Asianet Suvarna News Asianet Suvarna News

ಮಕ್ಕಳ ಮೇಲೆ ಮುಸ್ಲಿಂ ವಲಸಿಗನ ದಾಳಿಗೆ ಕೆರಳಿದ ಐರ್ಲೆಂಡ್ ನಾಗರಿಕರು: ವಾಹನ, ವಲಸೆ ಕಚೇರಿಗಳಿಗೆ ಬೆಂಕಿ

ಶಾಲೆಯೊಂದರ ಮುಂದೆ ಮೂವರು ಮಕ್ಕಳು ಸೇರಿದಂತೆ ಒಟ್ಟು ಐವರ ಮೇಲೆ ಚಾಕುವಿನಿಂದ ದುಷ್ಕರ್ಮಿಯೋರ್ವ ದಾಳಿ ನಡೆಸಿದ ನಂತರ ಐರ್ಲೆಂಡ್ ನಾಗರಿಕರು ವಲಸೆ ಬಂದವರ ವಿರುದ್ಧ ರೊಚ್ಚಿಗೆದ್ದು ಬೀದಿಗಿಳಿದಿದ್ದಾರೆ. ಪರಿಣಾಮ ಬಸ್‌ ಸೇರಿದಂತೆ ಹಲವು ವಾಹನಗಳು ಹಾಗೂ ವಲಸೆ ಕಚೇರಿ ಬೆಂಕಿಗಾಹುತಿಯಾಗಿದೆ

Irish citizens angered by Muslim migrant's attack on children vehicle, immigration offices set on fire akb
Author
First Published Nov 24, 2023, 1:14 PM IST

ಡಬ್ಲಿನ್‌: ಮೂವರು ಮಕ್ಕಳು ಸೇರಿದಂತೆ ಒಟ್ಟು ಐವರ ಮೇಲೆ ಚಾಕುವಿನಿಂದ ದುಷ್ಕರ್ಮಿಯೋರ್ವ ದಾಳಿ ನಡೆಸಿದ ನಂತರ ಐರ್ಲೆಂಡ್ ನಾಗರಿಕರು ವಲಸೆ ಬಂದವರ ವಿರುದ್ಧ ರೊಚ್ಚಿಗೆದ್ದು ಬೀದಿಗಿಳಿದಿದ್ದಾರೆ. ಪರಿಣಾಮ ಬಸ್‌ ಸೇರಿದಂತೆ ಹಲವು ವಾಹನಗಳು ಹಾಗೂ ವಲಸೆ ಕಚೇರಿಗೆ ಬೆಂಕಿ ಹಚ್ಚಿದ್ದಾರೆ. ಡಬ್ಲಿನ್‌ ನಗರದಲ್ಲಿ ನಿನ್ನೆ ಮೂವರು ಮಕ್ಕಳು ಒಬ್ಬ ಮಹಿಳೆ ಸೇರಿದಂತೆ ಐವರ ಮೇಲೆ ವ್ಯಕ್ತಿಯೊಬ್ಬ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಇದರಿಂದ ಗಾಯಗೊಂಡ ಮಕ್ಕಳ ಸ್ಥಿತಿ ಗಂಭೀರವಾಗಿದೆ. ಇದರಿಂದ ರೊಚ್ಚಿಗೆದ್ದ ಜನ ಬೀದಿಗಿಳಿದಿದ್ದಾರೆ. ಈ ಘಟನೆಯ ಹಿಂದಿನ ಕಾರಣ ಏನು ಭಯೋತ್ಪಾದನೆಯ ಉದ್ದೇಶ ಇದರ ಹಿಂದಿದೆಯೇ ಎಂಬ ಬಗ್ಗೆ ಪೊಲೀಸರು ಖಚಿತಪಡಿಸಿಲ್ಲ. 

ಘಟನೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಲಾಗಿದ್ದು, ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರ ಬರುವಂತೆ ಸಲಹೆ ನೀಡಲಾಗಿದೆ. ಬೀದಿಗಿಳಿದಿರುವ ವಲಸೆ ವಿರೋಧಿ ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ಚಕಮಕಿ ನಡೆಯುತ್ತಿದ್ದು, ನಗರದಲ್ಲಿ ಗಲಭೆ ಸ್ಥಿತಿ ಏರ್ಪಟ್ಟಿದೆ. 

