ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಟಾಟಾ ಸಂಸ್ಥೆ ದಿಗ್ಗಜ ರತನ್ ಟಾಟಾ ಸಾವಿಗೆ ಸಂತಾಪ ಸೂಚಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. 

ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಟಾಟಾ ಸಂಸ್ಥೆ ದಿಗ್ಗಜ ರತನ್ ಟಾಟಾ ಸಾವಿಗೆ ಸಂತಾಪ ಸೂಚಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. 'ರತನ್ ಟಾಟಾ ಅವರು ಭಾರತ ಮತ್ತು ಇಸ್ರೇಲ್ ನಡುವಿನ ಸ್ನೇಹಕ್ಕೆ ಚಾಂಪಿಯನ್‌' ಎಂದು ನೆತನ್ಯಾಹು ಬಣ್ಣಿಸಿದ್ದಾರೆ. 
ಅ.9ರಂದು ನಿಧನರಾದ ಟಾಟಾ ಸಾವಿಗೆ ಸಂತಾಪ ಸೂಚಿಸಿ ಮೋದಿಗೆ ಪತ್ರ ಬರೆದಿರುವ ನೆತನ್ಯಾಹು, 'ಭಾರತದ ಹೆಮ್ಮೆಯ ಪುತ್ರ ರತನ್‌ ಟಾಟಾ, ಭಾರತ ಮತ್ತು ನಮ್ಮ ದೇಶದ ಸ್ನೇಹಕ್ಕೆ ಚಾಂಪಿಯನ್ ಆಗಿದ್ದರು. ರತನ್ ನಾವಲ್‌ ಟಾಟಾ ನಿಧನಕ್ಕೆ ನಾನು ಮತ್ತು ಇಸ್ರೇಲ್‌ನ ಜನರು ಸಂತಾಪ ವ್ಯಕ್ತ ಪಡಿಸುತ್ತಿದ್ದೇವೆ. ರತನ್ ಕುಟುಂಬಕ್ಕೆ ನನ್ನ ಸಂತಾಪ ತಿಳಿಸಿ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಪತ್ರ ಬರೆದಿದ್ದಾರೆ.

ಟ್ರುಡೋ ಪ್ರಧಾನಿ ಹುದ್ದೆ ತೊರೆಯಲು ಒತ್ತಡ

ಟೊರಂಟೋ: ಭಾರತದ ವಿರುದ್ಧ ಖಲಿಸ್ತಾನಿ ಸಿಖ್ಖರ ವಿಚಾರಕ್ಕೆ ಜಗಳ ಕಾದಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಬಗ್ಗೆ ಇದೀಗ ಸ್ವಪಕ್ಷದಲ್ಲೇ ಅಸಮಾಧಾನ ತಲೆಯೆತ್ತಿದ್ದು, ಅವರು ರಾಜೀನಾಮೆ ನೀಡುವಂತೆ ಲಿಬರಲ್‌ ಪಕ್ಷದ 20 ಸಂಸದರು ಒತ್ತಡ ಹೇರುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಟೊರಂಟೊ ಹಾಗೂ ಮಾಂಟ್ರಿಯಲ್‌ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಪಕ್ಷ ಸೋಲನುಭವಿಸಿದ ಬೆನ್ನಲ್ಲೇ ಕೆಲ ಸಂಸದರು ರಹಸ್ಯ ಸಭೆಗಳನ್ನು ನಡೆಸಿದ್ದು, ಟ್ರುಡೋ ರಾಜೀನಾಮೆಗೆ ಆಗ್ರಹಿಸುವ ಪತ್ರಕ್ಕೆ 20 ಸಂಸದರು ಸಹಿ ಮಾಡಿದ್ದಾರೆ.

ರತನ್ ಟಾಟಾ ಶ್ರೀಮಂತಿಕೆಗೆ, ವಿವಾಹವಾಗದೇ ಉಳಿಯುವುದಕ್ಕೆ ಅವರ ಜಾತಕದಲ್ಲಿನ ಈ ಯೋಗವೇ ಕಾರಣ!

ಕೆನಡಾದಲ್ಲಿರುವ ಭಾರತ ವಿರೋಧಿ ಖಲಿಸ್ತಾನಿ ಉಗ್ರರಿಗೆ ಆಶ್ರಯ ನೀಡಿ, ಅಲ್ಲಿನ ಹಿಂದೂಗಳು ಹಾಗೂ ಭಾರತದ ದೂತವಾಸದ ಮೇಲೆ ನಡೆಯುತ್ತಿರುವ ದಾಳಿಗಳನ್ನು ತಡೆಯದೇ ಟ್ರುಡೋ ಸುಮ್ಮನಿದ್ದಾರೆ. ಖಲಿಸ್ತಾನಿಗಳನ್ನು ಮತಕ್ಕಾಗಿ ಓಲೈಸುತ್ತಿದ್ದಾರೆ. ಇದು ಭಾರತ-ಕೆನಡಾ ಸಂಬಂಧ ಹಳಸಲು ಕಾರಣವಾಗಿದೆ.

