ದಾಳಿಯ ವಿವರಗಳನ್ನು ಯು.ಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೆತನ್ಯಾಹುಗೆ ತಿಳಿಸಿದ್ದಾರೆ. ಈ ದಾಳಿ ಬಳಿಕ ಟ್ರಂಪ್ ಅವರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಧನ್ಯವಾದಗಳನ್ನು ತಿಳಿಸಿದ್ದಾರೆ.
ಟೆಲ್ ಅವೀವ್: ಅಮೆರಿಕದ್ದು ಧೈರ್ಯದ ಹೆಜ್ಜೆ ಅಂತ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಇರಾನ್ ಮೇಲಿನ ದಾಳಿಯ ವಿವರಗಳನ್ನು ಯು.ಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೆತನ್ಯಾಹುಗೆ ತಿಳಿಸಿದ್ದಾರೆ. ನೆತನ್ಯಾಹು ಅಮೆರಿಕಕ್ಕೆ ಧನ್ಯವಾದ ತಿಳಿಸಿದ್ದಾರೆ. ಈ ದಾಳಿಯಿಂದ ಅಮೆರಿಕ ಜಗತ್ತನ್ನ ಇನ್ನಷ್ಟು ಸುರಕ್ಷಿತವಾಗಿಸಿದೆ ಅಂತ ನೆತನ್ಯಾಹು ಹೇಳಿದ್ದಾರೆ.
ಯುಎಸ್‌ನ ಇರಾನ್ ದಾಳಿಯ ನಂತರ ಇಸ್ರೇಲ್ ಹೈ ಅಲರ್ಟ್‌ನಲ್ಲಿದೆ. ಇರಾನ್ ಮುಂದೇನು ಮಾಡುತ್ತೆ ಅಂತ ಗಮನಿಸುತ್ತಿದೆ. ಇರಾನ್‌ನ ಫೋರ್ಡೊ, ನತಾನ್ಸ್, ಇಸ್ಹಾನ್ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ನಡೆಸಿದೆ. ದೊಡ್ಡ ನಷ್ಟ ಆಗಿಲ್ಲ ಅಂತ ಇರಾನ್ ಹೇಳಿಕೊಂಡಿದೆ. ಆದರೆ ಫೋರ್ಡೊ ಪರಮಾಣು ಕೇಂದ್ರ ನಾಶ ಆಗಿದೆ ಅಂತ ಟ್ರಂಪ್ ಹೇಳಿದ್ದಾರೆ. ದಾಳಿ ಯಶಸ್ವಿಯಾಗಿದೆ, ಮತ್ತೆ ದಾಳಿ ಮಾಡಲ್ಲ ಅಂತ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಬಿ2 ಬಾಂಬರ್‌ಗಳನ್ನ ಬಳಸಿ ಯುಎಸ್ ದಾಳಿ ಮಾಡಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಇಸ್ರೇಲ್ - ಇರಾನ್ ಸಂಘರ್ಷದಲ್ಲಿ ಭಾಗಿಯಾಗಬೇಕಾ ಅಂತ ಎರಡು ವಾರದಲ್ಲಿ ತೀರ್ಮಾನ ಮಾಡ್ತೀವಿ ಅಂತ ಟ್ರಂಪ್ ಮೊದಲು ಹೇಳಿದ್ದರು. ಅಮೆರಿಕದ ದಾಳಿ ಅನಿರೀಕ್ಷಿತವಾಗಿತ್ತು. ಪರಮಾಣು ಕೇಂದ್ರಗಳ ಮೇಲಿನ ದಾಳಿ ಮುಗಿಸಿ ಯುದ್ಧ ವಿಮಾನಗಳು ವಾಪಸ್ ಬಂದಿವೆ ಅಂತ ಯು.ಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಾನ್ - ಇಸ್ರೇಲ್ ಸಂಘರ್ಷ ಶುರುವಾಗಿ ಹತ್ತನೇ ದಿನ ಅಮೆರಿಕ ನೇರವಾಗಿ ದಾಳಿ ಮಾಡಿದೆ.
ಎಷ್ಟು ನಷ್ಟ ಆಗಿದೆ ಅಂತ ಇನ್ನೂ ಗೊತ್ತಾಗಿಲ್ಲ. ದಾಳಿ ಮಾಡಿದ್ರೆ ತಿರುಗಿ ದಾಳಿ ಮಾಡ್ತೀವಿ ಅಂತ ಇರಾನ್ ಮೊದಲೇ ಅಮೆರಿಕಕ್ಕೆ ಎಚ್ಚರಿಕೆ ಕೊಟ್ಟಿತ್ತು. ಆದರೆ ಇರಾನ್ ಮುಂದೇನು ಮಾಡುತ್ತೆ ಅಂತ ಇನ್ನೂ ಗೊತ್ತಾಗಿಲ್ಲ. ಇರಾನ್ ಮಾತುಕತೆಗೆ ಬರದಿದ್ರೆ ಮಾತ್ರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಟ್ರಂಪ್ ಹೇಳಿದ್ದಾರೆ.
ಹಜಮ್ ಅಲ್-ಅಸ್ಸಾದ್ ಅಮೆರಿಕಕ್ಕೆ ಎಚ್ಚರಿಕೆ
ಯೆಮೆನ್‌ನ ಹೌತಿ ಬಂಡುಕೋರ ಗುಂಪಿನ ನಾಯಕ ಹಜಮ್ ಅಲ್-ಅಸ್ಸಾದ್ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ. ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ "ಅಮೆರಿಕ ಈಗ ತನ್ನ ಕ್ರಮಗಳ ಪರಿಣಾಮಗಳನ್ನು ಎದುರಿಸಬೇಕು" ಎಂದು ಬರೆದಿದ್ದಾರೆ. ಅಮೆರಿಕ ಇರಾನ್‌ನ ಪರಮಾಣು ತಾಣಗಳ ಮೇಲೆ ದಾಳಿ ಮಾಡಿದ ನಂತರ ಈ ಹೇಳಿಕೆ ಬಂದಿದೆ.
