ಸೈಬರ್ ದಾಳಿ: ಇರಾನ್ ಅಣು ಸಂಸ್ಕರಣಾ ಘಟಕ ಸ್ಥಗಿತ!
ಸೈಬರ್ ದಾಳಿ: ಇರಾನ್ ಅಣು ಸಂಸ್ಕರಣಾ ಘಟಕ ಸ್ಥಗಿತ| ಘಟನೆಯ ಹಿಂದೆ ಇಸ್ರೇಲ್ ಕೈವಾಡ ಶಂಕೆ| ಇದು ನಿಜವೇ ಆಗಿದ್ದರೆ ಮಧ್ಯಪ್ರಾಚ್ಯದಲ್ಲಿ ಸಂಘರ್ಷ
ದುಬೈ(ಏ.12): ಇರಾನಿನ ನತಾಂಜ್ ನಗರದಲ್ಲಿರುವ ಭೂಗತ ಯುರೇನಿಯಂ ಅಣು ಸಂಸ್ಕರಣಾ ಘಟಕದಲ್ಲಿ ಹಠಾತ್ ವಿದ್ಯುತ್ ಕಡಿತವಾದ ಘಟನೆ ಭಾನುವಾರ ನಡೆದಿದೆ. ಇದು ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆ ಇದೆ.
ಘಟನೆಗೆ ಕಾರಣ ಏನು ಎಂಬ ತನಿಖೆಯನ್ನು ಇರಾನ್ ಆರಂಭಿಸಿದೆ. ಆದರೆ ‘ಸೈಬರ್ ದಾಳಿ ನಡೆಸಿದ ಕಾರಣದಿಂದ ಅಣು ಸಂಸ್ಕರಣಾ ಘಟಕದಲ್ಲಿ ವಿದ್ಯುತ್ ಕಡಿತಗೊಂಡಿದೆ’ ಎಂದು ಇಸ್ರೇಲ್ ಮಾಧ್ಯಮಗಳು ಸಂದೇಹ ವ್ಯಕ್ತಪಡಿಸಿವೆ.
ಮಧ್ಯಪ್ರಾಚ್ಯದಲ್ಲಿ ಮೇಲುಗೈ ಸಾಧಿಸಲು ಇಸ್ರೇಲ್-ಇರಾನ್ ಮಧ್ಯೆ ಮುಸುಕಿನ ಗುದ್ದಾಟ ಇದೆ. ಈ ಹಂತದಲ್ಲಿ ನಿಜಕ್ಕೂ ಇಸ್ರೇಲ್ ಈ ಘಟನೆಯ ಹಿಂದಿದ್ದರೆ ಇರಾನ್-ಇಸ್ರೇಲಿನ ನಡುವೆ ಮತ್ತೊಂದು ಸುತ್ತಿನ ಕದನ ಏರ್ಪಡುವ ಸಾಧ್ಯತೆ ಇದೆ.
ಘಟನೆ ಬೆನ್ನಲ್ಲೇ ಅಮೆರಿಕ ರಕ್ಷಣಾ ಕಾರ‍್ಯದರ್ಶಿ ಇಸ್ರೇಲ್‌ಗೆ ಧಾವಿಸಿ ಇಸ್ರೇಲ್ ಪ್ರಧಾನಿ ನೇತನ್ಯಾಹು ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.