ಅಕ್ರಮವಾಗಿ ಭಾರತ ಪ್ರವೇಶಿಸಿ ಬೆಂಗಳೂರಿಗೆ ಬರುತ್ತಿದ್ದ 14 ಅಕ್ರಮ ಬಾಂಗ್ಲಾ ವಲಸಿಗರು ಸೆರೆ

ಪ್ರತಿಭಟನಾಕಾರರ ಆಕ್ರೋಶಕ್ಕೆ ಡಬ್ಬಲ್ ಡೆಕ್ಕರ್‌ ಬಸ್ ಬೆಂಕಿಗಾಹುತಿಯಾಗಿದೆ, ಡೇನಿಯಲ್ ಓ'ಕಾನ್ನೆಲ್ ಪ್ರತಿಮೆಯ  ಬಳಿಯ ಪ್ರತಿಭಟನಾಕಾರರು ಬಸ್‌ಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ ನಗರದ ಮ್ಯಾಕ್ ಡೊನಾಲ್ಡ್‌ ರೆಸ್ಟೋರೆಂಟ್ ಹಾಗೂ ಹಾಲಿಡೇ ಇಂಟರ್‌ನ್ಯಾಷನಲ್ ಹೊಟೇಲ್ ಕೂಡ ಪ್ರತಿಭಟನಾಕಾರರ ದಾಳಿಗೆ ತುತ್ತಾಗಿದ್ದು, ಕಿಟಕಿ ಗಾಜುಗಳಿಗೆ ಹಾನಿಯಾಗಿದೆ.  ಇವೆಲ್ಲವೂ ಕೆಲವು ನಾಚಿಕೆಗೇಡಿನ ದೃಶ್ಯಗಳಾಗಿವೆ.  ಕೆಲವು ತೀವ್ರವಾದ ಬಲಪಂಥೀಯ ಸಿದ್ದಾಂತಗಳಿಂದ ಪ್ರಭಾವಿತರಾದ ಕೆಲವರು ಈ ಕೃತ್ಯವೆಸಗಿದ್ದಾರೆ ಎಂದು ಪೊಲೀಸ್ ಕಮೀಷನರ್ ಡ್ರೂ ಹ್ಯಾರಿಸ್ ಹೇಳಿದ್ದಾರೆ. ಆದರೆ ವಲಸೆ ಬಂದ ಈ ಕೆಟ್ಟ ಹುಳುಗಳು ಐರೀಶ್ ಜನರ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರೊಬ್ಬರು ದೂರಿದ್ದಾರೆ.

ಐರ್ಲೆಂಡ್ ತೀವ್ರವಾದ ವಸತಿ ಸಮಸ್ಯೆಯಿಂದ ಬಳಲುತ್ತಿದೆ, ಸರ್ಕಾರದ ಅಂದಾಜಿನ ಪ್ರಕಾರ, ಸಾಮಾನ್ಯ ಜನರಿಗೆ ನೂರಾರು ಸಾವಿರ ಮನೆಗಳ ಕೊರತೆ ಅಲ್ಲಿದೆ. ಇದರಿಂದ ಅಲ್ಲಿನ ಸರ್ಕಾರದ ಮೇಲೆ ಜನರಿಗೆ ದೊಡ್ಡ ಅಸಮಾಧಾನ ಏರ್ಪಟ್ಟಿದೆ. ಇದು ಅಲ್ಲಿನ ಮೂಲ ಐರೀಶ್ ಜನ ಹಾಗೂ ವಲಸಿಗರ ಮಧ್ಯೆ ಬಿಕ್ಕಟ್ಟಿಗೆ ಕಾರಣವಾಗಿದೆ, ವಲಸಿಗರಿಂದ ಐರ್ಲೆಂಡ್ ತುಂಬಿ ಹೋಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಜನ ವಲಸಿಗರ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. 

ವಿದೇಶಗಳಲ್ಲಿ 1 ಕೋಟಿಗೂ ಹೆಚ್ಚು ಪಾಕಿಸ್ತಾನಿಯರಿಂದ ಭಿಕ್ಷಾಟನೆ: ವಲಸಿಗರ ಬಗ್ಗೆ ಸೌದಿ, ಇರಾಕ್ ಆಕ್ಷೇಪ

ಆದರೆ ಐರ್ಲೆಂಡ್ ಸರ್ಕಾರ ವಲಸಿಗರ ಬಗ್ಗೆ ಉದಾರವಾದ ನೀತಿ ಹೊಂದಿದ್ದು, ವಿಶೇಷವಾಗಿ ಮಧ್ಯಪ್ರಾಚ್ಯದಿಂದ ಬರುವ ವಲಸಿಗರನ್ನು ಕೈ ಬೀಸಿ ಕರೆಸಿಕೊಳ್ಳುತ್ತಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧ ಹಾಗೂ ರಾಜಕೀಯ ಅಸ್ಥಿರತೆಯ ಕಾರಣದಿಂದ ಸಾವಿರಾರು ಜನರು ಯುರೋಪ್ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದರಿಂದ ಕುಪಿತಗೊಂಡಿರುವ ಅಲ್ಲಿನ ಮೂಲ ನಿವಾಸಿಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. 

ಕೆಲ ಮಾಹಿತಿಯ ಪ್ರಕಾರ ನಿನ್ನೆ ನಡೆದ ಈ ಚೂರಿ ಇರಿತದಲ್ಲಿ ಮೂವರು ಮಕ್ಕಳು ಸೇರಿದಂತೆ ಐವರೂ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಲ್ಜಿರಿಯನ್ ಮೂಲದ ಮುಸ್ಲಿಂ ವಲಸಿಗನೋರ್ವ ಈ ಕೃತ್ಯವೆಸಗಿದ್ದು, ಒಂದು ಮಹಿಳೆ ಹಾಗೂ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಆರೋಪಿಯನ್ನು ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದು ಆತ ಮಾನಸಿಕ ಅಸ್ವಸ್ಥ ಎಂದು ಹೇಳಿದ್ದಾರೆ.  ಘಟನೆ ಖಂಡಿಸಿ ಐರಿಶ್ ನಾಗರಿಕರು ಬೀದಿಗಿಳಿದಿದ್ದು, ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ವಿಶೇಷವಾಗಿ ಮಧ್ಯಪ್ರಾಚ್ಯದಿಂದ ಬರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅವರು ಮೂಲ ನಾಗರಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ಆದರೆ ಐರ್ಲೆಂಡ್‌ನ ಉದಾರವಾದಿ ಸರ್ಕಾರ ಇವರೆಲ್ಲರಿಗೂ ಮಣೆ ಹಾಕುತ್ತಿರುವ ಪರಿಣಾಮ ಈ ಘಟನೆ ನಡೆಯುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ. 

 

Follow Us:
Download App:
  • android
  • ios