HailStorms in Spain: ಆಲಿಕಲ್ಲು ಬಿದ್ದು 20 ತಿಂಗಳ ಮಗು ಬಲಿ, 50 ಮಂದಿಗೆ ಗಾಯ: ನೆಟ್ಟಿಗರ ದಿಗ್ಭ್ರಮೆ
ಹವಾಮಾನ ಸಂಸ್ಥೆ ಮೆಟಿಯೋಕ್ಯಾಟ್ (Meteocat) ಪ್ರಕಾರ, ಈ ಆಲಿಕಲ್ಲುಗಳು ಕ್ಯಾಟಲೋನಿಯಾದಲ್ಲಿ (Catalonia) 2 ದಶಕಗಳಲ್ಲೇ ದಾಖಲಾದ ಅತಿ ದೊಡ್ಡದಾಗಿದೆ. ಅಲ್ಲದೆ, ಈ ಪ್ರದೇಶದ ಕೆಲವು ಭಾಗಗಳಲ್ಲಿ ಚಂಡಮಾರುತದ ಎಚ್ಚರಿಕೆಯನ್ನೂ ನೀಡಲಾಗಿದೆ.
ಕರ್ನಾಟಕದ ಹಲವೆಡೆ ಹಾಗೂ ದೇಶದ ಬಹುತೇಕ ಕಡೆ ಭಾರಿ ಮಳೆಯಾಗುತ್ತಿರುವ (Heavy Rain) ಸುದ್ದಿಗಳನ್ನು ನೀವು ನೋಡುತ್ತಿದ್ದೀರಾ ಅಥವಾ ಓದುತ್ತಿದ್ದೀರಾ. ಇನ್ನೊಂದೆಡೆ, ಸ್ಪೇನ್‌ನಲ್ಲೂ ಮಳೆಯ ಕಾಟ ಅಷ್ಟಿಷ್ಟಲ್ಲ, ಅದೂ ಆಲಿಕಲ್ಲು ಮಳೆ (HailStorms). ಒಂದು ಭಯಾನಕ ಘಟನೆಯಲ್ಲಿ, ಸ್ಪೇನ್‌ನ ಲಾ ಬಿಸ್ಬಾಲ್ ಡಿ ಎಂಪೋರ್ಡಾ( La Bisbal d'Empordà) ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ 10 ಸೆಂಟಿಮೀಟರ್ ವ್ಯಾಸದವರೆಗಿನ ಮುಷ್ಟಿ ಗಾತ್ರದ ಆಲಿಕಲ್ಲು ಮಳೆಯಾಗಿದೆ. ಆಲಿಕಲ್ಲು ಬಿದ್ದು 20 ತಿಂಗಳ ಮಗು ಮೃತಪಟ್ಟಿದೆ (Baby Death) ಎಂದು ತಿಳಿದುಬಂದಿದೆ, ಅಲ್ಲದೆ ಸುಮಾರು 50 ಜನರಿಗೆ ಗಾಯಗಳನ್ನು ಉಂಟುಮಾಡಿದೆಯಂತೆ. ಹೆಚ್ಚು ಜನರಿಗೆ ಮೂಳೆ ಮುರಿತ ಮತ್ತು ಮೂಗೇಟುಗಳು ಸಂಭವಿಸಿದೆ ಎಂದು ಹೇಳಲಾಗಿದೆ.
ಹವಾಮಾನ ಸಂಸ್ಥೆ ಮೆಟಿಯೋಕ್ಯಾಟ್ (Meteocat) ಪ್ರಕಾರ, ಈ ಆಲಿಕಲ್ಲುಗಳು ಕ್ಯಾಟಲೋನಿಯಾದಲ್ಲಿ (Catalonia) 2 ದಶಕಗಳಲ್ಲೇ ದಾಖಲಾದ ಅತಿ ದೊಡ್ಡದಾಗಿದೆ. ಅಲ್ಲದೆ, ಈ ಪ್ರದೇಶದ ಕೆಲವು ಭಾಗಗಳಲ್ಲಿ ಚಂಡಮಾರುತದ ಎಚ್ಚರಿಕೆಯನ್ನೂ ನೀಡಲಾಗಿದ್ದು, ಇದರಿಂದ ಮತ್ತಷ್ಟು ಹಾನಿಯಾಗಲಿದೆ ಎಂಬ ಆತಂಕ ಮೂಡಿದೆ.
