ಭಾರತ ಪ್ರವಾಸದಲ್ಲಿರುವ ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್, ಭಾರತವನ್ನು 'ಜಾಗತಿಕ ಮಹಾಶಕ್ತಿ' ಮತ್ತು 'ಭವಿಷ್ಯ' ಎಂದು ಬಣ್ಣಿಸಿದ್ದಾರೆ. ಹಮಾಸ್ ದಾಳಿಯ ನಂತರ ಪ್ರಧಾನಿ ಮೋದಿ ಮೊದಲು ಕರೆ ಮಾಡಿದ್ದನ್ನು ಸ್ಮರಿಸಿದ ಅವರು, ಇಸ್ರೇಲ್ ಮತ್ತು ಭಾರತದ ಸಂಬಂಧ ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ.
ನವದೆಹಲಿ (ನ.5): ಭಾರತ ಜಾಗತಿಕ ಮಹಾಶಕ್ತಿ. ಭಾರತವೇ ಭವಿಷ್ಯ. ಇಸ್ರೇಲ್ ಸಣ್ಣದು, ಆದರೆ ನಾವು ಪ್ರಾದೇಶಿಕ ಶಕ್ತಿಯಾಗಿದ್ದೇವೆ. ಇಸ್ರೇಲ್ ಮತ್ತು ಭಾರತದ ಸಂಬಂಧ ಎಂದಿಗಿಂತ ಬಲಿಷ್ಠವಾಗಿದೆ’ ಎಂದು ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಬಣ್ಣಿಸಿದ್ದಾರೆ.
3 ದಿನ ಭಾರತ ಪ್ರವಾಸದಲ್ಲಿರುವ ಅವರು ಎನ್‌ಡಿಟಿವಿ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದರು.
‘ನಾವು ಭಾರತದ ಸ್ನೇಹಕ್ಕೆ ಆಭಾರಿಯಾಗಿದ್ದೇವೆ. 2023ರ ಅ.7ರಂದು ಹಮಾಸ್ ಉಗ್ರರು ನಮ್ಮ ಮೇಲೆ ದಾಳಿ ಮಾಡಿದರು. ಆ ಭೀಕರ ದಿನದಂದು ಪ್ರಧಾನಿ ನೆತನ್ಯಾಹು ಅವರಿಗೆ ಕರೆ ಮಾಡಿದ ಮೊದಲ ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ಎಂಬುದನ್ನು ನಾವು ಮರೆಯುವುದಿಲ್ಲ.
ಇದನ್ನೂ ಓದಿ: ಕದನ ವಿರಾಮ ಒಪ್ಪಂದ ಉಲ್ಲಂಘಿಸಿದ ಹಮಾಸ್, ಗಾಜಾ ಮೇಲೆ ತಕ್ಷಣದಿಂದಲೇ ಶಕ್ತಿಶಾಲಿ ದಾಳಿಗೆ ನಿರ್ಧರಿಸಿದ ಇಸ್ರೇಲ್!
ಭಾರತ ಜಾಗತಿಕ ಮಹಾಶಕ್ತಿ. ಭಾರತವೇ ಭವಿಷ್ಯ. ಇಸ್ರೇಲ್ ಚಿಕ್ಕದಾಗಿದೆ, ಆದರೆ ನಾವು ಪ್ರಾದೇಶಿಕ ಶಕ್ತಿ. ನಾವಿಬ್ಬರೂ ಒಟ್ಟಾಗಿ ಉತ್ತಮ ಕೆಲಸಗಳನ್ನು ಮಾಡಬಹುದು ಮತ್ತು ನಾವು ಖಂಡಿತವಾಗಿಯೂ ಮಾಡುತ್ತೇವೆ’ ಎಂದರು.
