Asianet Suvarna News Asianet Suvarna News

ಇಸ್ರೇಲ್‌ ವಾಯುದಾಳಿಗೆ ಗಾಜಾದಲ್ಲಿನ ಹಮಾಸ್‌ ಉಗ್ರರ ಸುರಂಗ ಧ್ವಂಸ!

* ಇಸ್ರೇಲ್‌ ಮತ್ತು ಹಮಾಸ್‌ ಬಂಡುಕೋರರ ನಡುವಿನ ಸಂಘರ್ಷ 

*  ಸೋಮವಾರ ಮುಂಜಾನೆ ಗಾಜಾಪಟ್ಟಿಪ್ರದೇಶದಲ್ಲಿ ನಡೆಸಿದ ವಾಯುದಾಳಿಯಲ್ಲಿ 15 ಕಿ.ಮೀ ಉಗ್ರ ಸುರಂಗಗಳು ಮತ್ತು 9 ಹಮಾಸ್‌ ಕಮಾಂಡರ್‌ಗಳ ಮನೆ ನಾಶ

* ಈ ಹಿಂದಿನ ದಾಳಿಯಲ್ಲಿ 42 ಮಂದಿ ಮೃತ

Israel Palestine conflic IDF strikes Hamas tunnels in Gaza pod
Author
Bangalore, First Published May 18, 2021, 4:11 PM IST

ಗಾಜಾ(ಮೇ.18): ಇಸ್ರೇಲ್‌ ಮತ್ತು ಹಮಾಸ್‌ ಬಂಡುಕೋರರ ನಡುವಿನ ಸಂಘರ್ಷ ಮತ್ತಷ್ಟುತೀವ್ರಗೊಂಡಿದ್ದು, ಇಸ್ರೇಲ್‌ ಸೋಮವಾರ ಮುಂಜಾನೆ ಗಾಜಾಪಟ್ಟಿಪ್ರದೇಶದಲ್ಲಿ ನಡೆಸಿದ ವಾಯುದಾಳಿಯಲ್ಲಿ 15 ಕಿ.ಮೀ ಉಗ್ರ ಸುರಂಗಗಳು ಮತ್ತು 9 ಹಮಾಸ್‌ ಕಮಾಂಡರ್‌ಗಳ ಮನೆ ನಾಶವಾಗಿದೆ.

'ಗಾಜಾ ಪಟ್ಟಿ ಯುದ್ಧೋನ್ಮಾದ ನಿಲ್ಲಿಸಿ' ವಿಶ್ವಸಂಸ್ಥೆಯಲ್ಲಿ ಭಾರತದ ಮಾತು

ಇಸ್ರೇಲ್‌ ಸೇನೆ ಹೇಳಿಕೊಂಡ ಪ್ರಕಾರ 15 ಕಿ. ಮೀ. ಉದ್ದದ  ರಹಸ್ಯ ಸುರಂಗವನ್ನು ನಾಶಗೊಳಿಸಲಾಗಿದೆ. ಕಳೆದ ಸೋಮವಾರ ಆರಂಭವಾಗಿರುವ ಈ ಕಾಳಗದಲ್ಲಿ ಇದುವರೆಗೆ 55 ಮಕ್ಕಳು, 33 ಮಹಿಳೆಯರೂ  ಸೇರಿದಂತೆ 200ಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದಾರೆ. 1,230ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ.

ಸೋಮವಾರದ ವೈಮಾನಿಕ ದಾಳಿಯಲ್ಲಿ ಹಮಾಸ್‌ ಹಿರಿಯ ಕಮಾಂಡರ್‌  ಹುಸ್ಸಮ್‌ ಅಬು ಹಬ್ರಿಡ್‌ನ‌ನ್ನು ಕೊಲ್ಲಲಾಗಿದೆ. ಗಾಜಾ ಸಿಟಿಯ ಮೇಯರ್‌ ಯಾಹ್ಯಾ ಸರ್ರಾಜ್‌ ನೀಡಿದ ಮಾಹಿತಿ ಪ್ರಕಾರ ಬಾಂಬ್‌ ದಾಳಿಯಿಂದ ರಸ್ತೆ ಮತ್ತು ಇತರ ಮೂಲ ಸೌಕರ್ಯಗಳಿಗೆ ಭಾರಿ  ಹಾನಿ ಉಂಟಾಗಿದೆ. ಗಾಜಾ ಸಿಟಿಗೆ 3 ದಿನಗಳಿಂದ ವಿದ್ಯುತ್‌ ವ್ಯತ್ಯಯ ಉಂಟಾಗಿದೆ.

ಪ್ಯಾಲೆಸ್ತೀನ್‌ ಮೇಲೆ ಇಸ್ರೇಲ್‌ ವಾಯು ದಾಳಿ ಇನ್ನಷ್ಟು ತೀವ್ರ!

ಕಳೆದೊಂದು ವಾರದಿಂದ ದಾಳಿ

'ಇಸ್ರೇಲ್‌ ಸೇನೆ ಕಳೆದೊಂದು ವಾರದಿಂದ ಗಾಜಾ ನಗರದ ಮೇಲೆ ನಿರಂತರ ವೈಮಾನಿಕ ದಾಳಿ ನಡೆಸುತ್ತಿದ್ದು, ಈ ಹಿಂದಿನ ದಾಳಿಯಲ್ಲಿ 42 ಮಂದಿ ಮೃತಪಟ್ಟಿದ್ದರು. 3 ಕಟ್ಟಡಗಳು ನೆಲಸಮವಾಗಿದ್ದವು. ಸೋಮವಾರ ನಡೆದ ದಾಳಿಯಲ್ಲಿ ಉಂಟಾದ ಸಾವು-ನೋವಿನ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ದಾಳಿ ಹಿಂದಿನ ಎಲ್ಲಾ ದಾಳಿಗಳಿಗಿಂತ ಹೆಚ್ಚು ತೀವ್ರವಾಗಿತ್ತು. ಆದರೆ ದಾಳಿಗೂ ಮೊದಲು ಇಸ್ರೇಲ್‌ ಸೇನೆ ಎಚ್ಚರಿಕೆ ನೀಡಿತ್ತು. ಹಾಗಾಗಿ ಎಲ್ಲರೂ ಜಾಗ ಖಾಲಿ ಮಾಡಿದ್ದರು ಎಂದು ನಿವಾಸಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios