Asianet Suvarna News Asianet Suvarna News

ಇಸ್ರೇಲ್ ಯುದ್ಧ: ವೈದ್ಯಕೀಯ ಸೌಲಭ್ಯ ಅನ್ನಾಹಾರವಿಲ್ಲದೇ ಸಾವಿರಾರು ಜನ ಸಾವನ್ನಪ್ಪುವ ಆತಂಕ

ಇಸ್ರೇಲ್ ದಾಳಿಯಿಂದ ಗಾಯಗೊಂಡಿರುವ ಗಾಜಾಪಟ್ಟಿ ಪ್ರದೇಶದ ಸಾವಿರಾರು ಜನರು ಗಾಜಾದಲ್ಲಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈಗಾಗಲೇ ಆಸ್ಪತ್ರೆಗಳ ಸಂಪನ್ಮೂಲಗಳು ಖಾಲಿಯಾಗುತ್ತಿವೆಯಾದ್ದರಿಂದ ಒಂದು ವೇಳೆ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬೇಕಾದ ಸೌಕರ್ಯಗಳು ಸಿಗದೇ ಹೋದರೆ ಸಾವಿರಾರು ಜನರು ಸಾವನ್ನಪ್ಪಲಿದ್ದಾರೆ ಎಂದು ಆಸ್ಪತ್ರೆಗಳ ವೈದ್ಯಾಧಿಕಾರಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

Israel Palestin War Fear of thousands dying without medical facilities or food Desperate people search for food water in Gaza akb
Author
First Published Oct 16, 2023, 7:12 AM IST

ಖಾನ್ ಯುನಿಸ್: ಇಸ್ರೇಲ್ ದಾಳಿಯಿಂದ ಗಾಯಗೊಂಡಿರುವ ಗಾಜಾಪಟ್ಟಿ ಪ್ರದೇಶದ ಸಾವಿರಾರು ಜನರು ಗಾಜಾದಲ್ಲಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈಗಾಗಲೇ ಆಸ್ಪತ್ರೆಗಳ ಸಂಪನ್ಮೂಲಗಳು ಖಾಲಿಯಾಗುತ್ತಿವೆಯಾದ್ದರಿಂದ ಒಂದು ವೇಳೆ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬೇಕಾದ ಸೌಕರ್ಯಗಳು ಸಿಗದೇ ಹೋದರೆ ಸಾವಿರಾರು ಜನರು ಸಾವನ್ನಪ್ಪಲಿದ್ದಾರೆ ಎಂದು ಆಸ್ಪತ್ರೆಗಳ ವೈದ್ಯಾಧಿಕಾರಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್‌ನ ವೈಮಾನಿಕ ದಾಳಿಯಿಂದ ತಪ್ಪಿಸಿಕೊಳ್ಳಲು ಜನರೆಲ್ಲ ಆಸ್ಪತ್ರೆಗಳ ಬಳಿ ಬಂದು ನೆಲೆಸುತ್ತಿದ್ದು, ಗಾಜಾದ ಮುಖ್ಯ ಆಸ್ಪತ್ರೆ ಯಾಗಿರುವ ಅಲ್ ಶಿಫಾದಲ್ಲಿ ಅಂದಾಜು 35,000 ಜನರು ಮರದ ಕೆಳಗೆ, ರಕ್ತಸಿಕ್ತವಾದ ಆಸ್ಪತ್ರೆಯ ನೆಲವನ್ನೇ ಆಶ್ರಯಿಸಿದ್ದಾರೆ. ಇಲ್ಲಿನ ಶೇ.95ರಷ್ಟು ಸಂಪನ್ಮೂಲಗಳು ಖಾಲಿ ಆಗಿದ್ದು, ಒಂದು ವೇಳೆ ಜನರೇಟರ್‌ನ ಇಂಧನ ಖಾಲಿಯಾದರೆ ಸಾವಿರಾರು ರೋಗಿಗಳಿಗೆ ತೀವ್ರ ತೊಂದರೆಯಾಗಲಿದೆ.