ಅಗ್ನಿವೀರ ಯೋಜನೆ ಬಗ್ಗೆ ಮತ್ತೆ ರಾಹುಲ್‌ ಕಿಡಿ

ನವದೆಹಲಿ: ಮಹಾರಾಷ್ಟ್ರದ ನಾಸಿಕ್‌ನಲ್ಲಿ ತರಬೇತಿಯ ವೇಳೆ 2 ಅಗ್ನಿವೀರರು ಮೃತಪಟ್ಟಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ‘ಎಲ್ಲ ಯೋಧರ ಜೀವಕ್ಕೆ ಏಕೆ ಒಂದೇ ಬೆಲೆ ಇಲ್ಲ? ಅಗ್ನಿವೀರರಿಗೆ ಒಂದು ನ್ಯಾಯ? ಬೇರೆ ಯೋಧರಿಗೆ ಇನ್ನೊಂದು ನ್ಯಾಯ ಏಕೆ?’ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಪ್ರಶ್ನಿಸಿದ್ದಾರೆ.

ನಾಸಿಕ್‌ನಲ್ಲಿ ಫೈರಿಂಗ್‌ ಅಭ್ಯಾಸದ ವೇಳೆ ಗೋಹಿಲ್‌ ವಿಶ್ವರಾಜ್‌ ಸಿಂಗ್‌ ಮತ್ತು ಸೈಕತ್‌ ಎಂಬ 2 ಅಗ್ನಿವೀರರು ಸಾವನ್ನಪ್ಪಿದ್ದರು. ಇವರ ಸಾವಿಗೆ ಸಂತಾಪ ಸೂಚಿಸಿರುವ ರಾಹುಲ್‌, ‘ಈ ಘಟನೆ ಅಗ್ನಿವೀರ ಯೋಜನೆ ಬಗ್ಗೆ ಪ್ರಶ್ನೆ ಹುಟ್ಟುಹಾಕುತ್ತಿದ್ದು, ಇದಕ್ಕೆ ಉತ್ತರಿಸುವಲ್ಲಿ ಬಿಜೆಪಿ ಸರ್ಕಾರ ಸೋತಿದೆ. ಮೃತ ಅಗ್ನಿವೀರರ ಕುಟುಂಬಗಳಿಗೆ ಅನ್ಯ ಹುತಾತ್ಮ ಯೋಧರಿಗೆ ನೀಡುವಷ್ಟೇ ಪರಿಹಾರ ನೀಡಲಾಗುವುದೇ? ಅಗ್ನಿವೀರರ ಪರಿವಾರಕ್ಕೆ ಪಿಂಚಣಿ ಸೇರಿದಂತೆ ಅನ್ಯ ಸರ್ಕಾರಿ ಸೌಲಭ್ಯಗಳು ಏಕೆ ಲಭಿಸುವುದಿಲ್ಲ? ಈ ತಾರತಮ್ಯ ಏಕೆ?’ ಎಂದು ಪ್ರಶ್ನಿಸಿದ್ದಾರೆ.

ಟಾಟಾ ಗ್ರೂಪ್ ಉತ್ತರಾಧಿಕಾರಿಯಾಗಿ ನೋಯೆಲ್ ಟಾಟಾ ನೇಮಕ

ಅಗ್ನಿವೀರ ಯೋಜನೆಯು ಸೇನೆಗೆ ಅನ್ಯಾಯ ಹಾಗೂ ಹುತಾತ್ಮರಿಗೆ ಅವಮಾನ ಎಂದಿರುವ ರಾಹುಲ್‌, ದೇಶದ ಹಾಗೂ ಯುವಕರ ಭವಿಷ್ಯದ ಸುರಕ್ಷತೆಗಾಗಿ ಬಿಜೆಪಿ ಸರ್ಕಾರದ ಅಗ್ನಿವೀರ ಯೋಜನೆಯನ್ನು ತೆಗೆದುಹಾಕಲು ನಮ್ಮ ಜೈಜವಾನ್‌ ಚಳವಳಿಯೊಂದಿಗೆ ಕೈಜೋಡಿಸಿ ಎಂದು ಕರೆ ನೀಡಿದ್ದಾರೆ.

ಕಾಶ್ಮೀ​ರ: 6 ವರ್ಷ ಬಳಿ​ಕ ರಾಷ್ಟ್ರಪತಿ ಆಡ​ಳಿತ ಹಿಂತೆ​ಗೆ​ತ
ನವದೆಹಲಿ: ಜಮ್ಮು-ಕಾಶ್ಮೀ​ರ​ದಲ್ಲಿ ಹೇರ​ಲಾ​ಗಿ​ದ್ದ ರಾಷ್ಟ್ರ​ಪತಿ ಆಳ್ವಿ​ಕೆ​ಯನ್ನು ಕೇಂದ್ರ ಸರ್ಕಾರ ಭಾನು​ವಾರ ಹಿಂಪ​ಡೆ​ದಿದೆ. ಇತ್ತೀ​ಚೆಗೆ ಚುನಾ​ವಣೆ ನಡೆದು ಎನ್‌​ಸಿ-ಕಾಂಗ್ರೆಸ್‌ ಕೂಟ ಗೆದ್ದಿದ್ದು, ಅ.16ಕ್ಕೆ ಅಧಿ​ಕಾರ ರಚ​ನೆಗೆ ಸಜ್ಜಾ​ಗಿದೆ. ಹೀಗಾಗಿ 2019ರಿಂದ ಇದ್ದ ರಾಷ್ಟ್ರ​ಪತಿ ಆಳ್ವಿಕೆ ಹಿಂಪ​ಡೆ​ಯ​ಲಾ​ಗಿ​ದೆ.