ಹಮಾಸ್‌ ಉಗ್ರರು ಮತ್ತು ಇಸ್ರೇಲ್ ನಡುವೆ ಆರಂಭವಾಗಿದ್ದ ಯುದ್ಧ ವರ್ಷ ಪೂರೈಸುತ್ತಿರುವ ಹೊತ್ತಿನಲ್ಲೇ, ಯುದ್ಧ ಭೂಮಿಗೆ ಮತ್ತಷ್ಟು ದೇಶಗಳು ಪ್ರವೇಶ ಮಾಡಿದ್ದು ಯುದ್ಧ ಕಾವೇರುವಂತೆ ಮಾಡಿದೆ. 

ಜೆರುಸಲೇಂ (ಅ.06): ಹಮಾಸ್‌ ಉಗ್ರರು ಮತ್ತು ಇಸ್ರೇಲ್ ನಡುವೆ ಆರಂಭವಾಗಿದ್ದ ಯುದ್ಧ ವರ್ಷ ಪೂರೈಸುತ್ತಿರುವ ಹೊತ್ತಿನಲ್ಲೇ, ಯುದ್ಧ ಭೂಮಿಗೆ ಮತ್ತಷ್ಟು ದೇಶಗಳು ಪ್ರವೇಶ ಮಾಡಿದ್ದು ಯುದ್ಧ ಕಾವೇರುವಂತೆ ಮಾಡಿದೆ. ಅದರ ನಡುವೆಯೇ ಇತ್ತೀಚೆಗೆ ಇರಾನ್ ತನ್ನ ಮೇಲೆ ನಡೆಸಿದ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಇರಾನ್‌ ಪರಮಾಣು ಘಟಕ ಗಳ ಮೇಲೆ ಇಸ್ರೇಲ್ ದಾಳಿ ನಡೆಸಬಹುದು ಎಂಬ ದೊಡ ಆತಂಕ ಎದುರಾಗಿದೆ. ಒಂದು ವೇಳೆ ಇಂಥ ದಾಳಿ ಏನಾದರೂ ನಡೆದಿದ್ದೇ ಆದಲ್ಲಿ ಅದು ಮತ್ತೊಂದು ಘನಘೋರ ಘಟನೆಗೆ ಸಾಕ್ಷಿಯಾಗಲಿದೆ. ಹೀಗಾಗಿ ಇಸ್ರೇಲ್‌ನ ಮುಂದಿನ ನಡೆ ಭಾರೀ ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿದೆ. 

ಹಿಜ್ಜುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆಗೆ ಪ್ರತಿಯಾಗಿ ಇಸ್ರೇಲ್‌ನ ಮೇಲೆ ಇರಾನ್ 200ಕ್ಕೂ ಹೆಚ್ಚು ಕ್ಷಿಪಣಿ ದಾಳಿ ನಡೆಸಿತ್ತು. ಆದರೆ ಅದಕ್ಕೆ ಇಸ್ರೇಲ್ ಇನ್ನೂ ತಿರುಗೇಟು ನೀಡಿಲ್ಲ. ಆದರೆ ಕೆಣಕಿದವರನ್ನು ಸುಮ್ಮನೇ ಬಿಡದ ಇತಿಹಾಸ ಹೊಂದಿರುವ ಇಸ್ರೇಲ್, ಇರಾನ್ ಮೇಲೆ ದೊಡ್ಡದೊಂದು ದಾಳಿಗೆ ಸಜ್ಜಾಗುತ್ತಿರಬಹುದು. ಆ ದಾಳಿ ಇರಾನ್‌ ಪರಮಾಣು ಘಟಕಗಳಾಗಿರಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದೆ. ಕಾರಣ, ತನ್ನ ಮೇಲೆ ದಾಳಿ ನಡೆಸುತ್ತಿರುವ ಹಿಜ್ಜುಲ್ಲಾ ಹಮಾಸ್, ಹೌತಿ ಉಗ್ರರಿಗೆ ಇರಾನ್ ಹಣಕಾಸು ಮತ್ತು ಶಸ್ತ್ರಾಸ್ತ್ರ ಪೂರೈಸುತ್ತಿದೆ.

ಇಸ್ರೇಲ್ ಲಿಸ್ಟಲ್ಲಿ ಇರಾನ್ ಅಣು ಸ್ಥಾವರಗಳು?: ಹೀಗಾಗಿ ಇರಾನ್ ಮಟ್ಟಹಾಕಿದರೆ ಉಳಿದ ಮೂರೂ ಸಂಘಟನೆಗಳನ್ನು ಏಕಕಾಲಕ್ಕೆ ಮಟ್ಟಹಾಕಿದಂತೆ ಎಂಬುದು ಇಸ್ರೇಲ್ ಲೆಕ್ಕಾಚಾರ ಎನ್ನಲಾಗಿದೆ. ಇಂಥದ್ದೊಂದು ಲೆಕ್ಕಾಚಾರಕ್ಕೆ ಪೂರಕವಾಗಿ, 'ಪರಮಾಣು ಶಸ್ತ್ರಾಸ್ತ್ರಗಳೇ ದೊಡ್ಡ ಅಪಾಯವಾಗಿರುವಾಗ ಅವುಗಳ ಮೇಲೆಯೇ ಮೊದಲು ದಾಳಿ ನಡೆಸಬೇಕು' ಎಂದು ಅಮೆರಿಕದ ರಿಪ ಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಟ್ರಂಪ್ ಸಲಹೆ ನೀಡಿದ್ದಾರೆ. ಇನ್ನೊಂದೆಡೆ ಇರಾನ್‌ನ ಪರಮಾಣು ಘಟ ಕಗಳ ಮೇಲೆ ದಾಳಿ ನಡೆಸುವುದಿಲ್ಲ ಎಂದು ಇದುವರೆಗೂ ಇಸ್ರೇಲ್‌ಗೆ ನಮಗೆ ಭರವಸೆ ನೀಡಿಲ್ಲ. 

ಜಾತಿ ಗಣತಿ ವರದಿ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚೆ: ಸಿಎಂ ಸಿದ್ದರಾಮಯ್ಯ

ಅಂಥದ್ದೊಂದು ದಾಳಿಯ ಸಂಭನೀಯತೆ ಬಗ್ಗೆ ಏನಾದರೂ ಹೇಳುವುದು ಕಷ್ಟ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿ ದ್ದಾರೆ. ಈ ಮೂಲಕ ಇಸ್ರೇಲ್‌ನ ದಾಳಿಯ ಸಾಧ್ಯತೆ ಯನ್ನು ತಳ್ಳಿಹಾಕುವಂತಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಇಸ್ರೇಲ್‌ನ ವಿದ್ಯುತ್‌ ಸ್ಥಾವರ, ತೈಲ ಘಟಕ ಇರಾನ್ ಟಾರ್ಗೆಟ್ತಾನು ಇತ್ತೀಚೆಗೆ ನಡೆಸಿದ ಕ್ಷಿಪಣಿ ದಾಳಿಗೆ ಇಸ್ರೇಲ್ ಪ್ರತೀಕಾರ ಕೈಗೊಂಡರೆ ಆ ದೇಶದ 3 ವಿದ್ಯುತ್ ಸ್ಥಾವರಗಳು ಹಾಗೂ ತೈಲ ಸಂಸ್ಕರಣಾ ಘಟಕಗಳ ಮೇಲೆ ದಾಳಿ ನಡೆಸುವು ದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್‌ನ ಉಪ ಕಮಾಂಡರ್ ಅಲಿ ಫಡವಿ ಬೆದರಿಕೆ ಹಾಕಿದ್ದಾನೆ.