ಗಾಜಾದಲ್ಲಿ ಹತಾಶ ಜನರಿಂದ ಆಹಾರ, ನೀರಿಗಾಗಿ ಹುಡುಕಾಟ

ಇಸ್ರೇಲ್‌ನಿಂದ ಭಾರಿ ಪ್ರಮಾಣದ ವಾಯುದಾಳಿ ಎದುರಿಸುತ್ತಿರುವ ಗಾಜಾಪಟ್ಟಿಯಲ್ಲಿ (Gaza Strip) ಜನರು ಈಗ ಆಹಾರ ಹಾಗೂ ನೀರಿಗಾಗಿ ತೀವ್ರ ಪರದಾಡುತ್ತಿದ್ದಾರೆ. ಸುರಕ್ಷಿತ ಜಾಗ ಮತ್ತು ಅನ್ನಾಹಾರಗಳನ್ನು ಅರಸಿಕೊಂಡು ಜನಸಾಮಾನ್ಯರು ಬೀದಿ ಬೀದಿ ಅಲೆಯುತ್ತಿರುವ ದೃಶ್ಯಗಳು ಸರ್ವೇಸಾಮಾನ್ಯವಾಗಿವೆ. 23 ಲಕ್ಷ ಜನಸಂಖ್ಯೆಯ ಗಾಜಾಪಟ್ಟಿಯಲ್ಲಿ ಹಮಾಸ್‌ ಉಗ್ರರ (Hamas militants) ನೆಲೆಯಾಗಿರುವ ಉತ್ತರ ಗಾಜಾವನ್ನು ಬಿಟ್ಟು ದಕ್ಷಿಣಕ್ಕೆ ತೆರಳಲು ನಾಗರಿಕರಿಗೆ ಇಸ್ರೇಲ್ ಈಗಾಗಲೇ ಸೂಚನೆ ನೀಡಿದೆ. ಅದರಂತೆ ಲಕ್ಷಾಂತರ ಜನರು ದಕ್ಷಿಣಕ್ಕೆ ತೆರಳಿದ್ದಾರೆ. ಆದರೆ ಉತ್ತರದಲ್ಲಿ ಇನ್ನೂ ಸಾಕಷ್ಟು ಜನರಿದ್ದು, ಅವರು ಆಹಾರ, ನೀರು, ಔಷಧಗಳು (medicine) ಸಿಗದೆ, ಅಡಗಿಕೊಳ್ಳಲು ಸುರಕ್ಷಿತ ಜಾಗವೂ ಸಿಗದೆ ಎಲ್ಲೆಂದರಲ್ಲಿ ಅಲೆಯುತ್ತಿದ್ದಾರೆ.

ಹಮಾಸ್ ಉಗ್ರರಿಂದ ಜೀವ ಉಳಿಸಲು ಬಚ್ಚಿಕೊಂಡಿದ್ದ ತಾಯಿ ಮಗನ ರಕ್ಷಿಸಿದ ಇಸ್ರೇಲ್ ಸೇನೆ!

ಗಾಜಾ ಪಟ್ಟಿ ಮೇಲೆ ದಾಳಿ ತಡವಾಗಲು ಹಲವು ಕಾರಣ


ಟೆಲ್ ಅವಿವ್: ಹಮಾಸ್ ಉಗ್ರರ ಹುಟ್ಟಡಗಿಸಲು ಇಸ್ರೇಲ್ ಭಾನುವಾರ ಗಾಜಾ ಪಟ್ಟೆ ಒಳಗೆ ಭೂದಾಳಿ ನಡೆಸುವುದಾಗಿ ತಿಳಿಸಿತ್ತು. ಇದಕ್ಕಾಗಿ ಉತ್ತರ ಗಾಜಾದಲ್ಲಿರುವ ಜನರಿಗೆ 24 ತಾಸಿನಲ್ಲಿ ದಕ್ಷಿಣಕ್ಕೆ ತೆರಳುವಂತೆ ಸಮಯ ನೀಡಿತ್ತು. ಆದರೆ ಸಮಯ ಮುಗಿದರೂ ಇಸ್ರೇಲ್ ದಾಳಿ ನಡೆಸಿಲ್ಲ, ಭೂಮಿ ಹಾಗೂ ಕಡಲಿನ ಮೂಲಕ ದಾಳಿ ನಡೆಸಲು ಇಸ್ರೇಲ್ ಸರ್ವ ಸನ್ನದ್ಧವಾಗಿದೆ. ಆದರೆ ಹವಾಮಾನದಲ್ಲಿ ಮೋಡ ಮುಸುಕಿದ ವಾತಾವರಣ ಇರುವುದರಿಂದ ಡ್ರೋನ್‌ ದಾಳಿ ಮಾಡಲು ಕಷ್ಟವಾಗಿದೆ. ಅಲ್ಲದೇ ಹಮಾಸ್ ಉಗ್ರರು ಒತ್ತೆಯಾಳುಗಳನ್ನು ಗಾಜಾದಲ್ಲಿರುವ ಸುರಂಗಗಳಲ್ಲಿ ಅಡಗಿಸಿ ಇಟ್ಟಿರುವ ಶಂಕೆ ಇದ್ದು, ಅದನ್ನು ಹುಡುಕಲು ಸಮಯ ತೆಗೆದುಕೊಳ್ಳುತ್ತಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಗಾಜಾ ನಾಗರೀಕರಿಗೆ ನೀಡಿದ್ದ ಗಡುವು ಅಂತ್ಯ, ಗಡಿಯತ್ತ ನುಗ್ಗಿದ ಇಸ್ರೇಲ್ ಟ್ಯಾಂಕರ್!

