ಟೆಹ್ರಾನ್‌(ಜೂ.03):  ಇರಾನ್‌ ದೇಶದ ಅತಿ ದೊಡ್ಡ ಯುದ್ಧ ನೌಕೆ ಅಗ್ನಿ ದುರಂತಕ್ಕೀಡಾಗಿ ಓಮಾನ್‌ ಸಮುದ್ರದಲ್ಲಿ ಮುಳುಗಿರುವ ಘಟನೆ ಬುಧವಾರ ನಡೆದಿದೆ.

ಖಾರ್ಗ್‌ ಹೆಸರಿನ ಯುದ್ಧ ನೌಕೆಯ ದುರಂತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ.ಈ ನೌಕೆಯಲ್ಲಿ ಬುಧವಾರ ನಸುಕಿನ ಜಾವ 2.25ರ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯನ್ನು ನಂದಿಸುವ ಯತ್ನ ವಿಫಲವಾಗಿದ್ದು, ಸಮುದ್ರದಲ್ಲಿ ಮುಳುಗಿದೆ. ನೌಕೆಯಲ್ಲಿದ್ದ ಸಿಬ್ಬಂದಿಯನ್ನು ತೆರವುಗೊಳಿಸಲಾಗಿದೆ.

ಸಮುದ್ರದಲ್ಲಿರುವ ನೌಕೆಗಳಿಗೆ ಇಂಧನ ಮರುಪೂರಣ ಹಾಗೂ ಭಾರೀ ಪ್ರಮಾಣದ ಸರಕುಗಳನ್ನು ಸಾಗಿಸುವ ಸಾಗಿಸುವ ಸಾಮರ್ಥ್ಯ ಇರುವ ಕೆಲವೇ ಕೆಲವು ನೌಕೆಗಳಲ್ಲಿ ಪೈಕಿ ಖಾರ್ಗ್‌ ನೌಕೆ ಕೂಡ ಒಂದೆನಿಸಿತ್ತು. ಇದನ್ನು 1984ರಲ್ಲಿ ಇರಾನ್‌ ನೌಕಾ ಪಡೆಗೆ ಸೇರ್ಪಡೆ ಮಾಡಲಾಗಿತ್ತು.