ಇನ್‌ಸ್ಟಾಗ್ರಾಂ ಕೇವಲ ಹುಡುಗಿಯರಿಗೆ ಮಾತ್ರ, ಅದರಿಂದ ಬೇರೆ ಏನೂ ಪ್ರಯೋಜನವಿಲ್ಲ. ಈ ಹೇಳಿಕೆ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ. ಎಲಾನ್ ಮಸ್ಕ್ ವಿವಾದಿತ ಕಮೆಂಟ್ಸ್ ವಿವಾದಕ್ಕೆ ಕಾರಣವಾಗಿದೆ. ಆದರೆ ಮಸ್ಕ್ ಉದ್ದೇಶಪೂರ್ವಕವಾಗಿ ಈ ವಿವಾದ ಸೃಷ್ಟಿಸಿದ್ರಾ?

ನ್ಯೂಯಾರ್ಕ್ (ಅ.02) ಸೋಶಿಯಲ್ ಮೀಡಿಯಾಗಳಲ್ಲಿ ಇನ್‌ಸ್ಟಾಗ್ರಾಂ ಬಹುತೇಕ ಎಲ್ಲರೂ ಬಳಸುತ್ತಾರೆ. ವೈಯುಕ್ತಿಕ ಫೋಟೋಗಳು, ವಿಡಿಯೋ, ರೀಲ್ಸ್ ಸೇರಿದಂತೆ ಹಲವು ಪೋಸ್ಟ್‌ಗಳ ಮೂಲಕ ಹಲವರು ಸಕ್ರಿಯವಾಗಿರುತ್ತಾರೆ. ಇದೇ ಇನ್‌ಸ್ಟಾಗ್ರಾಂ ಮೂಲಕ ರೀಲ್ಸ್ ಸ್ಟಾರ್, ಕಂಟೆಂಟ್ ಕ್ರಿಯೇಟರ್ ಆಗಿಯೂ ಆದಾಯ ಪಡೆಯುತ್ತಿದ್ದಾರೆ. ಆದರೆ ಇನ್‌ಸ್ಟಾಗ್ರಾಂ ಪ್ರಯೋಜನಕ್ಕೆ ಬಾರದ ಆ್ಯಪ್? ಅನ್ನೋ ಹೇಳಿಕೆ ಇದೀಗ ಕೋಲಾಹಲ ಸೃಷ್ಟಿಸಿದೆ. ಎಕ್ಸ್ ಬಳಕೆದಾರ ತನ್ನ ಇನ್‌ಸ್ಟಾಗ್ರಾಂ ಖಾತೆ ಡಿಲೀಟ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ತಕ್ಷಣವೇ ಉದ್ಯಮಿ ಎಲಾನ್ ಮಸ್ಕ್ ಪ್ರತಿಕ್ರಿಯಿಸಿದ್ದಾರೆ. ಇನ್‌ಸ್ಟಾಗ್ರಾಂ ಕೇವಲ ಹುಡುಗಿಯರಿಗೆ ಇರುವ ಆ್ಯಪ್ ಎಂದು ವಿವಾದ ಸೃಷ್ಟಿಸಿದ್ದಾರೆ.

ಎಲಾನ್ ಮಸ್ಕ್ ಲಿಂಗ ಭೇದ ವಿವಾದ

ಎಕ್ಸ್ ಬಳಕೆದಾರ ಜೈಗೆರ್ ಕ್ಯಾಪಿಟಲ್ ತನ್ನ ಖಾತೆಯಲ್ಲಿ, ನಾನು ಅಧಿಕೃವಾಗಿ ಇನ್‌ಸ್ಟಾಗ್ರಾಂ ಖಾತೆಯನ್ನು ಡಿಲೀಟ್ ಮಾಡಿದ್ದೇನೆ. ಇದೊಂದು ಮಹಿಳಾ ಪ್ರಧಾನ ಆ್ಯಪ್. ಇದರಿಂದ ಶೂನ್ಯ ಲಾಭ ಎಂದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಅಷ್ಟೇನು ವೈರಲ್ ಆಗಿರಲಿಲ್ಲ, ಸಂಚಲನವೂ ಸೃಷ್ಟಿರಲಿಲ್ಲ. ಆದರೆ ಇದೇ ಪೋಸ್ಟ್‌ಗೆ ಎಲಾನ್ ಮಸ್ಕ್ ಪ್ರತಿಕ್ರಿಯಿಸಿದ್ದಾರೆ. ಇನ್‌ಸ್ಟಾಗ್ರಾಂ ಹುಡುಗಿಯರ ಆ್ಯಪ್ ಎಂದು ಕಮೆಂಟ್ಸ್ ಮಾಡಿದ್ದಾರೆ. ಇದರ ಬೆನ್ನಲ್ಲೇ ವಿವಾದ ಶುರುವಾಗಿದೆ. ಎಲಾನ್ ಮಸ್ಕ್ ಲಿಂಗ ಭೇದ ಮಾಡಿದ್ದಾರೆ. ಬಹುತೇಕರ ಬಳಸುವ ಇನ್‌ಸ್ಟಾಗ್ರಾಂ ಆ್ಯಪ್ ವಿರುದ್ದ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂಬ ಆರೋಪಗಳು, ಟೀಕೆಗಳು ಕೇಳಿಬಂದಿದೆ.

