Asianet Suvarna News Asianet Suvarna News

ವಿಶ್ವಸಂಸ್ಥೆ ಸಭೆಯಲ್ಲಿ ಪಾಕ್‌ ಪ್ರಧಾನಿಗೆ ಬೆವರಿಳಿಸಿದ ಭಾರತದ ಪ್ರತಿನಿಧಿ ಸ್ನೇಹಾ

  • ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಭಾರತದ ವಿರುದ್ಧ ಸುಳ್ಳು ಪ್ರಚಾರ ಮಾಡಿದ ಪಾಕ್‌
  • ಪಾಕ್‌ ಪ್ರಧಾನಿಗೆ ಬೆವರಿಳಿಸಿದ ಭಾರತದ ಪ್ರತಿನಿಧಿ
Indias gives strong reply to Pakistan PM Imran Khans false & malicious propaganda at UNGA dpl
Author
Bangalore, First Published Sep 25, 2021, 5:06 PM IST

ನ್ಯೂಯಾರ್ಕ್(ಸೆ.25): ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ(UNGA) ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ಭಾರತದ ಪ್ರತಿನಿಧಿ ಸ್ನೇಹಾ ದುಬೆ ಖಡಕ್ ಉತ್ತರ ಕೊಟ್ಟಿರುವ ಘಟನೆ ನಡೆದಿದೆ. ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಭಾರತದ ವಿರುದ್ಧ ಸುಳ್ಳು ಪ್ರಚಾರ ಮಾಡಿದ ಪಾಕ್‌ ಪ್ರಧಾನಿಗೆ ಭಾರತದ ಪ್ರತಿನಿಧಿ ಬೆವರಿಳಿಸಿದ್ದಾರೆ. ಇಮ್ರಾನ್ ಖಾನ್(Imran Khan) ಅವರ ವರ್ಚುವಲ್ ಭಾಷಣಕ್ಕೆ ಪ್ರತ್ಯುತ್ತರ ಕೊಟ್ಟ ಸ್ನೇಹಾ ದುಬೆ, ಇದು ಬರೀ ಸುಳ್ಳು ಮತ್ತು ಅಪಪ್ರಚಾರವಾಗಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ಪ್ರಧಾನಿಗೆ ಮಾತಿನೇಟು ಕೊಟ್ಟ ಸ್ನೇಹಾ ದುಬೆ, ವಿಶ್ವಸಂಸ್ಥೆ(United Nations) ಅಗತ್ಯ ವಿಚಾರಗಳನ್ನು ಚರ್ಚಿಸಲು ನೀಡಿರುವ ಈ ವೇದಿಕೆಯನ್ನು ಪಾಕ್ ಪ್ರಧಾನಿ ದುರುಪಯೋಗಪಡಿಸುತ್ತಿರುವುದು ಇದೇ ಮೊದಲಲ್ಲ. ನನ್ನ ದೇಶದ ವಿರುದ್ಧ ಇದೇ ರೀತಿ ಕೆಟ್ಟ ಹಾಗೂ ಸುಳ್ಳು ವಿಚಾರವನ್ನು ಪ್ರಚಾರ ಮಾಡಲು ಈ ವೇದಿಕೆಯನ್ನು ಬಳಸುತ್ತಿದ್ದಾರೆ. ಉಗ್ರರಿಗೆ ಉಚಿತ ಪಾಸ್ ಕೊಡುವ ದೇಶ ತನ್ನ ಅತ್ಯಂತ ಶೋಚನೀಯ ಸ್ಥಿತಿಯಿಂದ ವಿಶ್ವದ ಪ್ರಮುಖ ರಾಷ್ಟ್ರಗಳ ಗಮನ ಬೇರೆಡೆ ಸೆಳೆಯುವ ಕೆಲಸವನ್ನು ಮಾಡುತ್ತಲೇ ಬಂದಿದೆ ಎಂದಿದ್ದಾರೆ.

ಅಫ್ಘಾನ್‌ಗೆ ಬಂದ ಪಾಕ್ ಟ್ರಕ್ ಧ್ವಜ ಕಿತ್ತೆಸೆದ ತಾಲೀಬಾನ್..!

