Asianet Suvarna News Asianet Suvarna News

Troller Got Penalty: ಟ್ರೋಲಿಗರೇ ಟ್ರೋಲ್‌ ಮಾಡುವ ಮುನ್ನ ಎಚ್ಚರ ಎಚ್ಚರ

  • ಇಂಟರ್‌ನೆಟ್‌ನಲ್ಲಿ ಟ್ರೋಲ್‌ ಮಾಡುವ ಮುನ್ನ ಎಚ್ಚರ
  • ಹೋಟೆಲ್‌ ವಿರುದ್ಧ ಸುಳ್ಳು ವಿಮರ್ಶೆ ಬರೆದ ಟ್ರೋಲಿಗ
  • ಕೋರ್ಟ್‌ನಿಂದ 7.52 ಲಕ್ಷ ರೂಪಾಯಿ ದಂಡ
Internet Troller got penalty For Rs 7.52 Lakh After Posting Fake Negative Reviews About Restaurant akb
Author
Bangalore, First Published Dec 16, 2021, 6:47 PM IST

ಇಂಗ್ಲೆಂಡ್‌(ಡಿ. 16): ಇಂಟರ್ನೆಟ್‌ನಲ್ಲಿ ನೀವು ಅನಾಮಧೇಯರು ನೀವು ಏನೂ ಮಾಡಿದರು ಗೊತ್ತಾಗದು ಎಂದು ನೀವು ಭಾವಿಸಬಹುದು ಆದರೆ ಸತ್ಯವೆಂದರೆ ಅಲ್ಲಿ ನೀವು ಮಾಡುವ ಪ್ರತಿಯೊಂದು ಚಟುವಟಿಕೆಯನ್ನು ಪತ್ತೆ ಹಚ್ಚಬಹುದಾಗಿದೆ. ಆದ್ದರಿಂದ, ಯಾವುದೇ ವಿಚಾರದ ಬಗ್ಗೆ ಆನ್‌ಲೈನ್ ಟ್ರೋಲ್ ಮಾಡುವ ಮುನ್ನ ಎಚ್ಚರವಾಗಿರಿ. ಟ್ರೋಲ್‌ ಮಾಡಿದ್ದಕ್ಕಾಗಿ ನಿಮ್ಮ ಮೇಲೆ ಮೊಕದ್ದಮೆ ಹೂಡಿ ದಂಡ ವಸೂಲಿ ಮಾಡುವ ಅವಕಾಶ ಕಾನೂನಿನಲ್ಲಿದೆ. ಆದರೆ ಇದ್ಯಾವುದನ್ನು ತಿಳಿಯದೇ ಟ್ರೋಲರ್‌ ಒಬ್ಬರು ಈಗ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. 

ಮಾರ್ಟಿನ್ ಸ್ಟೀವರ್ಟ್ ಪಾಟ್ಸ್  (Martin Stewart Potts) ಅವರು ಬಿಸ್ಪ್ಯಾಮ್ ಕಿಚನ್ (Bispham Kitchen) ರೆಸ್ಟೋರೆಂಟ್‌ ಬಗ್ಗೆ ಹತ್ತು ನೆಗೆಟಿವ್‌ ವಿಮರ್ಶೆಗಳನ್ನು ಬರೆದಿದ್ದರು. ರೆಸ್ಟೋರೆಂಟ್‌ನ ಆಹಾರವು ತನಗೆ, ತನ್ನ  ಹೆಂಡತಿ ಮತ್ತು ಮಕ್ಕಳಿಗೆ ಅನಾರೋಗ್ಯವನ್ನುಂಟುಮಾಡಿದೆ ಎಂದು ಒಬ್ಬರು ನನ್ನ ಬಳಿ ಹೇಳಿಕೊಂಡಿದ್ದರು. ರೆಸ್ಟೋರೆಂಟ್‌ನ ಹ್ಯಾಡಾಕ್(ಮೀನು) ವಾಸ್ತವವಾಗಿ 'ಕ್ಯಾಟ್‌ಫಿಶ್' ಆಗಿದ್ದು, ಅವುಗಳ ಚಿಪ್ಸ್ ಅನ್ನು ಕರಟಿದ ಎಣ್ಣೆಯಿಂದ  ಹೊರೆದು ಮಾಡಲಾಗಿದೆ ಎಂದು ಅವರು ಆರೋಪಿಸಿದ್ದರು. 

