Asianet Suvarna News Asianet Suvarna News

ಹಮಾಸ್‌ ಉಗ್ರರ ಹುಡುಕಿ ಕೊಲ್ಲಲು ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್ ಪ್ಲಾನ್‌!

ಗಾಜಾದಲ್ಲಿರುವ ಹಮಾಸ್‌ ನಾಯಕರನ್ನು ಮಟ್ಟ ಹಾಕಲು ಇಸ್ರೇಲ್ ನಡೆಸುತ್ತಿರುವ ಯುದ್ಧ ಕೊನೆಯಾಗುತ್ತಿದ್ದಂತೆ ಜಗತ್ತಿನಾದ್ಯಂತ ಹರಡಿಕೊಂಡಿರುವ ಹಮಾಸ್‌ ನಾಯಕರನ್ನು ಹತ್ಯೆ ಮಾಡಲು ಇಸ್ರೇಲ್‌ ಯೋಜನೆ ರೂಪಿಸುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Plan to find and kill Hamas terrorists after the Gaza war Instructions to the intelligence agency Mossad to plan
Author
First Published Dec 3, 2023, 7:13 AM IST

ನವದೆಹಲಿ: ಗಾಜಾದಲ್ಲಿರುವ ಹಮಾಸ್‌ ನಾಯಕರನ್ನು ಮಟ್ಟ ಹಾಕಲು ಇಸ್ರೇಲ್ ನಡೆಸುತ್ತಿರುವ ಯುದ್ಧ ಕೊನೆಯಾಗುತ್ತಿದ್ದಂತೆ ಜಗತ್ತಿನಾದ್ಯಂತ ಹರಡಿಕೊಂಡಿರುವ ಹಮಾಸ್‌ ನಾಯಕರನ್ನು ಹತ್ಯೆ ಮಾಡಲು ಇಸ್ರೇಲ್‌ ಯೋಜನೆ ರೂಪಿಸುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಇದಕ್ಕಾಗಿ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ತನ್ನ ಹಿಂದಿನ ಪ್ರಧಾನಿ ಗೋಲ್ಡಾ ಮೇಯ್ರ್ ಅನುಸರಿಸಿದ್ದ ಮಾರ್ಗವನ್ನೇ ಅನುಸರಿಸಲು ಮುಂದಾಗಿದ್ದಾರೆ. ವಿದೇಶಗಳಲ್ಲಿರುವ ಇಸ್ರೇಲ್‌ನ ಶತ್ರುಗಳನ್ನು ಹತ್ಯೆ ಮಾಡಲು ಕೈಗೊಳ್ಳುತ್ತಿದ್ದ ‘ಆಪರೇಶನ್‌ ವ್ರಾತ್‌ ಆಫ್‌ ಗಾಡ್’ ಮಿಶನನ್ನು ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿ ಎನಿಸಿಕೊಂಡಿರುವ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌ಗೆ ಯೋಜನೆ ರೂಪಿಸಲು ಸೂಚನೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.

ಗಾಜಾ ಯುದ್ಧದ ಬಳಿಕ ಟರ್ಕಿ, ಲೆಬನಾನ್‌ ಮತ್ತು ಕತಾರ್‌ನಲ್ಲಿರುವ ಹಮಾಸ್‌ ನಾಯಕರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗುತ್ತದೆ. ಇಸ್ರೇಲ್‌ ಮೇಲೆ ದಾಳಿ ಮಾಡಿರುವ ಹಮಾಸ್‌ ಉಗ್ರರ ಮೇಲೆ ಸೇಡು ತೀರಿಸಿಕೊಳ್ಳಲು ವಿದೇಶಗಳಲ್ಲಿರುವ ಹಮಾಸ್‌ ನಾಯಕರನ್ನು ಇಸ್ರೇಲ್‌ ಹತ್ಯೆ ಮಾಡಲಿದೆ. ವಿವಿಧ ದೇಶಗಳಲ್ಲಿರುವ ಇಸ್ಲಾಯಿಲ್‌ ಹನಿಯೇಹ್, ಮೊಹಮ್ಮದ್‌ ದೈಫ್‌, ಯಹ್ಯ ಸಿನ್ವರ್‌ ಮತ್ತು ಖಾಲೇದ್‌ ಮಶಾಲ್‌ ಮುಖ್ಯ ಗುರಿಯಾಗಿದ್ದಾರೆ ಎಂದು ಮೊಸಾದ್‌ನ ಮಾಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಯುದ್ಧ ಗೆಲ್ಲೋವರೆಗೆ ನಾವು ಬಿಡಲ್ಲ: ಶತ್ರು ನೆಲ ಗಾಜಾದಲ್ಲಿ ಘಂಟಾಘೋಷವಾಗಿ ಸಾರಿದ ಇಸ್ರೇಲ್‌ ಪ್ರಧಾನಿ

ಅಪ್ಪನ ಕಂಡಕೂಡ್ಲೇ ಓಡಿಹೋಗಿ ಅಪ್ಪಿಕೊಂಡ ಬಾಲಕ: ಹಮಾಸ್‌ ಉಗ್ರರ ಒತ್ತೆಯಾಳಾಗಿದ್ದ ಇಸ್ರೇಲಿಯ ವಿಡಿಯೋ ವೈರಲ್‌

Latest Videos
Follow Us:
Download App:
  • android
  • ios