ಟಾಟಾ ಗ್ರೂಪ್ ಉತ್ತರಾಧಿಕಾರಿಯಾಗಿ ನೋಯೆಲ್ ಟಾಟಾ ನೇಮಕ
ರತನ್ ಟಾಟಾ ಅವರ ಮಲ ಸಹೋದರ ನೋಯೆಲ್ ಟಾಟಾ ಅವರನ್ನು ಟಾಟಾ ಗ್ರೂಪ್‌ನ ಉತ್ತರಾಧಿಕಾರಿಯಾಗಿ ನೇಮಿಸಲಾಗಿದೆ
ರತನ್ ಟಾಟಾ ಅವರ ನಿಧನದ ನಂತರ ಟಾಟಾ ಗ್ರೂಪ್‌ನ ಮುಂದಿನ ಉತ್ತರಾಧಿಕಾರಿ ಯಾರಾಗುತ್ತಾರೆ ಎಂಬ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಆದರೆ ಈಗ ರತನ್ ಟಾಟಾ ಅವರ ಮಲ ಸಹೋದರ ನೋಯೆಲ್ ಟಾಟಾ ಅವರನ್ನು ಟಾಟಾ ಗ್ರೂಪ್‌ನ ಉತ್ತರಾಧಿಕಾರಿಯಾಗಿ ನೇಮಿಸಲಾಗಿದೆ. ನಿನ್ನೆ ರತನ್ ಟಾಟಾ ಅವರು ತಮ್ಮ 86ನೇ ವಯಸ್ಸಿನಲ್ಲಿ ತೀರಿಕೊಂಡಿದ್ದರು. ಹೀಗಾಗಿ ಇಂದು ಟಾಟಾ ಟ್ರಸ್ಟ್‌ನ ಉತ್ತರಾಧಿಕಾರಿಯಾಗಿ ನೋಯೆಲ್ ಟಾಟಾ ಅವರನ್ನು ನೇಮಿಸಲಾಗಿದೆ.
67 ವರ್ಷದ ನೋಯೆಲ್ ಟಾಟಾ ಅವರು ಸರ್ ದೋರಾಬ್ಜಿ ಟಾಟಾ ಟ್ರಸ್ಟ್‌ನ 11ನೇ ಅಧ್ಯಕ್ಷ ಹಾಗೂ ರತನ್ ಟಾಟಾ ಟ್ರಸ್ಟ್‌ನ 6ನೇ ಅಧ್ಯಕ್ಷರಾಗಿದ್ದಾರೆ. ಈ ಟಾಟಾ ಟ್ರಸ್ಟ್ ಟಾಟಾ ಸನ್ಸ್‌ನಲ್ಲಿ ಶೇಕಡಾ 66ರಷ್ಟು ಪಾಲು ಹೊಂದಿರುವುದರಿಂದ ಟಾಟಾ ಟ್ರಸ್ಟ್‌ನ ಉತ್ತರಾಧಿಕಾರಿ ನೇಮಕದ ಬಗ್ಗೆ ತೀವ್ರ ಕುತೂಹಲ ಹುಟ್ಟಿಸಿತ್ತು. ಟಾಟಾ ಸನ್ಸ್ ಈ ಟಾಟಾ ಬ್ರಾಂಡ್‌ನ ಅಡಿ ಹಲವು ಕಂಪನಿಗಳ ಮಾಲೀಕತ್ವವನ್ನು ಹೊಂದಿದೆ. ಜೊತೆಗೆ ಟಾಟಾ ಟ್ರಸ್ಟ್ 150 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿದೆ. ತಮ್ಮ ಜೀವನವನ್ನು ಸಮಾಜದ ಏಳ್ಗೆಗೆ ಮುಡಿಪಾಗಿಸಿದ್ದ ರತನ್ ಟಾಟಾ ಅವರು ಬುಧವಾರ ತಡರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ವಯೋ ಸಹಜ ಅನಾರೋಗ್ಯದಿಂದ ನಿಧನರಾಗಿದ್ದರು.
Explainer: ಟಾಟಾ ಸನ್ಸ್-ಟಾಟಾ ಟ್ರಸ್ಟ್ ಏನಿದು ಟಾಟಾ ಸಮೂಹದ ಅಂತರಾಳ, ಅಗಲಿದ ದಿಗ್ಗಜನ ಸ್ಥಾನ ತುಂಬುವವರು ಯಾರು?
ನೋಯೆಲ್ ಟಾಟಾ ಯಾರು?
ನೋಯೆಲ್ ಟಾಟಾ ಅವರು ಟಾಟಾ ಟ್ರೆಂಟ್‌ನ ಉತ್ತರಾಧಿಕಾರಿಯಾಗಿದ್ದಾರೆ ಹಾಗೆಯೇ ಟಾಟಾ ಸ್ಟೀಲ್ ಉಪಾಧ್ಯಕ್ಷರಾಗಿದ್ದಾರೆ. ಈಗ ಅವರು ಟಾಟಾ ಟ್ರಸ್ಟ್‌ನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
ಟಾಟಾ ಸನ್ಸ್ ಪ್ರೈವೆಟ್ ಲಿಮಿಟೆಡ್ ಟಾಟಾ ಸಮೂಹದ ವಿವಿಧ ಕಂಪನಿಗಳನ್ನು ಹೊಂದಿರುವ ಪ್ರಮುಖ ಖಾಸಗಿ ಕಂಪನಿಯಾಗಿದೆ. ಶಿಕ್ಷಣ, ಆರೋಗ್ಯ ಹೌಸಿಂಗ್ ಸೇರಿದಂತೆ ಟಾಟಾ ಟ್ರಸ್ಟ್ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದೆ. ಈ ಟಾಟಾ ಸಮೂಹವನ್ನು 1892ರಲ್ಲಿ ಮೊದಲ ಬಾರಿಗೆ ಜೇಮ್‌ಶೆಡ್ಜಿ ಟಾಟಾ ಅವರು ಸ್ಥಾಪಿಸಿದ್ದರು. ಇವರು ನೆಯೋಲ್ ಟಾಟಾ ಹಾಗೂ ರತನ್ ಟಾಟಾ ಅವರ ಮುತ್ತಜ್ಜ ಆಗಿದ್ದಾರೆ. ಪ್ರಸ್ತುತ ಟಾಟಾ ಟ್ರಸ್ಟ್‌ನ ಉತ್ತರಾಧಿಕಾರಿಯಾಗಿ ಆಯ್ಕೆಯಾದ ನೋಯೆಲ್ ಟಾಟಾ ಅವರು ಸರ್ ರತನ್ ಟಾಟಾ ಟ್ರಸ್ ಹಾಗೂ ಸರ್ ದೊರಬ್ಜಿ ಟಾಟಾ ಟ್ರಸ್ಟ್‌ನ ಟ್ರಸ್ಟಿ ಆಗಿದ್ದರು.
ರತನ್ ಟಾಟಾ 3800 ಕೋಟಿ ಆಸ್ತಿ ಯಾರಿಗೆ? ಟಾಟಾ ಗ್ರೂಪ್‌ನ 403 ಬಿಲಿಯನ್ ಸಾಮ್ರಾಜ್ಯಕ್ಕೆ ವಾರಸುದಾರರು ಯಾರು?