ಎಸ್ಕ್ ಕಮೆಂಟ್‌ಗೆ ಟೀಕೆ

ಇನ್‌ಸ್ಟಾಗ್ರಾಂ ಬಳಸುವ ಪುರುಷರನ್ನು ಎಲಾನ್ ಮಸ್ಕ್ ಅಪಮಾನಿಸಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿದೆ. ಎಲಾನ್ ಮಸ್ಕ್ ಮಾಲೀಕತ್ವದ ಎಕ್ಸ್ ಏನು ಎಂದು ಹಲವರು ಪ್ರಶ್ನಿಸಿದ್ದಾರೆ. ಎಕ್ಸ್ ಪುರುಷರ ಆ್ಯಪ್ ಎಂದು ಹಲವರು ಟೀಕಿಸಿದ್ದಾರೆ. ಎಲಾನ್ ಮಸ್ಕ್ ಸುಖಾಸುಮ್ಮನೆ ಪೋಸ್ಟ್ ಮಾಡುತ್ತಿದ್ದಾರೆ. ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಎಲಾನ್ ಮಸ್ಕ್ ಪುರುಷರನ್ನು ಮಾತ್ರ ಇಷ್ಟಪಡುತ್ತಾರೆ. ಇದನ್ನು ಯಾವ ಅರ್ಥದಲ್ಲಿ ತೆಗೆದುಕೊಂಡರೂ ಒಕೆ ಎಂದು ಹಲವರು ಕಮೆಂಟ್ಸ್ ಮಾಡಿದ್ದಾರೆ. ಪುರುಷರ ಬಗ್ಗೆ ಮಾತ್ರ ಕಾಳಜಿ ಇರುವ ಎಲಾನ್ ಮಸ್ಕ್‌ನಿಂದ ಏನು ನಿರೀಕ್ಷಿಸಲು ಸಾಧ್ಯ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಮಸ್ಕ್ ವಿವಾದಿತ ಕಮೆಂಟ್ ಹಿಂದಿನ ಉದ್ದೇಶವೇನು?

ಕಳೆದ ಕೆಲ ತಿಂಗಳಿನಿಂದ ಸೋಶಿಯಲ್ ಮೀಡಿಯಾದಲ್ಲಿ ಹಲವು ಬದಲಾವಣೆ ಕಾಣುತ್ತಿದೆ. ಹಲವು ಪ್ಲಾಟ್‌ಫಾರ್ಮ್‌ಗಳು ಟ್ರೆಂಡಿಂಗ್‌ನಲ್ಲಿ ಮುಂಚೂಣಿಯಲ್ಲಿದೆ. ಆದರೆ ಎಕ್ಸ್ ಕೊಂಚ ಸೊರಗಿದೆ ಅನ್ನೋ ವರದಿಗಳು ಬಹಿರಂಗವಾಗಿದೆ. ಇದರ ಬೆನ್ನಲ್ಲೇ ಎಕ್ಸ್‌ನಲ್ಲಿ ವಿವಾದ ಸೃಷ್ಟಿಸಿ ಟ್ರೆಂಡ್ ಸೆಟ್ ಮಾಡಲು ಎಲಾನ್ ಮಸ್ಕ್ ಬಯಸಿದ್ದಾರೆ. ಅನಗತ್ಯ ಮಾತುಗಳು, ಕಮೆಂಟ್ಸ್ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಿ, ಎಕ್ಸ್ ಚಾಲ್ತಿಯಲ್ಲಿರುವಂತೆ ಮಾಡುವ ಉದ್ದೇಶವಿದೆಯಾ ಅನ್ನೋ ಪ್ರಶ್ನೆಗಳು ಎದುರಾಗಿದೆ.