ಇಸ್ಲಾಮಿಕ್ ಜಿಹಾದ್‌ಗೆ ಯತ್ನಿಸಿದ ಸಂಘಟನೆಯ ಮೇಲೆ ಇಸ್ರೇಲ್ ಅಪರೇಷನ್ ಬ್ರೇಕಿಂಗ್ ಡಾನ್!
ಆಗಸ್ಟ್ 6 ರಂದು ಇಸ್ರೇಲ್ ಇದ್ದಕ್ಕಿದ್ದಂತೆ ಗಾಜಾ ಪಟ್ಟಿಯ ಮೇಲೆ ದಾಳಿ ಮಾಡಿತ್ತು. ಸಾಮಾನ್ಯವಾಗಿ ಹಮಾಸ್ ಬಂಡುಕೋರರ ಮೇಲೆ ದಾಳಿ ಮಾಡುತ್ತಿದ್ದ ಇಸ್ರೇಲ್ ಈ ಬಾರಿ, ಪ್ಯಾಲೆಸ್ತೇನ್ ಇಸ್ಲಾಮಿಕ್ ಜಿಹಾದ್ (ಪಿಐಜೆ)ಎನ್ನುವ ಸಂಘಟನೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿತ್ತು. ಈ ಸಂಸ್ಥೆಗಳು ತನಗೆ ಬೆದರಿಕೆ ಎಂದು ಪರಿಗಣಿಸಿದ ಇಸ್ರೇಲ್, ರಾಕೆಟ್ ದಾಳಿ ನಡೆಸಿದೆ. ಇನ್ನೊಂದೆಡೆ ಪಿಐಜೆ ಕಡೆಯಿಂದಲೂ ರಾಕೆಟ್‌ಗಳನ್ನು ಹಾರಿಸಲಾಗಿದೆ. ಕಳೆದ ವರ್ಷ ಮೇನಲ್ಲಿ 11 ದಿನಗಳ ಹೋರಾಟದ ನಂತರ ಇದು ಗಾಜಾದ ಮೇಲೆ ನಡೆದ ಅತಿದೊಡ್ಡ ದಾಳಿಯಾಗಿದೆ.
ಟೆಲ್ ಅವೀವ್ (ಆ.12): ತನ್ನ ದೇಶಕ್ಕೆ ಒಂದು ಸಣ್ಣ ಅಪಾಯದ ಮುನ್ಸೂಚನೆ ಕಂಡರೂ ಅದನ್ನು ಬುಡದಲ್ಲಿಯೇ ಹೊಸಕಿ ಹಾಕೋದ್ರಲ್ಲಿ ನಿಸ್ಸೀಮವಾಗಿರುವ ಇಸ್ರೇಲ್, ಅಂಥದ್ದೇ ಮತ್ತೊಂದು ಸೇನಾ ಕಾರ್ಯಾಚರಣೆ ಆಪರೇಷನ್ ಬ್ರೇಕಿಂಗ್ ಡಾನ್‌ಅನ್ನು ಆರಂಭಿಸಿದೆ. ಕಳೆದ ಆಗಸ್ಟ್ 6 ರಂದು ಇದ್ದಕ್ಕಿಂದ್ದಂತೆ ಗಾಜಾಪಟ್ಟಿಯ ಕಡೆಗೆ ಗುರಿ ಇಟ್ಟು ರಾಕೆಟ್ ದಾಳಿ ನಡೆಸಿತು. ಸಾಮಾನ್ಯವಾಗಿ ಹಮಾಸ್ ಬಂಡುಕೋರರ ಮೇಲೆ ಈ ರೀತಿ ದಾಳಿ ನಡೆಸುವ ಇಸ್ರೇಲ್ ಈ ಬಾರಿ, ಪ್ಯಾಲೆಸ್ತೇನ್ ಇಸ್ಲಾಮಿಕ್ ಜಿಹಾದ್ ಎನ್ನುವ ಸಂಘಟನೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಈವರೆಗೂ 47 ಮಂದಿ ಪ್ಯಾಲೆಸ್ತೇನಿಯನ್ನರು ಸಾವು ಕಂಡಿದ್ದು, ಸಂಘಟನೆ ಸಂಪೂರ್ಣ ನಿರ್ನಾಮವಾಗುವವರೆಗೂ ದಾಳಿ ಮುಂದುವರಿಸುವುದಾಗಿ ಇಸ್ರೇಲ್ ಹೇಳಿದೆ. ಕಳೆದ ವರ್ಷ ಇದೇ ರೀತಿಯಲ್ಲಿ 11 ದಿನಗಳ ಕಾಲ ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ಹಮಾಸ್ ಬಂಡುಕೋರರ ನಡುವೆ ಚಕಮಕಿ ನಡೆದಿತ್ತು. ಅಂದು ಈಜಿಸ್ಟ್ ದೇಶದ ಮಧ್ಯಸ್ಥಿಕೆಯಿಂದ ಈ ಯುದ್ಧ ನಿಂತಿತ್ತು. ಅಲ್‌ಜಜೀರಾ ವರದಿ ಮಾಡಿರುವ ಪ್ರಕಾರ, ಅಗಸ್ಟ್ 6-8ರವರೆಗೆ ಇಸ್ರೇಲ್ ನಡೆಸಿರುವ ದಾಳಿಯಲ್ಲಿ 47 ಪ್ಯಾಲೆಸ್ತೇನ್ ನಾಗರೀಕರು ಹತರಾಗಿದ್ದು, ಅದರಲ್ಲಿ 16 ಮಂದಿ ಮಕ್ಕಳಾಗಿದ್ದಾರೆ ಎಂದಿದೆ.
ಒಂದು ವರ್ಷದ ಶಾಂತಿಯ ಬಳಿಕ ಇಸ್ರೇಲ್ ಇಂಥದ್ದೊಂದು ಘಾತಕ ದಾಳಿ ಅಥವಾ ಸೇನಾ ಕಾರ್ಯಾಚರಣೆ ನಡೆಸಲು ಕಾರಣವೇನು? ಇದರಿದ ಇಸ್ರೇಲ್ ಪಡೆಯೋದೇನು ಎನ್ನುವ ಪ್ರಶ್ನೆಗಳು ಆರಂಭವಾಗಿದೆ. ಹರಿದ ಗಾಳಿಪಟದ ಆಕೃತಿಯಲ್ಲಿರುವ ಇಸ್ರೇಲ್‌ನ ಮಗ್ಗುಲಲ್ಲೇ ಇರುವ ಗಾಜಾ ಪಟ್ಟಿಯಲ್ಲಿ ಸಾಕಷ್ಟು ಇಸ್ರೇಲ್ ವಿರೋಧಿ ಸಂಘಟನೆಗಳಿವೆ. ಇವುಗಳಿಗೆ ಇಸ್ರೇಲ್‌ನ ಸುತ್ತ ಇರುವ ಮುಸ್ಲಿಂ ದೇಶಗಳು ಬೆಂಬಲ ನೀಡುತ್ತಿದೆ ಎನ್ನುವುದು ಮೊದಲಿನಿಂದಲೂ ಇಸ್ರೇಲ್‌ನ ಆರೋಪ. ಅದರಲ್ಲಿ ಪ್ರಮುಖವಾಗಿರುವುದು ಹಮಾಸ್. ಇಲ್ಲಿಯವರೆಗೂ ಹಮಾಸ್‌ಅನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲು ಯಶ ಕಂಡಿದ್ದ ಇಸ್ರೇಲ್‌ಗೆ ಕಳೆದ ಕೆಲ ವರ್ಷಗಳಿಂದ ಪ್ಯಾಲೆಸ್ತೇನ್ ಇಸ್ಲಾಮಿಕ್ ಜಿಹಾದ್ ಎನ್ನುವ ಸಂಘಟನೆ ಬೆದರಿಕೆ ಒಡ್ಡುತ್ತಿತ್ತು. ಈ ಸಂಘಟನೆಗೆ ಇರಾನ್ ನೇರವಾಗಿಯೇ ಬೆಂಬಲ ನೀಡುತ್ತಿತ್ತು. ಇದರ ಕೇಂದ್ರ ಕಚೇರಿ ಸಿರಿಯಾದ ಡಮಾಸ್ಕಸ್‌ನಲ್ಲಿದೆ.
