ಪೆಂಟಗನ್ ಭಯೋತ್ಪಾದಕ ಸಂಘಟನೆ: ಇರಾನ್ ಸಂಸತ್ತು ಘೋಷಣೆ!
ದ್ವಿಗುಣಗೊಂಡ ಇರಾನ್-ಅಮೆರಿಕ ನಡುವಿನ ವೈಮನಸ್ಸು| ‘ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಭಯೋತ್ಪಾದಕ ಸಂಘಟನೆ’| ನಿರ್ಣಯವನ್ನು ಬಹುಮತದಿಂದ ಅಂಗೀಕರಿಸಿದ ಇರಾನ್ ಸಂಸತ್ತು| ‘ಪೆಂಟಗನ್ ಹಾಗೂ ಅದರ ಎಲ್ಲಾ ಅಂಗಸಂಸ್ಥೆಗಳು ಭಯೋತ್ಪಾದಕ ಸಂಘಟನೆಗಳು’| ಖಾಸಿಂ ಸುಲೆೈಮಾನಿ ಹತ್ಯೆ ಮಾಡಿದವರು ಭಯೋತ್ಪಾದಕರು ಎಂದ ಇರಾನ್| ಕುರ್ದಿಶ್ ಪಡೆ ಆಧುನಿಕರಣಕ್ಕೆ 200 ಮಿಲಿಯನ್ ಯುರೋ|
ಟೆಹರನ್(ಜ.07): ಇರಾನ್-ಅಮೆರಿಕ ನಡುವಿನ ವೈಮನಸ್ಸು ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದ್ದು, ಎರಡೂ ರಾಷ್ಟ್ರಗಳು ಯುದ್ಧದ ಹೊಸ್ತಿಲಲ್ಲಿ ಬಂದು ನಿಂತಿರುವುದು ವಿಶ್ವವನ್ನು ಆತಂಕಕ್ಕೀಡು ಮಾಡಿದೆ.
ಈ ಮಧ್ಯೆ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಹಾಗೂ ಅದರ ಎಲ್ಲಾ ಅಂಗ ಸಂಸ್ಥೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಇರಾನ್ ಸಂಸತ್ತು ಘೋಷಿಸಿದೆ.
ಟ್ರಂಪ್ ತಲೆಗೆ ಇರಾನ್ 576 ಕೋಟಿ ರೂಪಾಯಿ ಸುಪಾರಿ!
ಅಮೆರಿಕದ ರಕ್ಷಣಾ ಇಲಾಖೆ ಹಾಗೂ ಅದರ ಎಲ್ಲಾ ಅಂಗಸಂಸ್ಥೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಪರಿಗಣಿಸುವ ತಿದ್ದುಪಡಿ ವಿಧೇಯಕವನ್ನು ಇಂದು ಇರಾನ್ ಸಂಸತ್ತು ಬಹುಮತದಿಂದ ಅಂಗೀಕರಿಸಿದೆ.
ಇರಾನ್ ಸೇನಾ ಕಮಾಂಡರ್ ಜನರಲ್ ಖಾಸಿಂ ಸುಲೆೈಮಾನಿ ಹತ್ಯೆ ಮಾಡಿದವರು ಭಯೋತ್ಪಾದಕರು ಎಂದು ಇರಾನ್ ಸಂಸತ್ತು ಅನುಮೋದಿಸಿದೆ.
ಅಮೆರಿಕ ವಿರುದ್ಧ ಇರಾನ್ ಸೈಬರ್ ಸಮರ ಶುರು, ವೆಬ್ ಸೈಟ್ ಹ್ಯಾಕ್!
ಇದೇ ವೇಳೆ ಕುರ್ದಿಶ್ ಪಡೆಯನ್ನು ಆಧುನಿಕರಣಗೊಳಿಸಲು ರಾಷ್ಟ್ರೀಯ ಅಭಿವೃದ್ದಿ ನಿಧಿಯಿಂದ 200 ಮಿಲಿಯನ್ ಯುರೋ ನೀಡುವ ನಿರ್ಣಯವನ್ನು ಸ್ಪೀಕರ್ ಅಲಿಲಾರಿಜಾನಿ ಅನುಮೋದಿಸಿದ್ದಾರೆ.