Asianet Suvarna News Asianet Suvarna News

ಅಪ್ಘಾನಿಸ್ತಾನ ಗಡಿಯಲ್ಲಿ ಪಾಕಿಸ್ತಾನಕ್ಕೆ ಅವಮಾನ, ಧ್ವಜಕ್ಕೂ ಇಲ್ಲ ಜಾಗ!

* ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ

* ಅಪ್ಘಾನ್‌ ವಶಪಡಿಸಿಕೊಳ್ಳಲು ಉಗ್ರರಿಗೆ ಸಹಾಯ ಮಾಡಿದ್ದ ಪಾಕಿಸ್ತಾನಕ್ಕೆ ಅವಮಾನ

* ಗಡಿಯಲ್ಲಿ ನಡೆಯಿತು ಶಾಕಿಂಗ್ ಘಟನೆ

 

Taliban arrests four border guards for removing Pak flag from truck carrying aid pod
Author
Bangalore, First Published Sep 22, 2021, 3:57 PM IST
  • Facebook
  • Twitter
  • Whatsapp

ಕಾಬೂಲ್(ಸೆ22): ಪಾಕಿಸ್ತಾನ(Pakistan)ವು ಅಫ್ಘಾನಿಸ್ತಾನದಲ್ಲಿ ಭಾರೀ ಅವಮಾನವನ್ನು ಎದುರಿಸುತ್ತಿದೆ. ಹೀಗಿದ್ದರೂ ಷಡ್ಯಂತ್ರ ರೂಪಿಸುವ ದುರಾಸೆಯಿಂದ ಅದು ಮೌನ ವಹಿಸಿದೆ. ತಾಲಿಬಾನ್‌ ಉಗ್ರರನ್ನು ಸಮಾಧಾನಪಡಿಸಲು, ಪಾಕಿಸ್ತಾನ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿತ್ತು. ಆದರೆ ಈ ಸಾಮಗ್ರಗಳನ್ನು ಸಾಗಿಸುತ್ತಿದ್ದ ಟ್ರಕ್‌ಗಳಲ್ಲಿ ಪಾಕಿಸ್ತಾನ ಧ್ವಜಗಳಿದ್ವು. ಆದರೆ ಗಡಿಯಲ್ಲಿ ಈ ಧ್ವಜವನ್ನು ಕೆಳಗಿಳಿಸಲಾಗಿದೆ.

ಇನ್ನು ಈ ಘಟನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪಾಕಿಸ್ತಾನಿಗಳು ಅವಮಾನದ ಅರಿವಾಗಿದೆ. ಹೀಗಾಗಿ ಕೂಡಲೇ ತಮ್ಮ ಅಸಮಾಧಾನ ಹೊರಹಾಕಲು ಆಆರಂಭಿಸಿದ್ದಾರೆ. ಇನ್ನು ಅತ್ತ ಬೆಳೆಯುತ್ತಿರುವ ವಿವಾದವನ್ನು ಗಮನಿಸಿದ, ತಾಲಿಬಾನ್(Taliban) ಕೂಡ ಇದಕ್ಕಾಗಿ ವಿಷಾದ ವ್ಯಕ್ತಪಡಿಸಿದೆ ಮತ್ತು ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.

ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ.

278 ಟನ್ ಆಹಾರ ಪದಾರ್ಥ ಕಳುಹಿಸಿದ ಪಾಕಿಸ್ತಾನ 

ಪಾಕಿಸ್ತಾನ ಸರ್ಕಾರ ಹದಿನೇಳು ಟ್ರಕ್‌ಗಳಲ್ಲಿ ಸುಮಾರು 278 ಟನ್ ಆಹಾರ ಪದಾರ್ಥಗಳನ್ನು ಅಫ್ಘಾನಿಸ್ತಾನ(Afghanistan)ಕ್ಕೆ ಕಳುಹಿಸಿತ್ತು. ಇದರಲ್ಲಿ 65 ಟನ್ ಸಕ್ಕರೆ, ಮೂರು ಟನ್ ಬೇಳೆಕಾಳು, 190 ಟನ್ ಹಿಟ್ಟು, 11 ಟನ್ ಅಡುಗೆ ಎಣ್ಣೆ, 31 ಟನ್ ಅಕ್ಕಿ ಸೇರಿವೆ. ಚಳಿಗಾಲದ ದೃಷ್ಟಿಯಿಂದ, ಪಾಕಿಸ್ತಾನವು ಇಲ್ಲಿ ಡೇರೆಗಳು ಮತ್ತು ಹೊದಿಕೆಗಳನ್ನು ಕಳುಹಿಸಲು ವ್ಯವಸ್ಥೆ ಮಾಡುತ್ತಿದೆ.

Follow Us:
Download App:
  • android
  • ios