ಅಮೆರಿಕ-ಇರಾನ್ ನಡುವೆ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಸತತ ಏಳನೇ ದಿನವೂ ತಡರಾತ್ರಿ ಅಮೆರಿಕ ಇರಾನ್ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದೆ. ಈ ನಡುವೆ ಅಮೆರಿಕದ MQ-9 ಡ್ರೋನ್ ಹೊಡೆದುರುಳಿಸಿದ್ದೇವೆ ಎಂದು ಇರಾನ್ ಮಾಧ್ಯಮ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿಕೊಂಡಿದೆ.

MQ-9 Reaper drone ಅಮೆರಿಕ-ಇರಾನ್ ನಡುವೆ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಸತತ ಏಳನೇ ದಿನವೂ ತಡರಾತ್ರಿ ಅಮೆರಿಕ ಇರಾನ್ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದೆ. ಇರಾನ್‌ನ ಮಿಲಿಟರಿ ಸಾಮರ್ಥ್ಯ ಧ್ವಂಸಗೊಳಿಸುತ್ತೇವೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಹೇಳಿಕೊಂಡಿದೆ. 

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ . ಅಗತ್ಯವಿದ್ದರೆ ಪ್ರಮುಖ ಇರಾನಿನ ಸ್ಥಳಗಳ ಮೇಲಿನ ದಾಳಿಗಳನ್ನು ತೀವ್ರಗೊಳಿಸಲಾಗುವುದು ಎಂದು ಟ್ರಂಪ್ ಈ ಹಿಂದೆ ಎಚ್ಚರಿಸಿದ್ದರು. ಅಗತ್ಯವಿದ್ದರೆ ಭೂಸೇನೆ ಮೂಲಕ ಇರಾನ್‌ಗೆ ನುಗ್ಗಿ ನಾಶಪಡಿಸುತ್ತೇವೆ ಎಂದು ಓಪನ್ ಆಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದ MQ-9 ಡ್ರೋನ್ ಹೊಡೆದುರುಳಿಸಿದ ಇರಾನ್

ಇನ್ನು ಅಮೆರಿಕದ ಬೆದರಿಕೆಗೆ ಬಗ್ಗದ ಇರಾನ್ ಯುಎಸ್ ನೆಲೆಗಳ ಮೇಲೆ ನಿರಂತರ ಪ್ರತಿ ದಾಳಿ ನಡೆಸುತ್ತಲೆ ಇದೆ. ಅಮೆರಿಕದ ವೈಮಾನಿಕ ದಾಳಿಯ ನಡುವೆಯೇ ಇರಾನಿನ ಮಾಧ್ಯಮ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಪ್ರಕಾರ, ಬುಶೆಹರ್ ಮೇಲೆ ಹಾರುತ್ತಿದ್ದ ಅಮೇರಿಕನ್ MQ-9 ರೀಪರ್ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ. ಸರಿಸುಮಾರು $34 ಮಿಲಿಯನ್ ಮೌಲ್ಯದ ಡ್ರೋನ್ ಅನ್ನು ಕೆಲವೇ ಕ್ಷಣಗಳಲ್ಲಿ ನಾಶಪಡಿಸಲಾಗಿದೆ ಎಂದು ಇರಾನ್ ಹೇಳಿಕೊಂಡಿದೆ. ಆದಾಗ್ಯೂ, ಯುಎಸ್ ಇದನ್ನ ದೃಢಪಡಿಸಿಲ್ಲ. 

