ನೋಡ ನೋಡುತ್ತಿದ್ದಂತೆ ಎಲ್ಲ ಮಣ್ಣಾದವು... ಅಫ್ಘಾನಿಸ್ತಾನ ಭೂಕಂಪ ಸಾವಿನ ಸಂಖ್ಯೆ 2000ಕ್ಕೇರಿಕೆ
ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ 6.3 ತೀವ್ರತೆಯ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ಬರೋಬ್ಬರಿ 2,000 ಕ್ಕೆ ಏರಿಕೆಯಾಗಿದೆ ಎಂದು ತಾಲಿಬಾನ್ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಇಸ್ಲಾಮಾಬಾದ್: ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ 6.3 ತೀವ್ರತೆಯ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ಬರೋಬ್ಬರಿ 2,000 ಕ್ಕೆ ಏರಿಕೆಯಾಗಿದೆ ಎಂದು ತಾಲಿಬಾನ್ ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಅವಶೇಷಗಳಡಿ ಸಿಲುಕಿದವರ ರಕ್ಷಣಾ ಕಾರ್ಯ ನಡೆಸಲಾಗುತ್ತಿದ್ದು, ಗಾಯಾಳುಗಳಿಗೆ ಆಸ್ಪತ್ರೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ನಡುವೆ ಹಲವು ಗ್ರಾಮಗಳೇ ಸಂಪೂರ್ಣವಾಗಿ ನಾಶವಾಗಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ನೋಡ ನೋಡುತ್ತಿದ್ದಂತೆಯೇ ಎಲ್ಲ ಮಣ್ಣಾದವು ಎಂದು ಜನರು ಅಳಲು ತೋಡಿಕೊಂಡಿದ್ದಾರೆ. ಶನಿವಾರ ಭೂಕಂಪದ ಕೇಂದ್ರಬಿಂದು ಹೆರಾತ್ ನಗರದಲ್ಲಿ ಸಂಭವಿಸಿದ ಭೂಕಂಪವು ಕಳೆದ ಎರಡು ದಶಕದಲ್ಲೇ ದೇಶಕ್ಕೆ ಅಪ್ಪಳಿಸಿದ ಭಾರೀ ವಿನಾಶಕಾರಿ ಭೂಕಂಪವಾಗಿದೆ. 6.3, 5.9 ಮತ್ತು 5.5 ತೀವ್ರತೆಯ ಮೂರು ಪ್ರಬಲ ಭೂಕಂಪಗಳು ಸಂಭವಿಸಿದ್ದು ಒಟ್ಟು 5 ಬಾರಿ ಭೂಕಂಪ ಸಂಭವಿಸಿವೆ.
ವಿದೇಶದ ಅತಿ ದೊಡ್ಡ ಹಿಂದೂ ದೇಗುಲ ಅಮೆರಿಕದಲ್ಲಿ ಉದ್ಘಾಟನೆ: ಆ.18ರಿಂದ ಭಕ್ತರಿಗೆ ಮುಕ್ತ ಪ್ರವೇಶ
ಇನ್ನು ಘಟನೆಯಲ್ಲಿ 465 ಮನೆಗಳು ನಾಶವಾಗಿದ್ದು 135ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ನಗರದಲ್ಲಿ ದೂರವಾಣಿ ಸಂಪರ್ಕವೂ ಕಡಿತಗೊಂಡಿದ್ದರಿಂದ ರಕ್ಷಣಾ ಕಾರ್ಯಚರಣೆಯಲ್ಲಿ ತೊಂದರೆಯುಂಟಾಗಿದೆ. 2022ರ ಜೂನ್‌ನಲ್ಲಿ ಪೂರ್ವ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಲ್ಲಿ 1,000 ಜನ ಮೃತಪಟ್ಟಿದ್ದರು.
ಅಯ್ಯೋ ದೇವ್ರೆ... ಸತ್ತವರ ಶವ ಹೂಳೋ ಬದ್ಲು ತಿನ್ತಿದ್ರಾ ಯುರೋಪಿಯನ್ನರು?