ದೇಶಕ್ಕೆ ಅಪಾಯವಿದೆ: ಇಸ್ಲಾಮಿಕ್ ಜಿಹಾದ್‌ನಿಂದ ದೊಡ್ಡ ದಾಳಿಯ ಅಪಾಯವಿದೆ ಎಂದು ಇಸ್ರೇಲ್ ಹೇಳಿದೆ. ಆದ್ದರಿಂದ ಆಪರೇಷನ್ ಬ್ರೇಕಿಂಗ್ ಡಾನ್ ಆರಂಭ ಮಾಡಿತ್ತು. ಸಂಘಟನೆಯ ನಾಯಕತ್ವವನ್ನು ತೊಡೆದುಹಾಕುವುದು ಇದರ ಮೂಲ ಉದ್ದೇಶವಾಗಿತ್ತು. ಇಸ್ರೇಲ್ ಸೇನೆಯ ಪ್ರಕಾರ, ಪ್ಯಾಲೆಸ್ತೇನಿಯಲ್ ಇಸ್ಲಾಮಿಕ್ ಜಿಹಾದ್ ಮುಖ್ಯಸ್ಥ ಖಾಲಿದ್ ಮನ್ಸೂರ್ ಮತ್ತು ಸಂಘಟನೆಯ ಹಲವಾರು ಉನ್ನತ ಕಮಾಂಡರ್‌ಗಳು ಕಾರ್ಯಾಚರಣೆಯ ಸಮಯದಲ್ಲಿ ಕೊಂದು ಹಾಕಲಾಗಿದ್ದು, ಪಿಐಜೆಯ ನಾಯಕತ್ವ ಈಗ ಬಹುತೇಕ ಮುಕ್ತಾಯವಾಗಿದೆ ಎಂದು ತಿಳಿಸಿದೆ.
ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ಓರ್ವ ಉಗ್ರ ಕಮಾಂಡರ್ ಸೇರಿ 10 ಮಂದಿ ಬಲಿ
ಹಮಾಸ್ ಗಾಜಾದಲ್ಲಿರುವ ಸಂಘಟನೆಯಾಗಿದ್ದು, ಇಡೀ ಇಸ್ಲಾಮಿಕ್ ಜಿಹಾದ್ ಅನ್ನು ಕಂಟ್ರೋಲ್ ಮಾಡುತ್ತದೆ. 2007ರಲ್ಲಿ ಗಾಜಾದ ಪ್ರಮುಖ ಪ್ರದೇಶಗಳ ಮೇಲೆ ಹಮಾಸ್ ಆಡಳಿತವಿದ್ದರೂ, ಇಸ್ರೇಲ್ ಪಾಲಿಗೆ ಹಮಾಸ್ ಎನ್ನುವುದು ಭಯೋತ್ಪಾದಕ ಸಂಘಟನೆ. ಆಪರೇಷನ್ ಬ್ರೇಕಿಂಗ್ ಡೌನ್ ಕುರಿತಾಗಿ ಈವರೆಗೂ ಹಮಾಸ್, ಇಸ್ರೇಲ್‌ಅನ್ನು ವಿರೋಧಿಸಿ ಪ್ರತಿಕ್ರಿಯೆ ನೀಡಿಲ್ಲ. ಹಾಗೇನಾದರೂ ಹಮಾಸ್ ಸಂಘಟನೆ ಕೂಡ ಇದರಲ್ಲಿದ್ದಿದ್ದರೆ, ಈ ಹೋರಾಟ ಇನ್ನಷ್ಟು ದಿನಗಳಿಗೆ ವಿಸ್ತರಣೆ ಆಗುತ್ತಿತ್ತು.
ರಹಸ್ಯವಾಗಿ ಮೆಕ್ಕಾ ತಲುಪಿದ ಮುಸ್ಲೀಮೇತರ ವ್ಯಕ್ತಿ, ವಿಶ್ವದ ಮುಸ್ಲೀಮರ ಆಕ್ರೋಶ!
