ಹಮಾಸ್‌ ಸುರಂಗಗಳಿಗೆ ಸಮುದ್ರದ ನೀರು ತುಂಬಿಸುತ್ತಿರುವ ಇಸ್ರೇಲ್‌. 500 ಕಿ.ಮೀ ಸುರಂಗದೊಳಗೆ ನೀರು ತುಂಬಿ ಉಗ್ರರ ಮೂಲಸೌಕರ್ಯ ನಾಶಕ್ಕೆ ಚಿಂತನೆ. ಒತ್ತೆಯಾಳುಗಳನ್ನು ಹೇಗೆ ಕಾಪಾಡಿಕೊಳ್ಳುತ್ತೆ ಇಸ್ರೇಲ್?

ಇಸ್ರೇಲಿ ಸೇನೆಯು ಗಾಜಾದಲ್ಲಿರುವ ಹಮಾಸ್‌ನ ಸುರಂಗಕ್ಕೆ ಸಮುದ್ರದ ನೀರನ್ನು ಪಂಪ್ ಮಾಡಲು ಪ್ರಾರಂಭಿಸಿದೆ. ಹಮಾಸ್‌ ಉಗ್ರರ ಜೀವಾಳ ಎನಿಸಿರುವ ಗಾಜಾ ಪಟ್ಟಿಯ ಸುರಂಗ ಮಾರ್ಗದಲ್ಲಿ ಇರುವ ಉಗ್ರರನ್ನು ನೀರು ತುಂಬಿಸಿ ಮುಗಿಸುವ ಪ್ಲಾನ್ ಮಾಡಿದೆ. ನೀರು ತುಂಬಿಸುವ ಈ ಪ್ರಕ್ರಿಯೆಯು ಒಂದು ವಾರಗಳ ಕಾಲ ನಡೆಯಲಿದೆ. ಇಸ್ರೇಲ್ ನ ಈ ತಂತ್ರದಿಂದ ಸುರಂಗದಲ್ಲಿ ಪ್ರವಾಹವಾಗಲಿದೆ.

ಮಾತ್ರವಲ್ಲ ಹಮಾಸ್‌ ಉಗ್ರರು ನೆಲೆಸುವ ಮತ್ತು ಒತ್ತೆಯಾಳುಗಳನ್ನು ಬಂಧಿಸಿಡುವ ಜೊತೆಗೆ ಯುದ್ಧ ಸಾಮಾಗ್ರಿಗಳನ್ನು ಸಂಗ್ರಹಿಸಿಡುವ ಮೂಲಕ ತನ್ನ ವಿರುದ್ಧ ಹೋರಾಡುವ ಪ್ಯಾಲೇಸ್ತೀನ್ ಉಗ್ರರ ವಿರುದ್ಧ ಇಸ್ರೇಲ್‌ ವಿನೂತನ ದಾಳಿಗೆ ಮುಂದಾಗಿದೆ. ಸುರಂಗದೊಳಗೆ ನೀರು ತುಂಬಿಸಲು ಮೆಡಿಟರೇನಿಯನ್‌ ಸಮುದ್ರದ ನೀರನ್ನು ಬಳಸುತ್ತಿದ್ದು, ನೀರನ್ನು ಪಂಪ್‌ ಮಾಡುವ ಕಾರ್ಯಾಚರಣೆಯನ್ನು ಈಗಾಗಲೇ ಆರಂಭಿಸಿದೆ.

ಹಮಾಸ್ ವಿರುದ್ಧ ‘ಹತ್ಯೆ ಯಂತ್ರ’ ಅಖಾಡಕ್ಕಿಳಿಸಿದ ಇಸ್ರೇಲ್: ಕಿಡಾನ್ ಪಡೆಗಿದೆ ವಿಶೇಷ ಬಲ

ಗಾಜಾ ಪಟ್ಟಿಯಲ್ಲಿ ಹಮಾಸ್‌ ಬರೋಬ್ಬರಿ 500 ಮೀಟರ್‌ ಗಿಂತಲೂ ಉದ್ದದ ಸುರಂಗ ಕೊರೆದು ಅದರಲ್ಲಿ ಸುರಕ್ಷಿತವಾಗಿ ನೆಲೆ ನಿಂತು ಇಸ್ರೇಲ್ ವಿರುದ್ಧ ಹೋರಾಡುತ್ತಿದೆ. ಈ ಸುರಂಗದಲ್ಲಿ ಸಂಪೂರ್ಣ ನೀರು ತುಂಬಿಸಲು ವಾರಗಳಷ್ಟು ಸಮಯ ಬೇಕಾಗುತ್ತದೆ. ಈಗಾಗಲೇ ಯುದ್ಧ ತೀವ್ರಗೊಂಡಿದ್ದು, ಬಹುತೇಕ ಸುರಂಗಗಳನ್ನು ಇಸ್ರೇಲ್ ತನ್ನ ವಶಕ್ಕೆ ಪಡೆದಿದೆ. ಆದರೆ ಸಂಪೂರ್ಣವಾಗಿ ವಶಕ್ಕೆ ಪಡೆಯಲು ಸಾಧ್ಯವಿಲ್ಲದ ಕಾರಣಕ್ಕೆ ಸಮುದ್ರದ ಉಪ್ಪು ನೀರು ತುಂಬಿಸಲು ಇಸ್ರೇಲ್‌ ಯೋಜನೆ ಹಾಕಿಕೊಂಡಿದೆ.