ಇಂಗ್ಲೆಂಡ್‌(UK)ನ ಲಂಕಾಶೈರ್‌( Lancashire) ಸಮೀಪದ ಬ್ಲ್ಯಾಕ್‌ಪೂಲ್‌ (Blackpool)ನಲ್ಲಿರುವ ರೆಸ್ಟೋರೆಂಟ್‌ ಬಗ್ಗೆ 2018 ರ ಅಕ್ಟೋಬರ್ 23 ಮತ್ತು 2018 ರ ನವೆಂಬರ್ 16 ರ ನಡುವೆ ಎಂಟು ವಿಭಿನ್ನ ಬಳಕೆದಾರ ಹೆಸರಿನಲ್ಲಿ ನಕಲಿ ವಿಮರ್ಶೆಗಳನ್ನು ಪೋಸ್ಟ್ ಮಾಡಲಾಗಿತ್ತು. ಮೊದಲ ವಿಮರ್ಶೆಯಲ್ಲಿ ಈ ರೆಸ್ಟೋರೆಂಟ್‌ನಲ್ಲಿ ನೀವು ನಿಮ್ಮ ಮೀನು ಮತ್ತು ಚಿಪ್ಸ್ ಅನ್ನು ತಿನ್ನಲು ಪ್ರಯತ್ನಿಸುತ್ತಿರುವಾಗ ಮಾಲೀಕರು ನಿಮ್ಮನ್ನು ವಿಲಕ್ಷಣವಾಗಿ ನೋಡುತ್ತಾರೆ. ಇದು ಉತ್ತಮ ಅನುಭವವಲ್ಲ ಎಂದು ಬರೆಯಲಾಗಿತ್ತು. 

ಬ್ಯಾಕಿಂಗ್ ನಿಯಮ ಉಲ್ಲಂಘನೆ: HDFC ಬ್ಯಾಂಕ್‌ಗೆ 10 ಕೋಟಿ ರೂಪಾಯಿ ದಂಡ!

ಇದಕ್ಕೆ ರೆಸ್ಟೋರೆಂಟ್‌ ಮಾಲೀಕ ಸ್ಟೀವ್ ಹೊಡ್ಡಿ(Steve Hoddy) ಪ್ರತಿಕ್ರಿಯಿಸಿದರು. ಇದು ಟ್ರೋಲರ್‌  ಮಾರ್ಟಿನ್‌ ಅವರನ್ನು ಮತ್ತಷ್ಟು ಕೆರಳಿಸಿತು. ನಂತರ  ಮುಂದಿನ ಎರಡು ವಾರಗಳಲ್ಲಿ ಅವರು ಇನ್ನಷ್ಟು ನೆಗೆಟಿವ್‌ ಸುಳ್ಳು  ಕಾಮೆಂಟ್ಗಳನ್ನು ಬರೆದರು. ಈ ವಿಮರ್ಶೆಗಳು ಒಂದೇ ರೀತಿಯ ಕಾಗುಣಿತ ದೋಷಗಳನ್ನು ಹೊಂದಿದ್ದವು. ಹೀಗಾಗಿ ರೆಸ್ಟೋರೆಂಟ್‌ ಮಾಲೀಕ ಸ್ಟೀವ್ ಹೊಡ್ಡಿ ಅವರು ಇದು ಒಂದೇ ವ್ಯಕ್ತಿಯಿಂದ ಬರೆಯಲ್ಪಟ್ಟಿವೆ ಎಂಬುದನ್ನು ಗಮನಿಸಿದರು.

ಇತ್ತ ರೆಸ್ಟೋರೆಂಟ್‌ ಮಾಲೀಕ ಸ್ಟೀವ್ ಹೊಡ್ಡಿ ಕೇವಲ ಹೊಟೇಲ್‌ ಮಾಲೀಕನಾಗಿರಲಿಲ್ಲ. ಅವರು ಕೇಂಬ್ರಿಡ್ಜ್‌ ವಿವಿಯಿಂದ ಪ್ರಥಮ ದರ್ಜೆಯಲ್ಲಿ ವಕೀಲಿ ವೃತ್ತಿಯ ಪದವಿ ಪಡೆದಿದ್ದರು. ಹೀಗಾಗಿ ಅವರು ಮಾರ್ಟಿನ್‌ ಅವರ ನೆಗೆಟಿವ್‌ ವಿಮರ್ಶೆಗೆ ಕಾನೂನಿನ ಮೂಲಕ ಉತ್ತರ ನೀಡಲು ಮುಂದಾದಾಗ ಟ್ರೋಲರ್‌ ಮಾರ್ಟಿನ್‌ ತೀವ್ರ ಸಂಕಷ್ಟಕ್ಕೆ ಸಿಲುಕಿದರು. 

ರೆಸ್ಟೋರೆಂಟ್ ಮಾಲೀಕ ಸ್ಟೀವ್ ಹೊಡ್ಡಿ ಮೊದಲು ಈ ನಕಲಿ ವಿಮರ್ಶೆ ಮಾಡುತ್ತಿದ್ದ ಮಾರ್ಟಿನ್‌ನನ್ನು ಪತ್ತೆಹಚ್ಚಿ ಕ್ಷಮೆಯಾಚಿಸಲು ಕೇಳಿದರು. ಕ್ಷಮೆಯಾಚಿಸದಿದ್ದರೆ, ಮೊಕದ್ದಮೆ ಹೂಡುತ್ತೇನೆ ಎಂದು ಆತನಿಗೆ ಎಚ್ಚರಿಕೆ ಪತ್ರವನ್ನು ನೀಡಿದ್ದೆ. ಆದರೆ ತಾನು ಎರಡು ಕಾನೂನು ಪದವಿಗಳನ್ನು ಪಡೆದಿದ್ದೇನೆ ಆದರೂ ನಾನು ಬ್ಯಾರಿಸ್ಟರ್ ಆಗಿ ಅಭ್ಯಾಸ ಮಾಡುತ್ತಿಲ್ಲ ಎಂದು ಆತನಿಗೆ ತಿಳಿದಿರಲಿಲ್ಲ ಎಂದು  ಸ್ಟೀವ್ ಹೊಡ್ಡಿ ಹೇಳಿರುವುದಾಗಿ ಡೈಲಿ ಮೇಲ್ ವರದಿ ಮಾಡಿದೆ.