ಪ್ರಸ್ತುತ ಗಾಜಾ ಪರಿಸ್ಥಿತಿಯೇನು: ಗಾಜಾ ಪಟ್ಟಿಯ ಉದ್ದ 365 ಚದರ ಕಿಲೋಮೀಟರ್. ಇಸ್ರೇಲ್ ಮತ್ತು ಈಜಿಪ್ಟ್ ಅದನ್ನು ಮುತ್ತಿಗೆ ಹಾಕಲು ಯತ್ನಿಸಿದವು. ಇಲ್ಲಿ ಸುಮಾರು 21 ಲಕ್ಷ ಜನರು ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ಇಸ್ರೇಲ್ ಕಾರ್ಯನಿರ್ವಹಿಸುತ್ತಿದ್ದ ಸ್ಥಳದಲ್ಲಿ ಕಿರಿದಾದ ರಸ್ತೆಗಳಿವೆ. ಮನೆಗಳು ಪರಸ್ಪರ ಹತ್ತಿರದಲ್ಲಿವೆ. ಇದರಿಂದಾಗಿ ಗಾಯಾಳುಗಳನ್ನು ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್‌ಗಳು ಬರಲಿಲ್ಲ. ಜೆರುಸಲೇಂನಲ್ಲಿ ವಾಸಿಸುವ ಜಲಾಲ್ ಅಬುಖಾತಿರ್ ಪ್ಯಾಲೆಸ್ತೀನ್ ಸಮಸ್ಯೆಗಳ ಬಗ್ಗೆ ಈಗಾಗಲೇ ಬರೆದಿದ್ದಾರೆ. ಗಾಜಾದಲ್ಲಿ ವಿದ್ಯುತ್ ಇಲ್ಲ. ಆಸ್ಪತ್ರೆಗಳು ಕೆಲಸ ಮಾಡುತ್ತಿಲ್ಲ. ಜನರು ಭಯಭೀತರಾಗಿದ್ದಾರೆ ಎಂದು ಜಲಾಲ್ ಹೇಳಿದ್ದಾರೆ. ಪ್ಯಾಲೆಸ್ತೇನಿಯನ್ ಬೆಂಬಲಿಗರು ಗಾಜಾ ಮೇಲಿನ ದಾಳಿಯ ವಿರುದ್ಧ ಜೆರುಸಲೆಮ್‌ನಲ್ಲಿ ಪ್ರತಿಭಟಿಸಲು ಪ್ರಯತ್ನಿಸಿದರು, ಆದರೆ ಇಸ್ರೇಲಿ ಪೊಲೀಸರು ಅವರನ್ನು ತಡೆದರು. ಪೊಲೀಸರು ಜೆರುಸಲೇಂ ಅಥವಾ ಇಸ್ರೇಲ್‌ನಲ್ಲಿ ಎಲ್ಲಿಯೂ ಪ್ರತಿಭಟನೆಗೆ ಅವಕಾಶ ನೀಡುತ್ತಿಲ್ಲ.
ಅಮೆರಿಕ ಮಾತನ್ನೂ ಕೇಳದ ಇಸ್ರೇಲ್: ತನ್ನ ದೇಶದ ರಕ್ಷಣೆ ಹಾಗೂ ಅಪಾಯದ ಮುನ್ಸೂಚನೆ ಅರಿತ ಬೆನ್ನಲ್ಲಿಯೇ ತಕ್ಷಣ ಇಸ್ರೇಲ್ ಕಾರ್ಯಪ್ರವೃತ್ತವಾಗುತ್ತದೆ. ಇಸ್ರೇಲ್‌ನ ಸೇನಾ ಕಾರ್ಯಾಚರಣೆಯ ಬಗ್ಗೆ ಅಮೆರಿಕ ಖಂಡನೆ ವ್ಯಕ್ತಪಡಿಸಿದ್ದರೂ ಅದಕ್ಕೆ ಪುಟ್ಟ ದೇಶ ತಲೆಕೆಡಿಸಿಕೊಂಡಿಲ್ಲ.