ಗಡುವು ಅಂತ್ಯ, ಯಾವುದೇ ಕ್ಷಣ ಇಸ್ರೇಲ್ ದಾಳಿ

ನವದೆಹಲಿ: ಗಾಜಾಪಟ್ಟಿಯಲ್ಲಿರುವ ಹಮಾಸ್ ಉಗ್ರರ ನೆಲೆಗಳನ್ನು ಸಂಪೂರ್ಣ ನಿರ್ನಾಮ ಮಾಡು ವುದಾಗಿ ಪಣ ತೊಟ್ಟಿರುವ ಇಸ್ರೇಲ್‌ನ ಸೇನೆ ಯಾವುದೇ ಕ್ಷಣದಲ್ಲಿ ಗಾಜಾಪಟ್ಟಿಯ ಗಡಿಯೊಳಗೆ ನಿರ್ಣಾಯಕ ಭೂದಾಳಿ ನಡೆಸಲು ಸಜ್ಜಾಗಿ ನಿಂತಿದೆ. ಉತ್ತರ ಗಾಜಾದಲ್ಲಿ ಹಮಾಸ್‌ನ ನೆಲೆಗಳಿರುವ ಪ್ರದೇಶವನ್ನು ಬಿಟ್ಟು ದಕ್ಷಿಣ ಗಾಜಾಕ್ಕೆ ತೆರಳಲು ಗಾಜಾದಲ್ಲಿರುವ ಪ್ಯಾಲೆಸ್ತೀನಿಯನ್ನರಿಗೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಅಂತಿಮ ಗಡುವನ್ನು ಇಸ್ರೇಲ್ ಸೇನಾಪಡೆ ನೀಡಿತ್ತು. ಈ 'ಸೇಫ್ ಅವಧಿ ಅಂತ್ಯಗೊಂಡಿದ್ದು, ಸರ್ಕಾರದಿಂದ ಸೂಚನೆ ಬಂದ ಕೂಡಲೇ ಭೂದಾಳೆ ಆರಂಭಿಸುವುದಾಗಿ ತಿಳಿಸಿದೆ.

'ಇದು ಉತ್ತರ ಗಾಜಾ ತೊರೆಯಲು ನಾಗರಿಕರಿಗೆ ಕೊನೆಯ ಅವಕಾಶ,  ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಾವು ಯಾವುದೇ ರೀತಿ ದಾಳಿ ನಡೆಸುವುದಿಲ್ಲ. ಈ ಸಮಯದ ಸದುಪಯೋಗ ಮಾಡಿಕೊಂಡು ದಕ್ಷಿಣ ಗಾಜಾಕ್ಕೆ ತೆರಳಿ' ಎಂದು ಇಸ್ರೇಲ್ ಸೇನೆ ಮೊದಲೇ ಪ್ರಕಟಿಸಿತ್ತು. ಈಗಾಗಲೇ ಮೂರ್ನಾಲ್ಕು ದಿನಗಳಿಂದ ಉತ್ತರ ಗಾಜಾ ಬಿಟ್ಟು ದಕ್ಷಿಣಕ್ಕೆ ಹೋಗುವಂತೆ ಸತತವಾಗಿ ಗಾಜಾಪಟ್ಟಿಯ ನಾಗರಿಕರಿಗೆ ಇಸ್ರೇಲ್ ಸೂಚಿಸುತ್ತಾ ಬಂದಿದೆ. ಜನಸಾಮಾನ್ಯರಿಗೆ ಜೀವ ಉಳಿಸಿಕೊಳ್ಳಲು ಭಾನುವಾರ ಕೊನೆಯ ಅವಕಾಶ ನೀಡಿದ ಬಳಿಕ ಇದೀಗ ಅಂತಿಮ ದಾಳಿಗೆ ಕ್ಷಣಗಣನೆ ಆರಂಭಿಸಿದೆ.

