67 ವರ್ಷಗಳಿಂದ ಸ್ನಾನ ಮಾಡಿಲ್ಲ... ಆದರೂ ಇವರಷ್ಟು ಆರೋಗ್ಯವಾಗಿ ಬೇರಾರು ಇಲ್ಲ...! ಏನೀ ವಿಚಿತ್ರ

  • 67 ವರ್ಷಗಳಿಂದ ಸ್ನಾನ ಮಾಡದ ವ್ಯಕ್ತಿ
  • ಆದರೂ ಸಂಪೂರ್ಣ ಆರೋಗ್ಯ
  • ತಪಾಸಣೆ ನಡೆಸಿದ ವೈದ್ಯರಿಗೆ ಶಾಕ್‌
Irans 87 year old man who hasnt bathed in 67 years akb

ಇರಾನ್(ಜ. 20): ಉತ್ತಮ ಆರೋಗ್ಯಕ್ಕಾಗಿ ಸ್ವಚ್ಛವಾಗಿರುವುದರ ಜೊತೆ ದಿನವೂ ಸ್ನಾನ ಮಾಡಬೇಕು ಶುದ್ಧವಾದ ನೀರನ್ನೇ ಕುಡಿಯಬೇಕು ಎಂಬುದು ನಾವು ನೀವೆಲ್ಲಾ ಇದುವರೆಗೆ ಕೇಳಿಕೊಂಡು ಹಾಗೂ ಪಾಲಿಸಿಕೊಂಡು ಬಂದಿರುವ ಜೀವನ ನಿಯಮ. ಆದರೆ ಇಲ್ಲೊಬ್ಬರು ವ್ಯಕ್ತಿ 67  ವರ್ಷಗಳಿಂದ ಸ್ನಾನವೇ ಮಾಡಿಲ್ಲವಂತೆ. ಹಾಗಂತ ಅವರೇನೂ ರೋಗ ಪೀಡಿತರಾಗಿಲ್ಲ. ಕೊಳಚೆ ನೀರನ್ನೇ ಕುಡಿದರು ಒಳ್ಳೆಯ ಆರೋಗ್ಯವನ್ನು ಹೊಂದಿದ್ದಾರೆ. ಹಾಗಂತ ಇವರಿಗೇನೋ ಸಣ್ಣ ಪ್ರಾಯವಲ್ಲ. 87 ವಸಂತಗಳನ್ನು ಇವರು ತುಂಬಾ ಆರೋಗ್ಯಯುತವಾಗಿಯೇ ಕಳೆದಿದ್ದಾರೆ. 

ಇರಾನ್ ಮೂಲದ ಈ ವೃದ್ಧನ ಹಸೆರು ಅಮೌ ಜಾಜಿ (Amou Jaji) 87 ವರ್ಷದ ಇವರು ಇದುವರೆಗೂ ಸ್ನಾನವನ್ನೇ ಮಾಡಿಲ್ಲವಂತೆ. ಕೊಳಚೆ ನೀರನ್ನು ಕುಡಿಯುವ ಇವರು ರಸ್ತೆ ಬದಿ ವಾಹನಗಳ ಅಡಿಗೆ ಸಿಲುಕಿ ಸತ್ತ ಪ್ರಾಣಿಗಳನ್ನೇ ಆಹಾರವಾಗಿ ತಿನ್ನುತ್ತಿದ್ದಾರೆ. ಜೊತೆಗೆ ಕಳೆದ 67 ವರ್ಷಗಳಿಂದ ಸ್ನಾನವನ್ನೇ ಮಾಡಿಲ್ಲ. ಆದಾಗ್ಯೂ ಒಳ್ಳೆಯ ಆರೋಗ್ಯವನ್ನು ಇವರು ಹೊಂದಿದ್ದು, ಇವರ ಆರೋಗ್ಯ ತಪಾಸಣೆ ಮಾಡಿದ ವೈದ್ಯರು ಶಾಕ್‌ ಆಗಿದ್ದಾರೆ. 