ಇರಾನ್‌ನ ಸೇತುವೆ, ವಿದ್ಯುತ್‌ ಜಾಲದ ಮೇಲೆ ಅಮೆರಿಕ ದಾಳಿ

ಹೋರ್ಮುಜ್‌ ಜಲಸಂಧಿಯ ತೆರೆಯದೇ ಇದ್ದರೆ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವುದಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದಂತೆ ಅಮೆರಿಕ ಪಡೆಗಳು ಇರಾನ್‌ನ ಹೊರ್ಮುಜ್‌ಗಾನ್‌, ಟೆಹ್ರಾನ್‌ ಮತ್ತು ಸೆಮ್ನಾನ್‌ ಪ್ರಾಂತ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿ, ಸೇತುವೆ, ವಿದ್ಯುತ್‌ ಮೂಲಸೌಕರ್ಯ, ವಾಯುರಕ್ಷಣಾ ವ್ಯವಸ್ಥೆ, ಕರಾವಳಿ ನಿಗಾ ವ್ಯವಸ್ಥೆಗಳ ಮೇಲೆ ಮೇಲೆ ಅಮೆರಿಕದ ಸೇನಾಪಡೆ ಕ್ಷಿಪಣಿ ಮತ್ತು ಡ್ರೋನ್‌ದ ದಾಳಿ ನಡೆಸಿ ಅವುಗಳನ್ನು ಧ್ವಂಸಗೊಳಿಸಿವೆ. ದಾಳಿ ಬೆನ್ನಲ್ಲೇ ಕೆಲವು ಪ್ರದೇಶಗಳಲ್ಲಿನ ಜನತೆಗೆ ಕಡಿಮೆ ವಿದ್ಯುತ್‌ ಬಳಕೆ ಮಾಡುವಂತೆ ಇರಾನ್‌ನ ಇಂಧನ ಸಚಿವಾಲಯ ಮನವಿ ಮಾಡಿದೆ.

ಇನ್ನು ಭಾರತದ ನೆರವಿನೊಂದಿಗೆ ನಿರ್ಮಿಸಲಾದ ಚಬಹಾರ್ ಬಂದರಿಗೂ ಅಮೆರಿಕದ ದಾಳಿಯಲ್ಲಿ ಹಾನಿಯಾಗಿದೆ. ದಾಳಿಯಿಂದ ಬಂದರಿನ ಗೋಪುರವೊಂದು ಧ್ವಂಸಗೊಂಡಿರುವ ಫೋಟೋವೊಂದನ್ನು ಅಮೆರಿಕ ಬಿಡುಗಡೆ ಮಾಡಿದೆ. ದಾಳಿ ವೇಳೆ ಕನಿಷ್ಠ 35 ಜನರು ಸಾವನ್ನಪ್ಪಿ, 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇರಾನ್‌ ಹೇಳಿದೆ. ಈ ನಡುವೆ ಇರಾನ್‌ ಯುದ್ಧದಲ್ಲಿ ದೊಡ್ಡ ಜಯದತ್ತ ನಾವು ಸಾಗುತ್ತಿದ್ದೇವೆ. ಶೀಘ್ರವೇ ಅದರ ಫಲ ಎಲ್ಲರಿಗೂ ಕಾಣಲಿದೆ ಎಂದು ಹೇಳಿದ್ದಾರೆ.

ಮತ್ತೊಂದೆಡೆ ಇದಕ್ಕೆ ಪ್ರತಿಯಾಗಿ ಅಮೆರಿಕದ ಮಿತ್ರ ದೇಶಗಳಾದ ಮತ್ತು ಅಮೆರಿಕದ ಸೇನಾ ನೆಲೆ ಹೊಂದಿರುವ ಕತಾರ್‌, ಸಿರಿಯಾ, ಬ್ರಹ್ರೈನ್‌ ಜೋರ್ಡಾನ್‌ ಮೇಲೆ ಇರಾನ್‌ ದಾಳಿ ನಡೆಸಿದೆ. ಜೋರ್ಡಾನ್‌ನಲ್ಲಿ ನಡೆಸಿದ ದಾಳಿ ವೇಳೆ ಅಮೆರಿಕದ ಹಲವು ಯುದ್ಧ ವಿಮಾನಗಳು, ವೈಮಾನಿಕ ಇಂಧನ ತುಂಬಿಸಲು ನೆರವಾಗುವ ವಿಮಾನಗಳು ಧ್ವಂಸಗೊಂಡಿವೆ ಎಂದು ಇರಾನ್‌ ಹೇಳಿದೆ.