ಮುಂದಿನ ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಜಿ20 ದೇಶಗಳ ಶೃಂಗ ಸಭೆಯಲ್ಲಿ ತಾವು ಬರಲು ಆಗುವುದಿಲ್ಲ. ತಮ್ಮ ಬದಲು ರಷ್ಯಾ ವಿದೇಶಾಂಗ ಸಚಿವ ಸಗೈಋು ಲಾವ್ರೋವ್‌ರನ್ನು ಕಳಿಸಲಾಗುವುದು ಎಂದು ಪುಟಿನ್‌ ಅವರು ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿ ತಿಳಿಸಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು. ಈ ವೇಳೆ ಮುಂದಿನ ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಜಿ20 ದೇಶಗಳ ಶೃಂಗ ಸಭೆಯಲ್ಲಿ ತಾವು ಬರಲು ಆಗುವುದಿಲ್ಲ. ತಮ್ಮ ಬದಲು ರಷ್ಯಾ ವಿದೇಶಾಂಗ ಸಚಿವ ಸಗೈಋು ಲಾವ್ರೋವ್‌ರನ್ನು ಕಳಿಸಲಾಗುವುದು ಎಂದು ಪುಟಿನ್‌ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಪುಟಿನ್‌ ವಿರುದ್ಧ ಉಕ್ರೇನ್‌ ಯುದ್ಧಾಪರಾಧಕ್ಕಾಗಿ ಅಂತಾರಾಷ್ಟ್ರೀಯ ಕೋರ್ಟ್‌ ವಾರಂಟ್‌ (international court warrant) ಇದೆ. ರಷ್ಯಾ ಬಿಟ್ಟು ಬೇರೆ ದೇಶಕ್ಕೆ ಹೋದರೆ ಬಂಧನದ ಭೀತಿ ಇದೆ. ಹೀಗಾಗಿ ಪುಟಿನ್‌ ಹೇಳಿಕೆಗೆ ಮಹತ್ವ ಬಂದಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪ್ರಧಾನಿ ಕಾರ್ಯಾಲಯ, ‘ಉಭಯ ನಾಯಕರು ಸೋಮವಾರ ದೂರವಾಣಿ ಮಾತುಕತೆ ನಡೆದಿರು. ಈ ವೇಳೆ ದ್ವಿಪಕ್ಷೀಯ ಸಹಕಾರದ ಕುರಿತು ಚರ್ಚಿಸಿದ್ದರ ಜೊತೆಗೆ, ಪರಸ್ಪರರಿಗೆ ಸಂಬಂಧಿತ ಪ್ರಾಂತೀಯ ಮತ್ತು ಜಾಗತಿಕ ವಿಷಯಗಳ ಕುರಿತೂ ಸಮಾಲೋಚಿಸಿದರು. ಈ ವೇಳೆ ಸೆ.9-10ರಂದು ದೆಹಲಿಯಲ್ಲಿ ನಡೆಯಲಲಿರುವ ಜಿ20 ಶೃಂಗ (G20 summit)ಸಭೆಯಲ್ಲಿ ಭಾಗಿಯಾಗಲಾರದ ಕುರಿತು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ರಷ್ಯಾದ ವಿದೇಶಾಂಗ ಸಚಿವರು ರಷ್ಯಾವನ್ನು ಪ್ರತಿನಿಧಿಸಲಿದ್ದಾರೆ ಎಂಬ ಮಾಹಿತಿ ನೀಡಿದರು. ಈ ವೇಳೆ ಭಾರತದ ಜಿ20 ಅಧ್ಯಕ್ಷತೆ ಅವಧಿಯಲ್ಲಿ ಕೈಗೊಂಡ ಕ್ರಮಗಳಿಗೆ ನಿರಂತರ ಬೆಂಬಲ ನೀಡುತ್ತಿರುವುದರ ಬಗ್ಗೆ ರಷ್ಯಾಕ್ಕೆ ಮೋದಿ ಧನ್ಯವಾದ ತಿಳಿಸಿದರು’ ಎಂದು ಮಾಹಿತಿ ನೀಡಿದೆ.

ಪುಟಿನ್‌ ವಿರುದ್ಧ ದಂಗೆ ಎದ್ದಿದ್ದ ಪ್ರಿಗೋಜಿನ್‌ ವಿಮಾನ ಅಪಘಾತದಲ್ಲಿ ಸಾವು?

ಇದೇ ವೇಳೆ, ಚಂದ್ರಯಾನ-3 ಯಶಸ್ಸಿಗೂ ಪುಟಿನ್‌ ಅಭಿನಂದನೆ ಸಲ್ಲಿಸಿದರು.

ಜಿ20 ಶೃಂಗಸಭೆಗೆ ಮುನ್ನ ಆತಂಕ: ದೆಹಲಿ ಖಲಿಸ್ತಾನ ಆಗುತ್ತೆ ಎಂದು ಮೆಟ್ರೋ ನಿಲ್ದಾಣಗಳಲ್ಲಿ ಗೀಚು ಬರಹ

ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಕೆ: ಪಾಕ್‌ ವಿರುದ್ಧ ರಷ್ಯಾ ಕೆಂಡ

ನವದೆಹಲಿ: ರಷ್ಯಾ ವಿರುದ್ಧದ ಯುದ್ಧದಲ್ಲಿ ಪಾಕಿಸ್ತಾನವು ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ ಎಂಬ ವರದಿಗಳನ್ನು ತಾನು ಗಂಭೀರವಾಗಿ ಪರಿಗಣಿಸಿರುವುದಾಗಿ ರಷ್ಯಾ ಎಚ್ಚರಿಸಿದೆ. ಈ ಕುರಿತು ಇಲ್ಲಿ ಪ್ರತಿಕ್ರಿಯೆ ನೀಡಿರುವ ಭಾರತದಲ್ಲಿನ ರಷ್ಯಾ ರಾಯಭಾರಿ ಡೆನಿಸ್‌ ಅಲಿಪೋವ್‌, ‘ಪಾಕಿಸ್ತಾನವು ಉಕ್ರೇನ್‌ಗೆ ಹಲವು ಶಸ್ತ್ರಾಸ್ತ್ರಗಳನ್ನು ಪೂರೈಸಿದೆ ಎಂಬ ವರದಿಗಳನ್ನು ನಾವು ಗಮನಿಸಿದ್ದೇವೆ. ಈ ಬೆಳವಣಿಗೆ ಯುದ್ಧದ ಮೇಲೆ ಪರಿಣಾಮ ಬೀರುವುದರ ಜೊತೆಗೆ ರಷ್ಯಾ ವಿರೋಧಿ ಕೃತ್ಯ ಎನ್ನಿಸಿಕೊಳ್ಳುತ್ತದೆ. ಇದರ ಮೇಲೆ ನಾವು ನಿಗಾ ಇಟ್ಟಿದ್ದೇವೆ. ಇದನ್ನು ನಾವು ಕಡೆಗಣಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.