Internet at Risk: ಇಡೀ ಅಂತರ್ಜಾಲಕ್ಕೆ ಮಾರಕ Log4j ಸಾಫ್ಟ್‌ವೇರ್ ನ್ಯೂನತೆ: ಟೆಕ್‌ ಕಂಪನಿಗಳು ಹೇಳೋದೇನು?

ಆರಂಭದಲ್ಲಿ, ಮಾರ್ಟಿನ್‌ ಅವರು ಯಾವುದೇ ನಕಲಿ ವಿಮರ್ಶೆಗಳನ್ನು ಬರೆದಿದ್ದೇನೆ ಎಂಬುದನ್ನು ಒಪ್ಪಿಕೊಳ್ಳಲಿಲ್ಲ. ಆದರೆ ಒಮ್ಮೆ ಸಾಕ್ಷ್ಯ ಸಿದ್ಧಪಡಿಸಿಕೊಂಡ ಬಳಿಕ  ಅವರು ಮಾಡಿದ ಕಿತಾಪತಿಯನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಬೇರೆ ಆಯ್ಕೆ ಇರಲಿಲ್ಲ. ಜುಲೈನಲ್ಲಿ ನಡೆದ ವಿಚಾರಣೆಯ ವೇಳೆ  ನ್ಯಾಯಾಧೀಶ ಸೆಫ್ಟನ್ (Judge Sephton)ಅವರು ಮಾರ್ಟಿನ್‌ ದುರುದ್ದೇಶಪೂರಿತ ಸುಳ್ಳಿನ ಪ್ರಕರಣದಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದರು ಮತ್ತು ರೆಸ್ಟೋರೆಂಟ್‌ ಮಾಲೀಕ ಹೊಡ್ಡಿಗೆ ಪರಿಹಾರವಾಗಿ 7,455 ಪೌಂಡ್‌ ಅಂದರೆ ಭಾರತೀಯ ರೂಪಾಯಿಗೆ ಸರಿಗಟ್ಟಿದರೆ ಸುಮಾರು. 7.52 ಲಕ್ಷ ರೂಪಾಯಿಯನ್ನು ಪಾವತಿಸಲು ಆದೇಶಿಸಿದರು.

ಆನ್‌ಲೈನ್ ಟ್ರೋಲಿಂಗ್ ಈಗ ಹೆಚ್ಚಾಗಿದ್ದು, ಇತ್ತೀಚಿನ ದಿನಗಳಲ್ಲಿ ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ. ಇದೊಂದು ಸಾಂಕ್ರಾಮಿಕ ರೋಗವಾಗುತ್ತಿದ್ದು, ಇದರಿಂದ ವ್ಯವಹಾರಗಳು ಹಾಳಾಗುತ್ತಿವೆ ಎಂದು ರೆಸ್ಟೋರೆಂಟ್‌ ಮಾಲೀಕ ಹೊಡ್ಡಿ ಹೇಳಿದರು. ನಾನು ಈಗ 44 ವರ್ಷಗಳಿಂದ ಬಿಸ್ಪ್ಯಾಮ್ ಕಿಚನ್ ಅನ್ನು ಹೊಂದಿದ್ದೇನೆ ಮತ್ತು ಈ ರೀತಿಯ ಟ್ರೋಲ್‌ಗಳನ್ನೆಲ್ಲಾ ತಡೆದುಕೊಳ್ಳುವಷ್ಟು ನನ್ನ ವ್ಯವಹಾರವು ದೃಢವಾಗಿದೆ. ಆದರೆ ಈಗಷ್ಟೇ ಉದ್ಯಮ ಆರಂಭಿಸಿರುವ ವಿಶೇಷವಾಗಿ ಸಣ್ಣ ಸಣ್ಣ ಹೋಟೆಲ್‌ನವರಿಗೆ ಇದು ನಿಜವಾದ ಸಮಸ್ಯೆಯಾಗಿದೆ. ಏಕೆಂದರೆ ಜನ ನಿಜವಾಗಿಯೂ ಹೋಟೆಲ್ ವಿಮರ್ಶೆಗಳನ್ನು ನಂಬುತ್ತಾರೆ. ಏಕೆಂದರೆ ಅವರು ಹೋಟೆಲ್‌ಗಳಿಗೆ ಹೆಚ್ಚು ಖರ್ಚು ಮಾಡುತ್ತಿದ್ದಾರೆ ಎಂದು ಹೊಡ್ಡಿ ಹೇಳಿದರು. 

Follow Us:
Download App:
  • android
  • ios