ಢಾಕಾ(ಮಾ.26): ಬಾಂಗ್ಲಾದೇಶ ಸ್ಟಾರ್ ಕ್ರಿಕೆಟಿಗ ಶಕೀಬ್ ಅಲ್‌ ಹಸನ್‌ ಇಂದು(ಮಾ.26) ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಈ ಕುರಿತಂತೆ ವಿಡಿಯೋ ಟ್ವೀಟ್‌ ಮಾಡಿರುವ ಶಕೀಬ್‌ ಅಲ್‌ ಹಸನ್‌, ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿರುವುದು ನಿಜಕ್ಕೂ ಗೌರವದ ಸಂಗತಿಯಾಗಿದೆ. ಅವರ ಬಾಂಗ್ಲಾದೇಶ ಭೇಟಿಯು ಉಭಯ ದೇಶಗಳ ಪಾಲಿಗೆ ಫಲಪ್ರದವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕನಾಗಿ ಭಾರತವನ್ನು ಮುನ್ನಡೆಸಿದ ರೀತಿ ನಿಜಕ್ಕೂ ಅತ್ಯದ್ಭುತವಾದದ್ದು. ಭಾರತದೊಂದಿಗಿನ ನಮ್ಮ ಒಪ್ಪಂದ ದಿನದಿಂದ ದಿನಕ್ಕೆ ಮತ್ತಷ್ಟು ಬಲಗೊಳ್ಳುವ ವಿಶ್ವಾಸವಿದೆ ಎಂದು ಶಕೀಬ್‌ ಅಲ್‌ ಹಸನ್‌ ಅಭಿಪ್ರಾಯಪಟ್ಟಿದ್ದಾರೆ.

ಬಾಂಗ್ಲಾ ಪತ್ರಿಕೆಯಲ್ಲಿ ಮೋದಿ ಲೇಖನ, ಮುಜಿಬುರ್‌ ರೆಹಮಾನ್ ಸಂಘರ್ಷ ನೆನಪಿಸಿಕೊಂಡ ಭಾರತದ ಪ್ರಧಾನಿ!

 

ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದು, ಶುಕ್ರವಾರ(ಮಾ.26)ಕ್ಕೆ ಢಾಕಾಗೆ ಬಂದಿಳಿದಿದ್ದಾರೆ. ಕಳೆದ ವರ್ಷ ಕೋವಿಡ್‌ 19 ಸ್ಪೋಟಗೊಂಡು ಲಾಕ್‌ಡೌನ್ ಆದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ, ಹಜರತ್ ಶಾಹಜಲಾಲ್‌ ಅಂತಾರಾಷ್ಟ್ರೀಯ ಏರ್ಪೋರ್ಟ್‌ನಲ್ಲಿ ಮೋದಿಯವನ್ನು ಸ್ವಾಗತಿಸಿದರು.

"

ಢಾಕಾಗೆ ಬಂದಿಳಿಯುತ್ತಿದ್ದಂತೆ ಟ್ವೀಟ್‌ ಮಾಡಿದ ಪ್ರಧಾನಿ ಮೋದಿ, ಢಾಕಾಗೆ ಬಂದಿಳಿದೆ. ಏರ್ಪೋಟ್‌ನಲ್ಲಿ ವಿಶೇಷ ಸ್ವಾಗತ ಕೋರಿದ ಬಾಂಗ್ಲಾದೇಶ ಪ್ರಧಾನಿ ಶೇಕ್‌ ಹಸೀನಾರಿಗೆ ಧನ್ಯವಾದಗಳು. ಈ ಭೇಟಿಯು ಉಭಯ ದೇಶಗಳ ನಡುವಿನ ಸಂಬಂಧವನ್ನು ಹಿಂದೆಂದಿಗಿಂತಲು ಮತ್ತಷ್ಟು ಬಲಿಷ್ಠಗೊಳಿಸಲಿದೆ ಎಂದು ಟ್ವೀಟ್ ಮಾಡಿದ್ದಾರೆ.