Kodagu Rain : ಜಿಲ್ಲೆಯಲ್ಲಿ ಇಂದಿನ ಮಳೆ ಪ್ರಮಾಣ; ಇಲ್ಲಿದೆ ವಿವರ
ಈ ವಿದ್ಯಮಾನದಿಂದ ದಿಗ್ಭ್ರಮೆಗೊಂಡ ನೆಟ್ಟಿಗರು ತಮ್ಮ ಟ್ವಿಟ್ಟರ್ (Twitter) ಹ್ಯಾಂಡಲ್‌ಗಳಲ್ಲಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ ಹಾಗೂ ಚಿತ್ರಗಳು ಮತ್ತು ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. “ಪ್ರಕೃತಿಗೆ ತನ್ನದೇ ಆದ ಬಂದೂಕು ಇದೆ. ನಾವು ಅದನ್ನು ನೈಸರ್ಗಿಕ ರೀತಿಯಲ್ಲಿ ಗೌರವಿಸದಿದ್ದರೆ ಅದು ತನ್ನ ಬಂದೂಕನ್ನು ಬಳಸುತ್ತದೆ. ಸ್ಪೇನ್‌ನಲ್ಲಿ 24 ಗಂಟೆಗಳ ಹಿಂದೆ ಸಂಭವಿಸಿದ ಆಲಿಕಲ್ಲು ಮಳೆಯನ್ನು ನೋಡಿ. ಆಗಸ್ಟ್ ಕೊನೆಯ ದಿನದಲ್ಲಿ ಗಂಟೆಗೆ 100 ಕಿಮೀ ವೇಗದಲ್ಲಿ ಆಲಿಕಲ್ಲು ಕೆಳಗೆ ಬಿದ್ದು 20 ತಿಂಗಳ ಮಗು ಸಾವನ್ನಪ್ಪಿದೆ. ಜಾಗತಿಕ ತಾಪಮಾನ ಪ್ರಮುಖವಾಗಿದೆ ಮತ್ತು ಅನೇಕ ಪರಿಣಾಮಗಳನ್ನು ಹೊಂದಿದೆ" ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬ ವ್ಯಕ್ತಿ, "ಸುಂಟರಗಾಳಿಗಳು, ಚಂಡಮಾರುತಗಳು ಅಲ್ಲದೆ, ಭೂಮಿಯ ಮೇಲೆ ಗಾಳಿಯ ವೇಗವು 140-180 ಕ್ಕೆ ಹೆಚ್ಚಾಗುತ್ತದೆ. ಒಮ್ಮೆ ನೋಡಿ’’ ಎಂದು ಆಲಿಕಲ್ಲಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇನ್ನು, @WeatherWupk ಹೆಸರಿನ ಬಳಕೆದಾರರು ಅಲಿಕಲ್ಲು ಮಳೆ ಬರುತ್ತಿರುವ ವಿಡಿಯೋ ಅಪ್ಲೋಡ್ ಮಾಡಿದ್ದು, ಪಟ ಪಟ ಎಂದು ಮಳೆಯ ಜತೆಗೆ ಬೀಳುತ್ತಿರುವ ಆಲಿಕಲ್ಲುಗಳನ್ನು ನೋಡಿದರೆ ಸ್ಫೇನ್‌ನ ಪರಿಸ್ಥಿತಿ ನಮ್ಮ ಅರಿವಿಗೆ ಬರಬಹುದು. ಅಲ್ಲದೆ, ಬಳಕೆದಾರರು, ‘’ಸ್ಪೇನ್‌ನಲ್ಲಿ ಆಲಿಕಲ್ಲು ಮಳೆ: ಆಗಸ್ಟ್ 30 ರಂದು ಸ್ಪೇನ್‌ನ ಕ್ಯಾಟಲೋನಿಯಾ ಪ್ರದೇಶದಲ್ಲಿ ಸುಮಾರು 50 ಜನರು ಗಾಯಗೊಂಡಿದ್ದಾರೆ ಮತ್ತು 20 ತಿಂಗಳ ಪುಟ್ಟ ಮಗು ಸಾವನ್ನಪ್ಪಿದೆ. 4 ಇಂಚುಗಳಷ್ಟು (10 ಸೆಂಟಿಮೀಟರ್) ವ್ಯಾಸದ ಆಲಿಕಲ್ಲುಗಳು ಬಿದ್ದಿದ್ದು, ಈ ಪೈಕಿ ದೊಡ್ಡ ಆಲಿಕಲ್ಲು ಮಗುವಿನ ತಲೆಗೆ ಬಡಿದ ನಂತರ ಮಗು ಮೃತಪಟ್ಟಿದೆ ಎಂದು ವರದಿಯಾಗಿದೆ.
Bengaluru Rain: ಸಂಜೆ 4 ಗಂಟೆಗೆ ಸಿಎಂ ಬೊಮ್ಮಾಯಿ ಸಿಟಿ ರೌಂಡ್ಸ್
ಕಲ್ಲುಗಳ ಗಾತ್ರದಿಂದಾಗಿ ಹಲವು ಕಾರುಗಳಿಗೆ ಹಾನಿಯಾಗಿರುವ ವರದಿಯಾಗಿದೆ. ಅಪರೂಪದ ಮೆಡಿಟರೇನಿಯನ್ ಚಂಡಮಾರುತಗಳಿಗೆ (Mediterranean Hurricanes) ಸಿಲುಕಿಕೊಳ್ಳಬಹುದು ಎಂದು ಈ ತಿಂಗಳ ಆರಂಭದಲ್ಲಿ ಸ್ಪೇನ್‌ಗೆ ಪ್ರಯಾಣಿಸುತ್ತಿದ್ದ ಪ್ರವಾಸಿಗರಿಗೆ (Tourists) ಎಚ್ಚರಿಕೆ ನೀಡಲಾಗಿತ್ತು. ಮೆಡಿಕೇನ್ಸ್ (Medicanes) ಎಂದು ಕರೆಯಲ್ಪಡುವ ಉಷ್ಣವಲಯದ ತರಹದ ಚಂಡಮಾರುತಗಳ ಅಪಾಯ ಹೆಚ್ಚಾಗಿದೆ ಎಂದು ತಜ್ಞರು ಹೇಳಿದ್ದಾರೆ.