ಜೀವ ಉಳಿಸಿಕೊಳ್ಳಲು ಓಡಿ ಹೋಗುತ್ತಿರುವ ತನ್ನ ನಾಗರಿಕರನ್ನೇ ತಡೆಯುತ್ತಿರುವ ಹಮಾಸ್‌

ಭೂಮಿ, ಆಕಾಶ ಮತ್ತು ಸಮುದ್ರ ಮೂರೂ ಕಡೆಯಿಂದ ಏಕಕಾಲಕ್ಕೆ ದಾಳಿ ನಡೆಸುವ ಮೂಲಕ ಹಮಾಸ್ ಉಗ್ರರ ಜಾಲವನ್ನು ಸಂಪೂರ್ಣವಾಗಿ ನಾಶಪಡಿಸುವ ಗುರಿಯನ್ನು ಇಸ್ರೇಲ್ ಸೇನೆ ಹೊಂದಿದೆ. ಉತ್ತರ ಗಾಜಾದಲ್ಲಿ ಹಮಾಸ್ ಉಗ್ರರ ನೆಲೆಗಳು ಹಾಗೂ ಯುದ್ಧಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳು ಇದ್ದು, ಅವುಗಳನ್ನು ಸಂಪೂರ್ಣ ನೆಲಸಮ ಮಾಡಿದ ಬಳಿಕ ಮತ್ತೆ ಅಲ್ಲಿಗೆ ಮರಳಲು ಗಾಜಾಪಟ್ಟಿಯ ಜನ ಸಾಮಾನ್ಯರಿಗೆ ಅವಕಾಶ ನೀಡುವುದಾಗಿ ಇಸ್ರೇಲ್ ಈ ಹಿಂದೆಯೇ ಪ್ರಕಟಿಸಿದೆ.

ಶೌಚಾಲಯದಲ್ಲಿ ಇದ್ದವರ ಮೇಲೂ ಹಮಾಸ್‌ ದಾಳಿ, ಇಸ್ರೇಲ್‌ ಯುದ್ಧದ ನಿಯಮ ಪಾಲಿಸುತ್ತಿಲ್ಲ ಎಂದ ವಿಶ್ವಸಂಸ್ಥೆ

ದಕ್ಷಿಣ ಭಾಗಕ್ಕೆ ತೆರಳಲು ಜನರಿಗೆ ಹಮಾಸ್‌ ಉಗ್ರರಿಂದ ಅಡ್ಡಿ

ಲೆಬನಾನ್: ಇಸ್ರೇಲ್ ಉತ್ತರ ಗಾಜಾದಿಂದ ದೇಶದ ದಕ್ಷಿಣ ಭಾಗಗಳಿಗೆ ತೆರಳಲು ಮುಂದಾದ ನಾಗರಿಕರನ್ನು ಹಮಾಸ್ ಉಗ್ರರು ತಡೆಯುತ್ತಿದ್ದಾರೆ ಎಂದು ಇಸ್ರೇಲ್ ಆರೋಪಿಸಿದೆ. ದಕ್ಷಿಣ ಭಾಗಗಳತ್ತ ತೆರಳಲು ಇರುವ ಮಾರ್ಗಗಳಲ್ಲಿ ನಿಂತಿರುವ ಹಮಾಸ್ ಉಗ್ರರು, 'ವಾಹನಗಳ ಬೀಗ ವಶಪಡಿಸಿಕೊಂಡು ಅತ್ತ ಹೋಗದಂತೆ ನಿಯಂತ್ರಿಸುತ್ತಿದ್ದಾರೆ. ಜನರನ್ನು ತಮ್ಮ ವಶದಲ್ಲಿಟ್ಟುಕೊಂಡು ಆತ್ಮರಕ್ಷಣೆ ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿರುವ ಹಮಾಸ್, ಅಮಾಯಕರ ಚಿನ್ನಾಭರಣಗಳು, ನಗದು ಹಣ ಮುಂತಾದ ಅಮೂಲ್ಯ ವಸ್ತುಗಳನ್ನು ಬಲವಂತವಾಗಿ ಕಿತ್ತುಕೊಂಡು ಕ್ರೌರ್ಯ ಮೆರೆಯುತ್ತಿದ್ದಾರೆ' ಎಂದು ಇಸ್ರೇಲ್ ಸೇನೆ ಆರೋಪಿಸಿದೆ.

Follow Us:
Download App:
  • android
  • ios