ತುರ್ತು ಲ್ಯಾಂಡ್ ಆದ ಇಸ್ರೇಲ್ ವಿಮಾನಕ್ಕೆ ಇಂಧನ ತುಂಬಲು ಒಪ್ಪದ ಟರ್ಕಿ ಏರ್‌ಪೋರ್ಟ್ ಸಿಬ್ಬಂದಿ
ಪ್ರಯಾಣಿಕನೋರ್ವನ ವೈದ್ಯಕೀಯ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇಸ್ರೇಲ್ ವಿಮಾನವೊಂದು ಮುಸ್ಲಿಂ ರಾಷ್ಟ್ರ ಟರ್ಕಿಯ ವಿಮಾನ ನಿಲ್ದಾಣವೊಂದರಲ್ಲಿ ತುರ್ತು ಲ್ಯಾಂಡಿಂಗ್ ಆಗಿದೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಇಸ್ರೇಲ್ ವಿಮಾನಕ್ಕೆ ಇಂಧನ ಮರುಪೂರಣ ಮಾಡುವುದಕ್ಕೆ ಟರ್ಕಿಯ ಏರ್‌ಪೋರ್ಟ್ ಸಿಬ್ಬಂದಿ ನಿರಾಕರಿಸಿದ್ದಾರೆ ಎಂದು ವರದಿ ಆಗಿದೆ.
ಇಸ್ರೇಲ್ ಹಾಗೂ ಪ್ಯಾಲೇಸ್ತೀನ್ ನಡುವಣ ಯುದ್ಧದಿಂದಾಗಿ ಕೆಲ ಮುಸ್ಲಿಂ ರಾಷ್ಟ್ರಗಳು ಇಸ್ರೇಲ್ ದೇಶದ ಮೇಲೆ ಕೆಂಡಕಾರುತ್ತಿವೆ. ಇದಕ್ಕೆ ಮತ್ತೊಂದು ಉದಾಹರಣೆ ಈ ಘಟನೆ. ವಿಮಾನದಲ್ಲಿದ್ದ ಪ್ರಯಾಣಿಕನೋರ್ವನ ವೈದ್ಯಕೀಯ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇಸ್ರೇಲ್ ವಿಮಾನವೊಂದು ಮುಸ್ಲಿಂ ರಾಷ್ಟ್ರ ಟರ್ಕಿಯ ವಿಮಾನ ನಿಲ್ದಾಣವೊಂದರಲ್ಲಿ ತುರ್ತು ಲ್ಯಾಂಡಿಂಗ್ ಆಗಿದೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಇಸ್ರೇಲ್ ವಿಮಾನಕ್ಕೆ ಇಂಧನ ಮರುಪೂರಣ ಮಾಡುವುದಕ್ಕೆ ಟರ್ಕಿಯ ಏರ್‌ಪೋರ್ಟ್ ಸಿಬ್ಬಂದಿ ನಿರಾಕರಿಸಿದ್ದಾರೆ ಎಂದು ವರದಿ ಆಗಿದೆ.
