ಇರಾನ್ ಅಧ್ಯಕ್ಷ ಹೆಲಿಕಾಪ್ಟರ್ ದುರಂತದಲ್ಲಿ ಸಾವು: ಇಬ್ರಾಹಿಂ ರೈಸಿ ಸಾವು ಖಚಿತಪಡಿಸಿದ ಇರಾನ್ ಮಾಧ್ಯಮ

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಅವರು ಹಾಗೂ ಇರಾನ್ ವಿದೇಶಾಂಗ ಸಚಿವ ಹುಸೈನ್ ಅಮಿರ್ ಅಬ್ದೊಲ್ಲಾಹಿಯನ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ನಿನ್ನೆ ಅಪಘಾತಕ್ಕೀಡಾಗಿತ್ತು.

Irans president killed in helicopter crash Iranian media confirm death of Ibrahim Raisi akb

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಅವರು ಹಾಗೂ ಇರಾನ್ ವಿದೇಶಾಂಗ ಸಚಿವ ಹುಸೈನ್ ಅಮಿರ್ ಅಬ್ದೊಲ್ಲಾಹಿಯನ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ನಿನ್ನೆ ಅಪಘಾತಕ್ಕೀಡಾಗಿತ್ತು. ಆದರೆ ಈಗ ಅವರು ಸಾವಿಗೀಡಾಗಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮ ಐಆರ್‌ಎನ್ಎ ವರದಿ ಮಾಡಿದೆ. ಇರಾನ್ ಅಧ್ಯಕ್ಷರ ನಿಧನಕ್ಕೆ ಈಗ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹಾಗೂ ಅವರ ಜೊತೆಗಿದ್ದ ಇರಾನ್ ವಿದೇಶಾಂಗ ಸಚಿವ ಹುಸೈನ್ ಅಮಿರ್ ಅಬ್ದೊಲ್ಲಾಹಿಯನ್ ಹಾಗೂ ಕೆಲ ಅಧಿಕಾರಿಗಳು ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ.  ಇರಾನ್ ಹಾಗೂ ಅಜೆರ್ಬೈಜಾನಿ ಗಡಿಯಲ್ಲಿ ನಿನ್ನೆ ಅಜೆರ್ಬೈಜಾನಿ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರು ಕ್ವಿಜ್ ಖಲಾಸಿ ಅಣೆಕಟ್ಟನ್ನು ಉದ್ಘಾಟಿಸಿದ್ದರು. ಈ ಸಮಾರಂಭಕ್ಕೆ ಇರಾನ್ ಅಧ್ಯಕ್ಷ ರೈಸಿ ಹಾಗೂ ವಿದೇಶಾಂಗ ಸಚಿವರು ಹೋಗಿದ್ದರು. ಅಲ್ಲಿಂದ ಇರಾನ್‌ನ ತಬ್ರೀಜ್‌ಗೆ ಆಗಮಿಸುವ ವೇಳೆ ಅವರಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು. ಅಧ್ಯಕ್ಷ ರೈಸಿ, ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್ ಮತ್ತು ಇತರ ಅಧಿಕಾರಿಗಳಿದ್ದ ಹೆಲಿಕಾಪ್ಟರ್ ಟೇಕಾಫ್ ಆದ ಸುಮಾರು 30 ನಿಮಿಷಗಳ ನಂತರ ರಾಡಾರ್ ಸಂಪರ್ಕ ಕಳೆದುಕೊಂಡಿತು. ಕೂಡಲೇ ಹೆಲಿಕಾಪ್ಟರ್‌ಗಾಗಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಗಳು ನಡೆದವು. ಆದರೆ ಈಗ ಇರಾನ್‌ನ ರಾಜ್ಯ ಮಾಧ್ಯಮಗಳು ಇದೊಂದು ಅಪಘಾತ ಎಂದು ಹೇಳಿದ್ದು, ಇರಾನ್ ಅಧ್ಯಕ್ಷರು ಈ ದುರಂತದಲ್ಲಿ ಸಾವನ್ನಪ್ಪಿರುವುದನ್ನು ಖಚಿತಪಡಿಸಿವೆ.

