ಇರಾನ್ ಹಿಟ್‌ಲಿಸ್ಟ್‌ನಲ್ಲಿ ಅಮೆರಿಕಾ ಅಧ್ಯಕ್ಷ ಟ್ರಂಪ್ ಆಸ್ತಿಗಳು!
ಇರಾನ್ ಹಿಟ್‌ಲಿಸ್ಟ್‌ನಲ್ಲಿ ಟ್ರಂಪ್ ಆಸ್ತಿಗಳು!| ರೆಸಾರ್ಟ್, ಹೋಟೆಲ್, ಗಾಲ್ಫ್ ಕೋರ್ಸ್ ಮೇಲೆ ದಾಳಿ ಸುಳಿವು
ಟೆಹ್ರಾನ್[ಜ.08]: ತನ್ನ ಸೇನೆಯ ಉನ್ನತ ಕಮಾಂಡರ್ ಖಾಸಿಂ ಸುಲೈಮಾನಿ ಹತ್ಯೆ ಹಿನ್ನೆಲೆಯಲ್ಲಿ ಆಕ್ರೋಶದಿಂದ ಕುದಿಯುತ್ತಿರುವ ಇರಾನ್, ಪ್ರತೀಕಾರ ತೀರಿಸಿಕೊಳ್ಳಲು ಕೆಲವೊಂದು ಸ್ಥಳಗಳನ್ನು ಗುರುತು ಮಾಡಿದೆ. ಅದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾಸಗಿ ಆಸ್ತಿಗಳೇ ಸಾಕಷ್ಟುಸಂಖ್ಯೆಯಲ್ಲಿ ಇರುವುದು ಕುತೂಹಲಕ್ಕೆ ಕಾರಣವಾಗಿದೆ.
ಇರಾನ್‌ಗೆ ಅಮೆರಿಕ ಸರ್ಕಾರ ಅಥವಾ ಅಲ್ಲಿನ ಜನರಿಗಿಂತ, ಸುಲೈಮಾನಿ ಹತ್ಯೆಗೆ ನೇರ ಕಾರಣರಾದ ಟ್ರಂಪ್ ವಿರುದ್ಧವೇ ಕೋಪವಿದೆ. ಹೀಗಾಗಿ ಟ್ರಂಪ್ ಅವರನ್ನು ಹತ್ಯೆ ಮಾಡಿದವರಿಗೆ 575 ಕೋಟಿ ರು. ಬಹುಮಾನ ಘೋಷಿಸಿದೆ. ಇದೇ ವೇಳೆ, ಟ್ರಂಪ್ ಆಸ್ತಿಗಳೇ ತನ್ನ ಹಿಟ್‌ಲಿಸ್ಟ್‌ನಲ್ಲಿರುವ ಸ್ಪಷ್ಟಸುಳಿವನ್ನು ಬಿಟ್ಟುಕೊಟ್ಟಿದೆ.
ಪೆಂಟಗನ್ ಭಯೋತ್ಪಾದಕ ಸಂಘಟನೆ: ಇರಾನ್ ಸಂಸತ್ತು ಘೋಷಣೆ!
ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅವರ ಸಲಹೆಗಾರ ಹೆಸಾಮೆದ್ದಿನ್ ಆಶೆನಾ ಅವರು ಟ್ರಂಪ್ ಆಸ್ತಿಗಳಿಗೆ ಸಂಬಂಧಿಸಿದ ಫೋಬ್ಸ್‌ರ್ ಪತ್ರಿಕೆಯ ಲಿಂಕ್‌ವೊಂದನ್ನು ಶೇರ್ ಮಾಡಿದ್ದಾರೆ. ತನ್ಮೂಲಕ ಇವು ಇರಾನ್ ಹಿಟ್‌ಲಿಸ್ಟ್‌ನಲ್ಲಿರುವ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ನ್ಯೂಯಾರ್ಕ್ನಲ್ಲಿರುವ ಟ್ರಂಪ್ ಹೋಟೆಲ್, ಅಮೆರಿಕದಾದ್ಯಂತ ಇರುವ ರೆಸಾರ್ಟ್‌ಗಳು, ಅಮೆರಿಕ ಹಾಗೂ ಬ್ರಿಟನ್‌ನಲ್ಲಿರುವ ಗಾಲ್‌್ಫ ಕೋರ್ಸ್‌ಗಳು ಇರಾನ್ ಹಿಟ್‌ಲಿಸ್ಟ್‌ನಲ್ಲಿವೆ ಎಂದು ಹೇಳಲಾಗಿದೆ. ಇದರ ಜತೆಗೆ ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನವನ್ನೂ ಈ ಪಟ್ಟಿಗೆ ಇರಾನ್ ಸೇರಿಸಿದೆ ಎಂದು ವರದಿಗಳು ತಿಳಿಸಿವೆ.
ಸುಲೈಮಾನಿ ಹತ್ಯೆಗೆ ಆದೇಶಿಸುವ ವೇಳೆ ಟ್ರಂಪ್ ಅವರು ಫೆä್ಲೕರಿಡಾದಲ್ಲಿರುವ ತಮ್ಮ ಒಡೆತನದ ಮಾರ್- ಎ- ಲಾಗೋ ರೆಸಾರ್ಟ್‌ನಲ್ಲಿ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದರು. ಹೀಗಾಗಿ ಆ ರೆಸಾರ್ಟ್, ವಾಷಿಂಗ್ಟನ್, ಲಾಸ್ ವೇಗಾಸ್‌ನಲ್ಲಿರುವ ಟ್ರಂಪ್ ಇಂಟರ್‌ನ್ಯಾಷನಲ್ ಹೋಟೆಲ್ಸ್ ಮತ್ತಿತರ ಆಸ್ತಿಗಳ ಮೇಲೆ ಇರಾನ್ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇರಾನ್‌ಗೆ ಪ್ರಮುಖ ಸಮಸ್ಯೆ ಇರುವುದು ಟ್ರಂಪ್ ಜತೆಗೆ. ಅಮೆರಿಕ ಜನರ ಮೇಲಲ್ಲ ಎಂದು ಆಶೇನಾ ಅವರು ಗುಟ್ಟು ಹಿಟ್ಟುಕೊಟ್ಟಿದ್ದಾರೆ.
ಟ್ರಂಪ್ ತಲೆಗೆ ಇರಾನ್ 576 ಕೋಟಿ ರೂಪಾಯಿ ಸುಪಾರಿ!