ಸಾಮಾನ್ಯವಾಗಿ ವಿಮಾನ ಲ್ಯಾಂಡಿಂಗ್ ಹಾಗೂ ಟೇಕಾಫ್ ವೇಳೆ ಪ್ರಯಾಣಕ್ಕಿಂತ ಜಾಸ್ತಿ ಇಂಧನ ವ್ಯಯವಾಗುತ್ತದೆ. ತುರ್ತು ಪರಿಸ್ಥಿತಿಯಿಂದಾಗಿ ವಿಮಾನ ನಿಗದಿತವಲ್ಲದ ಸ್ಥಳದಲ್ಲಿ ಲ್ಯಾಂಡ್ ಆಗಿದ್ದರಿಂದ ಒಂದು ಲ್ಯಾಂಡಿಗ್‌ಗೆ ವ್ಯಯವಾಗುವ ಇಂಧನ ಅಲ್ಲಿ ವ್ಯಯವಾಗಿರುತ್ತದೆ. ಹೀಗಿರುವಾಗ ಅದೇ ಏರ್‌ಪೋರ್ಟ್‌ಗಳಲ್ಲಿ ವಿಮಾನಗಳು ಇಂಧನ ಪೂರೈಸಿಕೊಂಡು ತಮ್ಮ ಪ್ರಯಾಣ ಮುಂದುವರೆಸುತ್ತವೆ. ಆದರೆ ಟರ್ಕಿ ಏರ್‌ಪೋರ್ಟ್‌ನಲ್ಲಿ ವಿಮಾನದ ಸಿಬ್ಬಂದಿ ಇಸ್ರೇಲ್ ವಿಮಾನ ಎಂಬ ಕಾರಣಕ್ಕೆ ಇಂಧನ ಪೂರೈಸಲು ನಿರಾಕರಿಸಿದ ಕಾರಣ ಇಸ್ರೇಲ್ ವಿಮಾನವೂ ನಂತರ ಸಮೀಪದ ಗ್ರೀಸ್‌ಗೆ ತೆರಳಿ ಇಂಧನ ಪೂರೈಸಿಕೊಂಡು ಪ್ರಯಾಣ ಮುಂದುವರೆಸಿದೆ ಎಂದು ವರದಿ ಆಗಿದೆ.
ಯುದ್ಧ ಪೀಡಿತ ಗಾಜಾದ ನಿರಾಶ್ರಿತ ಕೇಂದ್ರ ಮೇಲೆ ಇಸ್ರೇಲ್ ದಾಳಿ: 42 ಬಲಿ
ಇಸ್ರೇಲ್‌ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಎಲ್ ಅಲ್ (El Al) ಮೊನ್ನೆ ಭಾನುವಾರ ವೈದ್ಯಕೀಯ ತುರ್ತು ಪರಿಸ್ಥಿತಿಯ ಕಾರಣಕ್ಕೆ ಟರ್ಕಿಯ ಅಂಟಲ್ಯಾ ಏರ್‌ಪೋರ್ಟ್‌ನಲ್ಲಿ ತುರ್ತು ಲ್ಯಾಂಡಿಂಗ್ ಆಗಿದೆ (emergency landing). ಈ ವಿಮಾನವೂ ಪೋಲ್ಯಾಂಡ್ ರಾಜಧಾನಿ ವರ್ಸಾ ( Warsaw)ದಿಂದ ಇಸ್ರೇಲ್‌ನ ಟೇಲ್ ಅವಿವಾಗೆ ಹೊರಟಿತ್ತು. LY5102 ಸಂಖ್ಯೆಯ ಈ ಇಸ್ರೇಲ್ ವಿಮಾನಕ್ಕೆ ಅಂಟಲ್ಯಾ ಏರ್‌ಪೋರ್ಟ್‌ನಲ್ಲಿ ಟರ್ಕಿಶ್ ಕೆಲಸಗಾರರು ಇಂಧನ ತುಂಬಿಸಲು ನಿರಾಕರಿಸಿದ್ದಾರೆ.
ಬಳಿಕ ಅಲ್ಲಿಂದ ಇಂಧನ ತುಂಬಿಸಿಕೊಳ್ಳದೇ ಟೇಕಾಫ್ ಆದ ಇಸ್ರೇಲ್ ವಿಮಾನ ಗ್ರೀಸ್‌ನ ರೋಡೆಸ್‌ನಲ್ಲಿ ಮತ್ತೆ ಲ್ಯಾಂಡಿಂಗ್ ಆಗಿ ಇಂಧನ ತುಂಬಿಸಿಕೊಂಡು ಟೆಲ್ ಅವೀವಾ ತಲುಪಿದೆ. 2023ರ ಅಕ್ಟೋಬರ್ 7 ರಂದು ಇಸ್ರೇಲ್ ಹಾಗೂ ಪ್ಯಾಲೇಸ್ತೀನ್‌ನ ಹಮಾಸ್ ಉಗ್ರರ ಮಧ್ಯೆ ಯುದ್ಧ ಆರಂಭವಾದಾಗಿನಿಂದ ಇಸ್ರೇಲ್ ಹಾಗೂ ಟರ್ಕಿ ನಡುವಿನ ಸಂಬಂಧವೂ ಹಳಸಿದೆ. ಆಗಿನಿಂದಲೂ ಎರಡು ದೇಶಗಳ ನಡುವೆ ಪಯಣಿಸುತ್ತಿದ್ದ ನೇರ ವಿಮಾನಯಾನ ಸೇವೆಯೂ ಸ್ಥಗಿತಗೊಂಡಿದೆ.