ಹಮಾಸ್‌ ಉಗ್ರರ ಹುಡುಕಿ ಕೊಲ್ಲಲು ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್ ಪ್ಲಾನ್‌!

ಸಮುದ್ರದ ನೀರನ್ನೇ ಏಕೆ ಇಸ್ರೇಲ್‌ ಬಳಸುತ್ತಿದೆ ಎಂದರೆ ಸಾಗರದ ನೀರು ಅತ್ಯಂತ ಹೆಚ್ಚು ಲವಣಯುಕ್ತವಾಗಿದೆ. ಇದರಿಂದ ಸುರಂಗದಲ್ಲಿರುವ ಯಾವುದೇ ಯುದ್ಧಸಾಮಾಗ್ರಿಗಳನ್ನು ತುಂಬಾ ಸುಲಭವಾಗಿ ಹಾಳಾಗುತ್ತದೆ. ಹೀಗಾಗಿ ಇಸ್ರೇಲ್ ಮಹತ್ವದ ಹೆಜ್ಜೆ ಇಟ್ಟಿದ್ದು ಈಗಾಗಲೇ 7 ಬೃಹತ್‌ ಪಂಪ್‌ಗಳಿಂದ ನೀರು ತುಂಬಿಸುವ ಕೆಲಸ ಮಾಡುತ್ತಿದೆ.

ಸುರಂಗದಲ್ಲಿರುವವರ ಗತಿ ಏನು?
ಹಮಾಸ್ ಉಗ್ರರ ಬಳಿ ಇನ್ನೂ ಕೂಡ 100 ಕ್ಕೂ ಹೆಚ್ಚು ಒತ್ತೆಯಾಳುಗಳಿದ್ದಾರೆ. ಸಮುದ್ರ ನೀರನ್ನು ಸುರಂಗಕ್ಕೆ ಪಂಪ್‌ ಮಾಡಿದಾಗ ಅವರೆಲ್ಲ ಅದೇ ಸುರಂಗದಲ್ಲಿ ಇದ್ದರೆ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಇಸ್ರೇಲ್‌ನಲ್ಲಿ ಒತ್ತೆಯಾಳುಗಳ ಕುಟುಂಬದವರು ಪ್ರತಿಭಟನೆ ಕೂಡ ನಡೆಸುತ್ತಿದ್ದಾರೆ.

ಗಾಜಾ ಕದನ ವಿರಾಮಕ್ಕೆ ವಿಶ್ವಸಂಸ್ಥೆಯಲ್ಲಿ ಭಾರತ ಕರೆ: ನಿಲುವಿನಲ್ಲಿ ಬದಲು 
ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಸಂಘರ್ಷ ನಿಲ್ಲಿಸುವಂತೆ ವಿಶ್ವಸಂಸ್ಥೆಯಲ್ಲಿ ಮಂಡಿಸಿದ್ದ ಗೊತ್ತುವಳಿಗೆ ಭಾರತ ಬೆಂಬಲ ವ್ಯಕ್ತಪಡಿಸಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವು ಇದೇ ಮೊದಲ ಬಾರಿಗೆ ಗಾಜಾ ಯುದ್ಧದ ವಿಷಯದಲ್ಲಿ ತಟಸ್ಥ ಧೋರಣೆ ಕೈಬಿಟ್ಟು ತತ್ವಾಧಾರಿತವಾಗಿ ಮುನ್ನಡೆದಿದೆ. ಈಜಿಪ್ಟ್‌ ಮಂಡಿಸಿದ ಗೊತ್ತುವಳಿ ಪರವಾಗಿ 153 ದೇಶಗಳು ಒಪ್ಪಿಗೆ ಸೂಚಿಸಿದರೆ ಆಸ್ಟ್ರಿಯಾ, ಇಸ್ರೇಲ್‌ ಹಾಗೂ ಅಮೆರಿಕ ಸೇರಿದಂತೆ 10 ರಾಷ್ಟ್ರಗಳು ವಿರೋಧಿಸಿದವು. 23 ರಾಷ್ಟ್ರಗಳು ಸಭೆಗೆ ಗೈರಾಗಿದ್ದವು.