ಸ್ನಾನ ಮಾಡದೇ ಇದ್ದರೆ ಇದು ಅದೃಷ್ಟವನ್ನು ಮರಳಿ ತರುತ್ತದೆ ಎಂದು ಅಮೌ ಜಾಜಿ ಅವರಿಗೆ ಮನವರಿಕೆಯಾಯಿತಂತೆ. ನಂತರ ಅವರು ಸ್ನಾನ ಮಾಡುವುದನ್ನೇ ನಿಲ್ಲಿಸಿದರಂತೆ. ಇವರು ಮಾರ್ಕೆಟ್‌ನಲ್ಲಿ ಸಿಗುವಂತಹ ದೈನಂದಿನ ಆಹಾರವನ್ನು ಸೇವಿಸುತ್ತಿಲ್ಲ. ಇವರು ರಸ್ತೆ ಬದಿ ವಾಹನಗಳಿಗೆ ಸಿಲುಕಿ ಪ್ರಾಣಬಿಟ್ಟ ಮೊಲ, ಮುಳ್ಳುಹಂದಿ ಮುಂತಾದವುಗಳನ್ನು ತಿನ್ನುತ್ತಾರಂತೆ.  ಆಲ್ಲದೇ ಈ ಸತ್ತ ಪ್ರಾಣಿಗಳನ್ನು ತೊಳೆಯಲು ಅವರು ಕೊಳಚೆ ನೀರುಗಳನ್ನೇ ಬಳಸುತ್ತಾರಂತೆ. 

Cold Water Bath In Winter: ಚಳಿಗಾಲದಲ್ಲಿ ತಣ್ಣೀರ ಸ್ನಾನ ಬೆಸ್ಟ್

ಜಾಜಿ ಅವರ ಈ ರೀತಿಯ ವಿಲಕ್ಷಣವಾದ ಜೀವನಶೈಲಿಯಿಂದಾಗಿ ಅವರಿಗೆ ಸ್ನೇಹಿತರು ಅಥವಾ ಗೆಳತಿಯರು ಇಲ್ಲವಂತೆ ಹೀಗಾಗಿ ಅವರು ತಮ್ಮ ಹೆಚ್ಚಿನ ಸಮಯವನ್ನು ಏಕಾಂಗಿಯಾಗಿ ಕಳೆಯುತ್ತಾರಂತೆ. ಪ್ರಾಣಿಗಳ ಗೊಬ್ಬರದಿಂದ ತುಂಬಿದ ಪೈಪ್ ಅನ್ನು ಧೂಮಪಾನದಂತೆ ಬಳಸುವುದು ಅವರ ನೆಚ್ಚಿನ  ಹವ್ಯಾಸವಾಗಿತ್ತು ಎಂದು ಅವರು ಹೇಳಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

87 ವರ್ಷದ ಜಾಜಿ ಪ್ರಸ್ತುತ ದೇಜ್ಗಾ (Dejgah) ಗ್ರಾಮದಲ್ಲಿ ಸಣ್ಣ ಗುಡಿಸಲೊಂದರಲ್ಲಿ ವಾಸಿಸುತ್ತಿದ್ದಾರೆ.  ಅವರ ವಿಲಕ್ಷಣ ಜೀವನಶೈಲಿಯಿಂದ ಪ್ರಭಾವಿತರಾದ ಸ್ಥಳೀಯರು ಇದನ್ನು ಅವರಿಗಾಗಿ ನಿರ್ಮಿಸಿ ಕೊಟ್ಟಿದ್ದಾರೆ. ಆದರೆ ಸ್ವಲ್ಪ ಸಮಯದ ಹಿಂದೆ, ಅವರು ನೆಲದಲ್ಲಿ ಹೊಂಡ ಮಾಡಿ ಅದರಲ್ಲಿ ವಾಸಿಸುತ್ತಿದ್ದರು.

Viral News: ಮೈಕೊರೆಯುವ ಚಳಿ, ಬಿಸಿನೀರು ಸ್ನಾನಕ್ಕೆ ಪೋರನ ಖಿಲಾಡಿ ಐಡ್ಯಾ..!