ಇಸ್ರೇಲ್‌ ಜತೆ ಇರಾನ್‌ ವೈಷಮ್ಯ ತಾರಕಕ್ಕೆ ಏರಿರುವಾಗಲೇ ಈ ಬೆಳವಣಿಗೆ ನಡೆದಿದೆ. ರೈಸಿ ಯೋಗಕ್ಷೇಮಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರಾರ್ಥಿಸಿದ್ದರು. ಇರಾನ್‌ನ ಪೂರ್ವ ಅಜರ್‌ಬೈಜಾನ್ ಪ್ರಾಂತ್ಯದ ಜೋಲ್ಫಾ ಬಳಿಯ ದುರ್ಗಮ ಬೆಟ್ಟಗಳಲ್ಲಿ ಭಾನುವಾರ ಈ ಘಟನೆ ಸಂಭವಿಸಿತ್ತು. ಪ್ರತಿಕೂಲ ಹವಾಮಾನವು ಘಟನೆಗೆ ಕಾರಣ ಎಂದು ಇರಾನ್‌ ಸರ್ಕಾರ ಹೇಳಿದೆ. ಅಧ್ಯಕ್ಷರ ಜತೆ ವಿದೇಶಾಂಗ ಸಚಿವ ಹೊಸೈನ್ ಅಮೀರ್-ಅಬ್ದುಲ್ಲಾಹಿಯಾನ್ ಕೂಡ ಕಾಣೆ ಆಗಿದ್ದರು. ಆದರೆ ಹೆಲಿಕಾಪ್ಟರ್‌ ಪತ್ತೆ 65 ರಕ್ಷಣಾ ತಂಡಗಳು ಶೋಧಿಸಿ, ಅದರ ಅವಶೇಷಗಳನ್ನು ಪತ್ತೆ ಹಚ್ಚುವಲ್ಲಿ ಯಶ ಕಂಡಿದ್ದವು. ಆದರೆ ರೈಸಿ ಮತ್ತು ಹುಸೇನ್‌ ಸ್ಥಿತಿ ತಿಳಿದುಬಂದಿರಲಿಲ್ಲ. ರಾತ್ರಿ ಹೊತ್ತು ಹಾಗೂ ಪ್ರತಿಕೂಲ ಹವಾಮಾನವು ಶೋಧಕ್ಕೆ ಅಡ್ಡಿ ಆಗಿದ್ದವು.

ಉತ್ತರಾಧಿಕಾರಿ ಪ್ರಕ್ರಿಯೆ ಶುರು:

ಈ ನಡುವೆ, ಅಧ್ಯಕ್ಷರ ಸ್ಥಿತಿಗತಿ ಬಗ್ಗೆ ಗೊಂದಲ ಇರುವ ಕಾರಣ ಇರಾನ್‌ ಉಪಾಧ್ಯಕ್ಷಗೆ ಅಧ್ಯಕ್ಷ ಪಟ್ಟ ಕಟ್ಟುವ ಪ್ರಕ್ರಿಯೆಯೂ ನಡೆದಿದೆ ಎಂದು ಮೂಲಗಳು ಹೇಳಿವೆ. ಏತನ್ಮಧ್ಯೆ ಶಾಂತಿ ಕಾಪಾಡಬೇಕು ಹಾಗೂ ವದಂತಿ ಹರಡಿಸಬಾರದು ಎಂದು ಇರಾನ್ ಪರಮೋಚ್ಚ ನಾಯಕ ಅಲಿ ಖಮೇನಿ ಮನವಿ ಮಾಡಿದ್ದಾರೆ.

ಆಗಿದ್ದೇನು?:

ಅಜರ್‌ಬೈಜಾನ್‌ಗೆ ಅಣೆಕಟ್ಟೆ ಉದ್ಘಾಟನೆಗೆಂದು ಹೋಗಿದ್ದ ಅಧ್ಯಕ್ಷ ರೈಸಿ ಅವರು ವಿದೇಶಾಂಗ ಸಚಿವ, ತಮ್ಮ ಪ್ರತಿನಿಧಿ ಹಾಗೂ ಅಧಿಕಾರಿಯೊಬ್ಬರ ಸಮೇತ ತೆಹ್ರಾನ್‌ಗೆ 3 ಹೆಲಿಕಾಪ್ಟರ್‌ ತಂಡದೊಂದಿಗೆ ಮರಳುತ್ತಿದ್ದರು. 2 ಹೆಲಿಕಾಪ್ಟರ್ ಸುರಕ್ಷಿತವಾಗಿ ವಾಪಸು ಬಂದರೆ ಅಧ್ಯಕ್ಷ ಹಾಗೂ ವಿದೇಶಾಂಗ ಸಚಿವ ಇದ್ದ ಕಾಪ್ಟರ್‌ ಪತನಗೊಂಡಿತ್ತು.

ಇರಾನ್ ಅಧ್ಯಕ್ಷ ಸಂಚರಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತ, ಮುಂದುವರಿದ ರಕ್ಷಣಾ ಕಾರ್ಯಾಚರಣೆ!

Latest Videos
Follow Us:
Download App:
  • android
  • ios