ಅಮೆರಿಕ- ಇರಾನ್‌ ನಡುವೆ ಸಂಧಾನ ಮಾತುಕತೆ ನಡೆಯುತ್ತಿದೆ ಎನ್ನುವ ಸುದ್ದಿ ನಡುವೆಯೇ, ‘ನಾವು ಅಮೆರಿಕ ಅಧ್ಯಕ್ಷ ಟ್ರಂಪ್‌ ಅಥವಾ ಅವರ ಅಳಿಯ ಕುಶ್ನರ್‌ ಜತೆ ಮಾತನಾಡಲ್ಲ. ಅವರ ಬದಲು ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಜತೆ ಮಾತುಕತೆ ಬಯಸುತ್ತೇವೆ‘ ಎಂದು ಇರಾನ್‌ ಹೇಳಿದೆ

ಟೆಹ್ರಾನ್‌: ಅಮೆರಿಕ- ಇರಾನ್‌ ನಡುವೆ ಸಂಧಾನ ಮಾತುಕತೆ ನಡೆಯುತ್ತಿದೆ ಎನ್ನುವ ಸುದ್ದಿ ನಡುವೆಯೇ, ‘ನಾವು ಅಮೆರಿಕ ಅಧ್ಯಕ್ಷ ಟ್ರಂಪ್‌ ಅಥವಾ ಅವರ ಅಳಿಯ ಕುಶ್ನರ್‌ ಜತೆ ಮಾತನಾಡಲ್ಲ. ಅವರ ಬದಲು ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಜತೆ ಮಾತುಕತೆ ಬಯಸುತ್ತೇವೆ‘ ಎಂದು ಇರಾನ್‌ ಹೇಳಿದೆ ಹಾಗೂ ಈ ಬಗ್ಗೆ ಅಮೆರಿಕಕ್ಕೆ ಸಂದೇಶ ಕಳಿಸಿದೆ ವರದಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಾಂತಿ ಮಾತುಕತೆಗೆ ಸಿದ್ಧ

‘ಈಗ ನಡೆಯುತ್ತಿರುವ ಯುದ್ಧವನ್ನು ಶಾಂತಿ ಮಾತುಕತೆಗೆ ಸಿದ್ಧ. ಆದರೆ ಡೊನಾಲ್ಡ್‌ ಟ್ರಂಪ್‌ ಅಥವಾ ಸರ್ಕಾರದ ಇತರರೊಂದಿಗೆ ಮಾತುಕತೆ ನಡೆಸುವ ಬದಲು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಅವರೊಂದಿಗೆ ಮಾತುಕತೆ ಏರ್ಪಡಿಸಬೇಕು. ಅಮೆರಿಕದ ವಿಶೇಷ ರಾಯಭಾರಿ ಸ್ಟೀವ್‌ ವಿಟ್ಕಾಫ್‌ ಅಥವಾ ಜೇರೆಡ್‌ ಕುಶ್ನರ್‌ ನೇತೃತ್ವದ ಮಾತುಕತೆಗಳು ಯಶಸ್ವಿಯಾಗುವ ಸಾಗುವ ಸಾಧ್ಯತೆ ಇಲ್ಲ’ ಎಂದು ಇರಾನ್‌ ಹೇಳಿದೆ ಎನ್ನಲಾಗಿದೆ.

ಸೌದಿ ಜತೆ ಪಾಕ್‌ ಪ್ರಧಾನಿ ಚರ್ಚೆ:

ಈ ನಡುವೆ, ಸಂಧಾನದಲ್ಲಿ ಮಧ್ಯಸ್ಥಿಕೆ ವಹಿಸಲು ಉತ್ಸುಕರಾಗಿರುವ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್, ಸೌದಿ ಅರೇಬಿಯಾ ರಾಜಕುವರ ಮೊಹಮ್ಮದ್ ಬಿನ್‌ ಸಲ್ಮಾನ್‌ ಅವರಿಗೆ ತಮ್ಮ ಯತ್ನಗಳ ಮಾಹಿತಿ ನೀಡಿದ್ದಾರೆ.