ಇವರ ಈ ವಿಲಕ್ಷಣ ಜೀವನ ಶೈಲಿಯನ್ನು ನೋಡಿ ವೈದ್ಯರು ಜಾಜಿಗೆ ವೈದ್ಯಕೀಯ  ತಪಾಸಣೆಗಳನ್ನು ನಡೆಸಿದಾಗ, ಅವರ ದೇಹದಲ್ಲಿ ಯಾವುದೇ ಅನಾರೋಗ್ಯಕರ ಬ್ಯಾಕ್ಟೀರಿಯಾ ಅಥವಾ ಗಂಭೀರ ಕಾಯಿಲೆಗಳಿಲ್ಲ ಎಂದು ತಿಳಿದು ಅವರು ಆಶ್ಚರ್ಯಚಕಿತರಾದರು. ವಾಸ್ತವವಾಗಿ, ಅವರು ಉತ್ತಮ ನೈರ್ಮಲ್ಯದೊಂದಿಗೆ ಸಾಮಾನ್ಯ ಮನೆಯಲ್ಲಿ ವಾಸಿಸುವವರಂತೆ ಆರೋಗ್ಯವಂತರಾಗಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. 

ಪರಾವಲಂಬಿ ಶಾಸ್ತ್ರದ (arasitology) ಸಹ ಪ್ರಾಧ್ಯಾಪಕರೊಬ್ಬರು ಟೆಹ್ರಾನ್‌ (Tehran) ನಲ್ಲಿರುವ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ಗಾಗಿ ಜಾಜಿಯ ವೈದ್ಯಕೀಯ ತಪಾಸಣೆಗಳನ್ನು ನಡೆಸಿದರು. ಸ್ನಾನ ಮಾಡದ ಅವರ ದೇಹದಲ್ಲಿ ಇರುವಂತಹ ಪರಾವಲಂಬಿ ಬ್ಯಾಕ್ಟೀರಿಗಳ ಬಗ್ಗೆ ಅಧ್ಯಯನ ಮಾಡುವುದು ವೈದ್ಯರು ಮತ್ತು ತಜ್ಞರ ಉದ್ದೇಶವಾಗಿತ್ತು. ಆದರೆ  67 ವರ್ಷಗಳ ಕಾಲ ಸತ್ತ ಪ್ರಾಣಿಗಳನ್ನು ತಿನ್ನುತ್ತಿದ್ದರೂ ಮತ್ತು ಸ್ನಾನ ಮಾಡದೆ ಹೋದರೂ ಜಾಜಿಯ ದೇಹದಲ್ಲಿ ಯಾವುದೇ ಪರಾವಲಂಬಿಗಳಿಲ್ಲ ಎಂದು ಅವರು ದೃಢಪಡಿಸಿದರು.

ಹಾಗಂತ ಇವರೇನು ಮಾನಸಿಕ ಅಸ್ವಸ್ಥರಲ್ಲ. ಇವರಿಗೆ ಫ್ರೆಂಚ್ ಕ್ರಾಂತಿ ಮತ್ತು ರಷ್ಯಾದ ಕ್ರಾಂತಿಯಂತಹ ಐತಿಹಾಸಿಕ ಘಟನೆಗಳ ಬಗ್ಗೆ ಚೆನ್ನಾಗಿ ತಿಳಿದಿದೆ. ಬಹುತೇಕ ನೆರೆಹೊರೆಯವರು ಇವರನ್ನು ಗೌರವಿಸುತ್ತಾರೆ. ಆದರೆ ಕೆಲವರು ಇವರ ಮೇಲೆ ಏನಾದರು ವಸ್ತುಗಳನ್ನು ಬಿಸಾಕಲು ನೋಡುತ್ತಾರಂತೆ. ಆದರೆ ಅದೃಷ್ಟವಶಾತ್, ಅವರಿಗೆ ಸ್ಥಳೀಯ ಆಡಳಿತ ಸಹಾಯ ಮಾಡಿದೆ. ಸ್ಥಳೀಯ ಗವರ್ನರ್ ಈಗ ಅವರನ್ನು ಒಂಟಿಯಾಗಿ ಬಿಡುವಂತೆ ಜನರನ್ನು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

Latest Videos
Follow Us:
Download App:
  • android
  • ios