೂರ್ವ ಅಟ್ಲಾಂಟಿಕ್ ಸಾಗರದಲ್ಲಿ ಕಂಡು ಬರುತ್ತವೆ. ದ್ವೀಪಗಳ ಒರಟಾದ ಮರಳಿನ ಕೆಸರುಗಳಲ್ಲಿ ಬಿಲಗಳನ್ನು ರೂಪಿಸುತ್ತದೆ. ಇದುವರೆಗೆ ನಾವು ಆಫ್ರಿಕಾದಿಂದ ಬಂದ ಚೀತಾಗಳು, ನಮ್ಮಲ್ಲಿರುವ ಸಾಮಾನ್ಯ ಚಿರತೆಗಳು ಮುಂತಾದವುಗಳನ್ನೇ ನೋಡಿದ್ದಾಯ್ತು, ಆದರೆ ಚಿರತೆಯನ್ನು ಹೋಲುವ ಈ ಸಮುದ್ರ ಮೀನು ಎಲ್ಲರನ್ನು ಅಶ್ಚರ್ಯಚಕಿತಗೊಳಿಸಿದೆ.
ಇಂಗ್ಲೆಂಡ್‌ನ ಅತ್ಯಂತ ಹಿರಿಯ ಪೆಂಗ್ವಿನ್ ನರಿ ದಾಳಿಗೆ ಬಲಿ