ವರ್ಚುವಲ್ ಭಾಷಣದ ವೇಳೆ ಪಾಕ್ ಪ್ರಧಾನಿ ಕಾಶ್ಮೀರ(Kashmir) ವಿವಾದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಇತ್ತೀಚಿನ ಹಲವು ಭಾಷಣಗಳಲ್ಲಿ ಮಾಡಿರುವಂತೆ ಸುಮ್ಮನ್ನೇ ಭಾರತವನ್ನು ಟೀಕಿಸಿ ಕಾಶ್ಮೀರ ವಿವಾದದ ಅದೇ ವಿಚಾರಗಳನ್ನು ಮತ್ತೆ ಹೇಳಿದ್ದಾರೆ. ಪಾಕಿಸ್ತಾನವು ಭಯೋತ್ಪಾದಕರನ್ನು ಆಶ್ರಯಿಸುವ, ಅವರಿಗೆ ಸಹಾಯ ಮಾಡುವ ಮತ್ತು ಸಕ್ರಿಯವಾಗಿ ಬೆಂಬಲಿಸುವ ಇತಿಹಾಸ ಮತ್ತು ನೀತಿಯನ್ನು ಅನುಸರಿಸಿಕೊಂಡು ಬಂದಿರುವುದು ಸದಸ್ಯ ರಾಷ್ಟ್ರಗಳಿಗೆ ತಿಳಿದಿದೆ ಎಂದು ಭಾರತೀಯ ಪ್ರತಿನಿಧಿ ಸ್ನೇಹಾ ಒತ್ತಿ ಹೇಳಿದ್ದಾರೆ. ಇಸ್ಲಾಮಾಬಾದ್ ತನ್ನ ಕಾನೂನುಬಾಹಿರ ಆಕ್ರಮಣದ ಅಡಿಯಲ್ಲಿ ಇಟ್ಟಿರುವ ಎಲ್ಲಾ ಪ್ರದೇಶಗಳನ್ನು ತಕ್ಷಣವೇ ತೊರೆಯುವಂತೆ ಹೇಳಿದ್ದಾರೆ.

Indias gives strong reply to Pakistan PM Imran Khans false & malicious propaganda at UNGA dpl

ಪಾಕಿಸ್ತಾನ ಭಯೋತ್ಪಾದಕರಿಗೆ ಬಹಿರಂಗವಾಗಿ ಬೆಂಬಲಿಸುವ, ತರಬೇತಿ ನೀಡುವ, ಹಣಕಾಸು ಒದಗಿಸುವ ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸುವ ರಾಜ್ಯ ನೀತಿ ಎಂದು ಜಾಗತಿಕವಾಗಿ ಗುರುತಿಸಲ್ಪಟ್ಟ ದೇಶ ಎಂದು ದುಬೆ ಹೇಳಿದ್ದಾರೆ.

ಅಪ್ಘಾನಿಸ್ತಾನ ಗಡಿಯಲ್ಲಿ ಪಾಕಿಸ್ತಾನಕ್ಕೆ ಅವಮಾನ, ಧ್ವಜಕ್ಕೂ ಇಲ್ಲ ಜಾಗ!

ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿದ್ದು, ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿದೆ. ಇದು ಪಾಕಿಸ್ತಾನದ ಅಕ್ರಮ ಆಕ್ರಮಣದಲ್ಲಿರುವ ಪ್ರದೇಶಗಳನ್ನು ಒಳಗೊಂಡಿದೆ. ಪಾಕಿಸ್ತಾನ ತನ್ನ ಕಾನೂನುಬಾಹಿರ ಆಕ್ರಮಣದ ಅಡಿಯಲ್ಲಿ ಎಲ್ಲಾ ಪ್ರದೇಶಗಳನ್ನು ತಕ್ಷಣವೇ ಖಾಲಿ ಮಾಡುವಂತೆ ನಾವು ಕರೆ ನೀಡುತ್ತೇವೆ ಎಂದಿದ್ದಾರೆ ಭಾರತದ ಪ್ರತಿನಿಧಿ.

ಅಫ್ಘಾನ್‌ ವಿಚಾರದಲ್ಲಿ ಮೂಗು ತೂರಿಸಿದ್ದಕ್ಕೆ ಪಾಕ್‌ಗೆ ಕ್ಲಾಸ್:

ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶೃಂಗಾಲ ಅವರು ಪಾಕ್ ವಿರುದ್ಧ ವಾಗ್ದಾಳಿ ನಡೆಸಿ, ಭಾರತದ ನೆರೆ ಹೊರೆಯಲ್ಲಿ ಸಮಸ್ಯೆ ಸೃಷ್ಟಿಸುತ್ತಿರುವುದಕ್ಕಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ದ್ವಿಪಕ್ಷೀಯ ಚರ್ಚೆಗಳಲ್ಲಿ ಹಾಗೂ ವೇದಿಕೆಗಳಲ್ಲಿ ಸ್ಪಷ್ಟವಾದ ಅರ್ಥವಿದೆ. ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನದ ಪಾತ್ರವನ್ನು ಹೆಚ್ಚು ಎಚ್ಚರಿಕೆಯಿಂದ ಪರೀಕ್ಷಿಸಿ ಮೇಲ್ವಿಚಾರಣೆ ಮಾಡುವುದು ಅಗತ್ಯ ಎಂದಿದ್ದಾರೆ.

Follow Us:
Download App:
  • android
  • ios