ಟರ್ಕಿಯ ರಾಜತಾಂತ್ರಿಕ ಅಧಿಕಾರಿಗಳು ಕೂಡ ಪ್ರಯಾಣಿಕನೋರ್ವನ ತುರ್ತು ಅನಾರೋಗ್ಯ ಸ್ಥಿತಿಯ ಕಾರಣಕ್ಕೆ ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿತ್ತು ಎಂಬುದನ್ನು ಖಚಿತಪಡಿಸಿದೆ. ಮಾನೀಯ ನೆಲೆಯಲ್ಲಿ ವಿಮಾನಕ್ಕೆ ಇಂಧನ ನೀಡಲು ಮುಂದಾಗಿದ್ದೆವು. ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ನಡೆಸಬೇಕಿತ್ತು. ಆದರೆ ಇಸ್ರೇಲ್ ವಿಮಾನದ ಕ್ಯಾಪ್ಟನ್ ತನ್ನ ಸ್ವಂತ ಇಚ್ಛೆಯಿಂದ ಇಂಧನ ತುಂಬಿಸಿಕೊಳ್ಳದೇ ಹೊರಟು ಹೋದನು ಎಂದು ಟರ್ಕಿ ರಾಜತಾಂತ್ರಿಕ ಅಧಿಕಾರಿಗಳು ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.
ಇಬ್ರಾಹಿಂ ರೈಸಿ ಸಾವನ್ನು ಸಂಭ್ರಮಿಸಿದ ಇರಾನಿ ಜನ..! ಈ ಸಾವು ಆಕಸ್ಮಿಕವೋ..ಷಡ್ಯಂತ್ರವೋ..?
ಇತ್ತ ಇಸ್ರೇಲ್‌ನ ಮಾಧ್ಯಮ ಟೈಮ್ಸ್ ಆಫ್ ಇಸ್ರೇಲ್ ಕೂಡ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ಗ್ರೀಸ್‌ನ ರೋಡೆಸ್‌ಗೆ ತೆರಳುವ ಮೊದಲೂ ಅಂಟಲ್ಯಾ ಏರ್‌ಪೋರ್ಟ್‌ನ ಟಾಮ್ರಕ್ ಮೇಲೆ ಹಲವು ಗಂಟೆಗಳ ಕಾಲ ವಿಮಾನ ನಿಂತಿತ್ತು ಎಂದು ಹೇಳಿದೆ.
ಇತ್ತ ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ (Recep Tayyip Erdogan)ಅವರು ಗಾಜಾದಲ್ಲಿ ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಯ ಕಡು ವಿರೋಧಿಯಾಗಿದ್ದಾರೆ. ಅಲ್ಲದೇ ಹಲವು ಬಾರಿ ಗಾಜಾದ ಹಮಾಸ್ ಉಗ್ರ ಸಂಘಟನೆಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ. ಇತ್ತ ಹಮಾಸ್‌ನ್ನು ಇಸ್ರೇಲ್ ನಂಬರ್ 1 ಭಯೋತ್ಪಾದಕ ಸಂಘಟನೆ ಎಂದು ಗುರುತಿಸಿದೆ.
ರೈಸಿ ದುರ್ಮರಣ: ಸವಾಲಿನ ಹಾದಿಯಲ್ಲಿ ಇರಾನಿನ ರಾಜಕಾರಣ