ಇಸ್ಕಾನ್ ರಾಧಾಕಾಂತ ದೇವಾಲಯ ಧ್ವಂಸಗೊಳಿಸಿದ ದುಷ್ಕರ್ಮಿಗಳು ಬಾಂಗ್ಲಾದೇಶದ ಗುರುವಾರ ರಾತ್ರಿ ಢಾಕಾದಲ್ಲಿ ಘಟನೆ  ಟ್ವಿಟ್ಟರ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ ಬಾಂಗ್ಲಾದೇಶ ಹಿಂದೂ ಧ್ವನಿ  

ಢಾಕಾ(ಮಾ.18): ಬಾಂಗ್ಲಾದೇಶದ ಢಾಕಾದಲ್ಲಿರುವ ಇಸ್ಕಾನ್ ರಾಧಾಕಾಂತ ದೇವಾಲಯವನ್ನು ಗುರುವಾರ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

'ಶಬ್-ಎ-ಬರಾತ್' ರಾತ್ರಿ, ಢಾಕಾದಲ್ಲಿರುವ (dhaka) ವಾರಿ ರಾಧಾಕಾಂತ ಇಸ್ಕಾನ್ ದೇವಾಲಯದ (Wari Radhakanta ISKCON temple) ಮೇಲೆ ತೀವ್ರಗಾಮಿಗಳು ಮತ್ತೆ ದಾಳಿ ಮಾಡಿದ್ದಾರೆ. ಈ ದೇವಾಲಯವನ್ನು ರಕ್ಷಿಸುವಲ್ಲಿ ಎಲ್ಲಾ ಹಿಂದೂಗಳು ತಮ್ಮ ಪಾತ್ರವನ್ನು ವಹಿಸಬೇಕೆಂದು ನಾವು ವಿನಂತಿಸುತ್ತಿದ್ದೇವೆ ಎಂದು ಬಾಂಗ್ಲಾದೇಶದ ಹಿಂದೂಗಳ ಧ್ವನಿ ಎಂಬ ಟ್ವೀಟ್ ಖಾತೆ ಟ್ವಿಟ್‌ ಮಾಡಿ ವಿಚಾರ ತಿಳಿಸಿದೆ. ದೇಗುಲವನ್ನು ಧ್ವಂಸಗೊಳಿಸುತ್ತಿರುವ ದೃಶ್ಯಗಳನ್ನು ಈ ಬಾಂಗ್ಲಾದೇಶ ಹಿಂದೂ ಧ್ವನಿ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿದೆ. 

Scroll to load tweet…

ಪ್ರಧಾನಿ ಮೋದಿ ಗುಣಗಾನ ಮಾಡಿದ ಬಾಂಗ್ಲಾ ಕ್ರಿಕೆಟಿಗ ಶಕೀಬ್‌ ಅಲ್‌ ಹಸನ್‌

150 ಜನರ ಗುಂಪೊಂದು ಈ ದೇವಾಲಯದ ಮೇಲೆ ದಾಳಿ ಮಾಡಿದೆ ಎಂದು ಹಿಂದೂ ಅಮೇರಿಕನ್ ಫೌಂಡೇಶನ್ (Hindu American Foundation) ಹೇಳಿದೆ. ಬಾಂಗ್ಲಾದೇಶದ ಇಸ್ಕಾನ್ ದೇವಾಲಯದ (ISKCON temple) ಮೇಲಿನ ದಾಳಿಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಸಂಸ್ಥೆ ಟ್ವೀಟ್‌ನಲ್ಲಿ ತಿಳಿಸಿದೆ. ಬಾಂಗ್ಲಾದೇಶದಲ್ಲಿ ನಡೆದ ಬಂಗಾಳಿ ಹಿಂದೂ ನರಮೇಧದ ಸಮಯದಲ್ಲಿ ಕೊಲ್ಲಲ್ಪಟ್ಟ ಮತ್ತು ಸ್ಥಳಾಂತರಗೊಂಡ ಮತ್ತು ಅತ್ಯಾಚಾರಕ್ಕೊಳಗಾದವರ 51ನೇ ವಾರ್ಷಿಕ ಸ್ಮರಣೆಯನ್ನು ಪ್ರಪಂಚದಾದ್ಯಂತದ ಹಿಂದೂಗಳು ಸ್ಮರಿಸುವುದಕ್ಕೆ ಒಂದು ವಾರ ಇರುವ ಮೊದಲು ಉಗ್ರಗಾಮಿಗಳು ಈ ಕೃತ್ಯವೆಸಗಿದ್ದಾರೆ. ಇದು ನರಮೇಧದ ದಿನಗಳನ್ನು ನಮಗೆ ನೆನಪಿಸುತ್ತಿದೆ ಎಂದು ಹಿಂದೂ ಅಮೆರಿಕನ್‌ ಫೌಂಡೇಶನ್‌ನ ಮಾನವ ಹಕ್ಕುಗಳ ನಿರ್ದೇಶಕ ದೀಪಾಲಿ ಕುಲಕರ್ಣಿ (Deepali Kulkarni) ಹೇಳಿದ್ದಾರೆ. 

Scroll to load tweet…
Scroll to load tweet…

Kali Mandir in Dhaka: ಬಾಂಗ್ಲಾದಲ್ಲಿ ಭಾರತ ಕಟ್ಟಿದ ರಮಣಕಾಳಿ ಮಂದಿರ ಉದ್ಘಾಟನೆ

ಬಾಂಗ್ಲಾದೇಶದಲ್ಲಿ ಹಿಂದೂ ದೇಗುಲಗಳು ಮತ್ತು ಹಿಂದೂಗಳನ್ನು ಗುರಿಯಾಗಿಸಿ ದಾಳಿ ನಡೆಯುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ವಿಜಯದಶಮಿ ಹಿನ್ನೆಲೆ ಹಿಂದೂಗಳು ದೇಗುಲದಲ್ಲಿ ಕಾಳಿಮಾತೆಯ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಮುಸ್ಲಿಂ ಧಾರ್ಮಿಕ ಮುಖಂಡ ಇಮಾಮ್‌ನ ಪ್ರಚೋದನೆಯಿಂದ ದೇಗುಲಕ್ಕೆ ನುಗ್ಗಿದ ಆರೋಪಿಗಳು, ಅರ್ಚಕರು ಸೇರಿದಂತೆ ಭಕ್ತರ ಮೇಲೆ ಹಲ್ಲೆ ನಡೆಸಿ, ಐದು ಮೂರ್ತಿಗಳನ್ನು ಭಗ್ನಗೊಳಿಸಿ ದೇಗುಲವನ್ನು ಧ್ವಂಸಗೊಳಿಸಿದ್ದರು. ಅಲ್ಲದೇ ನಾಲ್ವರು ಹಿಂದೂಗಳನ್ನು ಹತ್ಯೆಗೈದಿದ್ದರು.